ಸಾರಾಂಶ
ರೈತರಿಗೆ ಹೈನುಗಾರಿಕೆಯೇ ಜೀವನಕ್ಕೆ ಪ್ರಮುಖ ಆಧಾರವಾಗಿದ್ದು, ಇದು ಹಳ್ಳಿಯ ರೈತರ ಜೀವನೋಪಾಯಕ್ಕೆ ಅನುಕೂಲವಾಗಿದೆ ಎಂದು ಚಾಮುಲ್ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಮಹಾದೇವಸ್ವಾಮಿ (ಉದ್ದನೂರು ಪ್ರಸಾದ್) ಹೇಳಿದರು. ಹನೂರಿನಲ್ಲಿ ಹಾಲು ಉತ್ಪಾದಕರ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹನೂರು
ರೈತರಿಗೆ ಹೈನುಗಾರಿಕೆಯೇ ಜೀವನಕ್ಕೆ ಪ್ರಮುಖ ಆಧಾರವಾಗಿದ್ದು, ಇದು ಹಳ್ಳಿಯ ರೈತರ ಜೀವನೋಪಾಯಕ್ಕೆ ಅನುಕೂಲವಾಗಿದೆ ಎಂದು ಚಾಮುಲ್ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಮಹಾದೇವಸ್ವಾಮಿ (ಉದ್ದನೂರು ಪ್ರಸಾದ್) ಹೇಳಿದರು.ತಾಲೂಕಿನ ಶಾಗ್ಯ ಸೇರಿದಂತೆ ಪುಷ್ಪಾಪುರ ಹಾಗೂ ಮರಿಯಮಂಗಲ ಗ್ರಾಮದಲ್ಲಿ ಸೋಮವಾರ ಪ್ರತ್ಯೇಕವಾಗಿ ನಡೆದ ಹಾಲು ಉತ್ಪಾದಕರ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಬರ ಬಂದ ಸಂದರ್ಭದಲ್ಲೂ ಸರ್ಕಾರ 5 ರು. ಪ್ರೋತ್ಸಾಹಧನವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. ರೈತರಿಗೆ ಅನ್ಯಾಯವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ತಂತ್ರಜ್ಞಾನ ಮೂಲಕ ಮೊಬೈಲ್‌ಗೆ ಪ್ರೋತ್ಸಾಹಧನ, ಸವಲತ್ತು ಸೌಲಭ್ಯ ಹಾಲಿನ ದರ ಇತರ ಮಾಹಿತಿ ರವಾನೆಯಾಗಲಿದೆ. ಒಕ್ಕೂಟದ ಸಂಫದಲ್ಲಿ ಗುಣಮಟ್ಟ ಸುಧಾರಣೆ ಆಗಿದೆ. ಉತ್ತಮವಾಗಿ ಹಾಲು ಒಕ್ಕೂಟ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರಾಸುಗಳಿಗೆ ವಿಮೆ ಕಡ್ಡಾಯ:
ನಮ್ಮ ಹಾಲು ಒಕ್ಕೂಟದಿಂದ ಸರಬರಾಜು ಮಾಡಲು ತೀರ್ಮಾನ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಒಕ್ಕೂಟದ ಸವಲತ್ತು ಒದಗಿಸಲು ಕ್ರಮವಹಿಸಲಾಗುವುದು. ಹಾಲು ಹೆಚ್ಚು ಉತ್ಪಾದನೆಯಿಂದ ಸಂಘಕ್ಕೆ, ಒಕ್ಕೂಟಕ್ಕೆ ಉತ್ತಮ ಹೆಸರು ಬರಲಿದ್ದು ರೈತರಿಗೂ ಸಹ ಆದಾಯ ಲಭಿಸಲಿದೆ. ಈ ಹಿಂದೆ ಗಂಟು ರೋಗದಿಂದ ರಾಸುಗಳು ಸಾವನ್ನಪ್ಪಿದವು. ವಿಮೆ ಮಾಡಿಸಿದ ಹಿನ್ನೆಲೆ ರೈತರಿಗೆ ಪರಿಹಾರ ರೂಪದಲ್ಲಿ ಹಣ ಬಂತು, ಹೀಗಾಗಿ ಈ ಬಗ್ಗೆ ಗಮನಹರಿಸಿ ವಿಮೆ ಕಡ್ಡಾಯ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.ಮರಿಯಮಂಗಲ ಅವರ್ ಲೇಡಿ ಅಫ್ ಪ್ರೆಸಂಟೇಶನ್ ಚರ್ಚ್ ಫಾ.ಜಾನ್ ಮಾತನಾಡಿ, ಹಸು ಅಕ್ಷಯ ಪಾತ್ರೆ ಇದ್ದ ಹಾಗೆ. ಹಸುವಿಗೆ ಪ್ರಾಮುಖ್ಯತೆ ಇದೆ. ರೈತರ ಶ್ರಮಕ್ಕೆ ಎಂದೂ ಮೋಸವಾಗದ ರೀತಿಯಲ್ಲಿ ಫಲ ಸಿಗಲಿದೆ. ಇದರಿಂದ ಆರ್ಥಿಕವಾಗಿ ಪ್ರಗತಿ ಹೊಂದಬಹುದು ಎಂದು ತಿಳಿಸಿದರು.
ಕುದೇರು ಚಾಮುಲ್ ವಿಸ್ತರಣಾಧಿಕಾರಿ ರಘು ಎನ್., ಶಾಗ್ಯ ಹಾಲು ಉತ್ಪಾದಕರ ಸಂಘದ ಶಿವಸ್ವಾಮಿ, ಕಾರ್ಯದರ್ಶಿ ರವಿಕುಮಾರ್, ಮುಖಂಡ ಮಹದೇವಪ್ಪ, ಪುಷ್ಪಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ, ಕಾರ್ಯದರ್ಶಿ ವೆಂಕಟರಾಜು, ಮರಿಯಮಂಗಲ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸಂದ್ಯಾಗು, ಕಾರ್ಯದರ್ಶಿ ಆಲ್ಪಾ, ಮುಖಂಡ ಜಾನ್ ಕುಮಾರ್, ಮಾಜಿ ಕಾರ್ಯದರ್ಶಿ ಸೇಸುರಾಜು ಸೇರಿದಂತೆ ಹಾಲು ಉತ್ಪಾದಕರ ಸದಸ್ಯರು ಇದ್ದರು.;Resize=(128,128))
;Resize=(128,128))