ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರಗ್ರಾಮೀಣ ಪ್ರದೇಶದ ರೈತ ಮಹಿಳೆ ಶ್ರಮದಿಂದ ಹೈನುಗಾರಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಯುವಕರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಉದ್ಯಮವಾಗಿ ಬೆಳೆಸಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ತಾಲೂಕಿನ ಕೆರೆತೊಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರೈತ ಮಹಿಳೆಯರು ಪ್ರತಿನಿತ್ಯ ಬೆಳಗ್ಗೆ ಸಂಜೆ ಎದ್ದು ಹಸುಗಳ ಸಗಣಿಬಾಚಿ, ಹಸುಗಳಿಗೆ ಮೇವು ಹಾಕಿ ಹಸು ಸ್ವಚ್ಚಗೊಳಿಸಿ ಹಾಲು ಕರೆದು ಡೇರಿಗೆ ಹಾಕುತ್ತಿರುವುದರಿಂದ ಹೈನುಗಾರಿಕೆ ಉತ್ತಮವಾಗಿ ನಡೆಯುತ್ತಿದೆ ಎಂದರು.ಹೈನುಗಾರಿಕೆಯಿಂದ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಅಲ್ಪ ಸಂಬಳಕ್ಕಾಗಿ ಉದ್ಯೋಗ ಹರಿಸಿ ನಗರ ಪ್ರದೇಶಗಳಿಗೆ ಹೋಗುತ್ತಿರುವ ಯುವಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಅಧಿಕ ಲಾಭಗಳಿಸಬಹುದು ಎಂದು ತಿಳಿಸಿದರು.ಮನ್ಮುಲ್ ಒಕ್ಕೂಟದ ವಾರ್ಷಿಕ ವಹಿವಾಟು ₹1300 ಕೋಟಿಗೂ ಅಧಿಕವಿದೆ. ಅಂತಹ ಒಕ್ಕೂಟಗಳು ಅಭಿವೃದ್ಧಿ ಹೊಂದಲು ರೈತರು ಡೇರಿಗಳಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ನಿಮ್ಮ ಅಭಿನಂದನೆಯಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದ್ದೀರಿ.ತಾಲೂಕಿನ ಎಲ್ಲಾ ಡೇರಿಗಳಿಗೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದರು.ಈ ಸಿ.ಶಿವಕುಮಾರ್ ಅವರನ್ನು ಅಭಿನಂಧಿಸಲಾಯಿತು. ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರ್ಣಾಧಿಕಾರಿ ನಾಗೇಂದ್ರ, ಟೆಕ್ನಿಷಿಯನ್ ಆನಂದ್, ಡೇರಿ ಅಧ್ಯಕ್ಷ ಟಿ.ಎನ್.ರಾಮೇಗೌಡ, ಉಪಾಧ್ಯಕ್ಷ ಟಿ.ಜೆ.ಶಂಕರ, ನಿರ್ದೇಶಕರಾದ ಟಿ.ಎನ್.ಜವರಾಯಿಗೌಡ, ಇಂದ್ರೇಶ್, ಗಾಡಿರಾಮೇಗೌಡ, ಪ್ರಕಾಶ್ ಟಿ.ಜೆ., ಟಿ.ಪಿ.ರಾಮು, ಮರಿಸ್ವಾಮಿ, ಜಯಶೀಲ, ಟಿ.ಎಸ್.ಶೋಭಾ, ಕಾರ್ಯದರ್ಶಿ ಎಸ್.ಡಿ.ಸಿದ್ದಲಿಂಗೇಗೌಡ, ಪರೀಕ್ಷ ಸುಹಾಸ್ ಎಸ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.