ಸಾರಾಂಶ
ರಾಮನಗರ: ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಲೇಬೇಕು. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದ್ದು, ಹೈನುಗಾರರು ಸಿದ್ಧರಾಗಬೇಕು ಎಂದು ಬಮೂಲ್ ನಿರ್ದೇಶಕ ಪಿ.ನಾಗರಾಜು ಕರೆ ನೀಡಿದರು.
ರಾಮನಗರ: ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಲೇಬೇಕು. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದ್ದು, ಹೈನುಗಾರರು ಸಿದ್ಧರಾಗಬೇಕು ಎಂದು ಬಮೂಲ್ ನಿರ್ದೇಶಕ ಪಿ.ನಾಗರಾಜು ಕರೆ ನೀಡಿದರು.
ನಗರದ ಹೊರವಲಯದಲ್ಲಿ ಬುಧವಾರ ನಡೆದ ಹಾಲಿನ ಡೇರಿ ಕಾರ್ಯದರ್ಶಿಗಳ ಸಭೆಯಲ್ಲಿ ಹೈನುಗಾರರ ಹೋರಾಟದ ರೂಪುರೇಷೆಗಳ ಕುರಿತು ಮಾತನಾಡಿದ ಅವರು, ಹೋರಾಟಕ್ಕೆ ಸೂಕ್ತ ದಿನಾಂಕ ನಿಗದಿ ಮಾಡಲಾಗುವುದು. ಉಗ್ರ ಹೊರಾಟ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಹಾಲಿನ ದರ ಏರಿಕೆಯನ್ನು ವಿರೋಧಿಸುವ ವಿಪಕ್ಷಗಳ ನಾಯಕರ ನಿವಾಸದ ಎದುರು ರಾಸುಗಳನ್ನು ಕೊಂಡೊಯ್ಯುತ್ತಿದ್ದು ಪ್ರತಿಭಟಿಸೋಣ. ಹೈನುಗಾರರ ಹೋರಾಟಕ್ಕೆ ಶಾಸಕರ ಬೆಂಬಲ ಕೋರಿದ್ದೇವೆ. ಅವರು ದಿನಾಂಕ ನೀಡಿದ ನಂತರ ಹೋರಾಟದ ವೇದಿಕೆಯನ್ನು ಸಿದ್ದಪಡಿಸಲಾಗುವುದು ಎಂದರು.ಹೈನುಗಾರರು ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಬದುಕುಗಳನ್ನು ನಾವು ರಕ್ಷಿಸಿಕೊಳ್ಳಬೇಕು. ರಾಜ್ಯ ಸರ್ಕಾರ, ಪ್ರತಿಪಕ್ಷಗಳ ಟೀಕೆ, ಟಿಪ್ಪಣಿ, ಬೆದರಿಕೆಗಳಿಗೆ ಅಂಜುವ ಅಗತ್ಯವಿಲ್ಲ. ಗ್ರಾಹಕರಿಂದ ಹೆಚ್ಚಿನ ವಿರೋಧ ಇಲ್ಲ. ಈ ವಿಷಯದಲ್ಲಿ ವಿಪಕ್ಷಗಳು ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಹಣದುಬ್ಬರ ಏರಿಕೆಯಿಂದ ಹಾಲು ಉತ್ಪಾದನೆ ಖರ್ಚು ವೆಚ್ಚಗಳು ಹೆಚ್ಚಾಗಿವೆ. ಹಾಲಿನ ದರ ವೈಜ್ಞಾನಿಕವಾಗಿ ನಿಗದಿಯಾಗುತ್ತಿಲ್ಲ. ಹೈನುಗಾರರ ಪರಿಶ್ರಮಕ್ಕೆ ತಕ್ಕ ಬೆಲೆ ದೊರೆಯುತ್ತಿಲ್ಲ. ಸರ್ಕಾರ ಕೂಡಲೇ ಹಾಲಿನ ದರವನ್ನು ಹೆಚ್ಚಿಸಲೇಬೇಕು. ರೈತರು ಸಾಕಷ್ಟು ಸಂಕಷ್ಟದಲ್ಲಿದ್ದು, ಹೈನುಗಾರಿಕಾ ಕ್ಷೇತ್ರದ ಪ್ರಗತಿಗೆ ಹಿನ್ನಡೆಯಾಗಲಿದೆ. ಹಾಲಿನ ಉತ್ಪಾದನೆ ಕುಂಟಿತವಾಗಲಿದ್ದು ಹೈನುಗಾರಿಕೆಯಿಂದ ರೈತರು ವಿಮುಖವಾಗಲಿದ್ದಾರೆ ಪಿ.ನಾಗರಾಜು ಹೇಳಿದರು.ಸಭೆಯಲ್ಲಿ ರಾಸು ವಿಮೆ, ಪಶುವೈದ್ಯಾಧಿಕಾರಿಗಳ ಕೊರತೆ, ಮ್ಯಾಟ್ ಮತ್ತಿತರ ಮೂಲ ಸೌಕರ್ಯಗಳ ಅಲಭ್ಯತೆ ಕುರಿತು ಹೈನುಗಾರರು ಬಮೂಲ್ ಅಧ್ಯಕ್ಷರು, ನಿರ್ದೇಶಕರ ಬಳಿ ಅಹವಾಲು ಸಲ್ಲಿಸಿದರು.
ಈ ವೇಳೆ ಬಮೂಲ್ ಅಧ್ಯಕ್ಷ ರಾಜ್ ಕುಮಾರ್, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಅಶೋಕ್, ಮುಖಂಡರಾದ ಅಶೋಕ್, ರವಿ, ವೆಂಕಟೇಶ ಮೂರ್ತಿ, ಆಂಜನಪ್ಲ, ಮನ್ಸೂರ್ ಅಲಿಖಾನ್, ಗುಂಡಪ್ಪ, ಉಮೇಶ್ , ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.ಕೋಟ್...........
ಹೈನುಗಾರರ ಬದುಕು ಸುಧಾರಿಸುವ ಹಾಲಿನ ದರ ಹೆಚ್ಚಳ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಪ್ರತಿಪಕ್ಷಗಳಿಗೆ ನಾಚಿಕೆ ಆಗಬೇಕು. ಹೈನುಗಾರರ ಬದುಕಿನ ಜೊತೆ ರಾಜಕೀಯ ಮಾಡುವುದು ಸರಿಯಲ್ಲ.- ಪಿ.ನಾಗರಾಜು, ಬಮೂಲ್ ನಿರ್ದೇಶಕ
29ಕೆಆರ್ ಎಂಎನ್ 2.ಜೆಪಿಜಿರಾಮನಗರದ ಹೊರವಲಯದ ಜೇನುಕಲ್ಲು ರೆಸಾರ್ಡ್ ನಲ್ಲಿ ಬುಧವಾರ ನಡೆದ ಹಾಲಿನ ಡೇರಿ ಕಾರ್ಯದರ್ಶಿಗಳ ಸಭೆಯಲ್ಲಿ ಪಿ.ನಾಗರಾಜು ಮಾತನಾಡಿದರು.