ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಜಿಲ್ಲಾ ಕಸಾಪ ಮತ್ತು ಸ್ಫೂರ್ತಿ ಪ್ರಕಾಶನದ ಸಹಯೋಗದಲ್ಲಿ ಶಿಕ್ಷಕಿ, ಕವಯಿತ್ರಿ ದಾಕ್ಷಾಯಣಿ ಶಂಕರ ಹುಣಶ್ಯಾಳ (ಮಂಡಿ) ವಿರಚಿತ ''ಹಾಸು ಹೊಕ್ಕು'' ಮತ್ತು '' ಮೇಘಸೃಷ್ಠಿ'' ಎಂಬ ಅವಳಿ ಕೃತಿಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಸ್ಥಳೀಯ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜಿಲ್ಲಾ ಕಸಾಪ ಮತ್ತು ಸ್ಫೂರ್ತಿ ಪ್ರಕಾಶನದ ಸಹಯೋಗದಲ್ಲಿ ಶಿಕ್ಷಕಿ, ಕವಯಿತ್ರಿ ದಾಕ್ಷಾಯಣಿ ಶಂಕರ ಹುಣಶ್ಯಾಳ (ಮಂಡಿ) ವಿರಚಿತ ''''ಹಾಸು ಹೊಕ್ಕು'''' ಮತ್ತು '''' ಮೇಘಸೃಷ್ಠಿ'''' ಎಂಬ ಅವಳಿ ಕೃತಿಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಸ್ಥಳೀಯ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಜರುಗಿತು.ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಧೋಳ ರನ್ನ ಪ್ರತಿಷ್ಠಾನದ ಸದಸ್ಯೆ ಡಾ.ಸುಲೋಚನಾ ಜವಳಗಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಡಾ.ವೈ.ಎಂ.ಯಾಕೊಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಬಾಗಲಕೋಟೆಯ ಸಾಹಿತಿ ಡಾ.ಪ್ರಕಾಶ ಖಾಡೆ ಪುಸ್ತಕ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಶಯ ನುಡಿ ಹೇಳಿದರು.
ವಿಶೇಷ ಆಹ್ವಾನಿತರಾಗಿ ಬಾಗಲಕೋಟೆ ಸಾಶಿಇ ಉಪನಿರ್ದೇಶಕ ಅಜೀತ ಮನ್ನಿಕೇರಿ ಭಾಗವಹಿಸಿದ್ದರು. ಬಾಗಲಕೋಟೆ ಉಪನ್ಯಾಸಕ ಶ್ರೀಹರಿ ಧೂಪದ ಹಾಸು ಹೊಕ್ಕು ಕೃತಿ ಪರಿಚಯಿಸಿದರು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಮೇಘಸೃಷ್ಠಿ ಕೃತಿ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ವೈ.ಬಿ.ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಸಮಾಜದ ಮುಖಂಡ ಮಲ್ಲಪ್ಪ ಭಾವಿಕಟ್ಟಿ, ಜಮಖಂಡಿ ಬಿಇಒ ಅಶೋಕ ಬಸಣ್ಣವರ, ಕಾಡೇಶ ಕೋಲೂರ, ಶಾಂತಾ ಸೋರಗಾಂವಿ, ಸಿದ್ದಲಿಂಗಪ್ಪ ಬೀಳಗಿ, ಸುಧಾ ಹುಚ್ಚನ್ನವರ, ಡಾ.ಲಕ್ಷ್ಮಣ ಚೌರಿ, ಮೇಘಸೃಷ್ಠಿ ಜನ್ನಡ ಸಂಗದ ಅಧ್ಯಕ್ಷ ರಮೇಶ ಕಮತಗಿ, ಶಿಕ್ಷಕ ಶಂಕರ ಹುಣಶ್ಯಾಳ, ಲಕ್ಷ್ಮಣ ಬಾದಾಮಿ, ಶ್ರೀಶೈಲ, ಸಂತೋಷಿ ರಾಮದುರ್ಗ, ಸ್ಫೂರ್ತಿ ಹುಣಶ್ಯಾಳ, ಸುಷ್ಮಾ ಜನಗೌಡ, ಕವಯಿತ್ರಿ ದಾಕ್ಷಾಯಣಿ ಶಂಕರ ಹುಣಶ್ಯಾಳ (ಮಂಡಿ) ಇದ್ದರು. ರಬಕವಿ-ಬನಹಟ್ಟಿಯ ಶ್ರೀ ಪಂಚಾಕ್ಷರಿ ಗವಾಯಿ ಸಂಗೀತ ಬಳಗದವರು ಸಂಗೀತ ಸೇವೆ ನೀಡಿದರು.ಬಾಗಲಕೋಟೆ, ಬೆಂಗಳೂರು, ಗದಗ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಚಿಮ್ಮಡ ಹಾಗೂ ಸ್ಥಳೀಯ ನೂರಾರು ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು. ಈ ವೇಳೆ ದಾಕ್ಷಾಯಣಿ ಶಂಕರ ಹುಣಶ್ಯಾಳ ದಂಪತಿ ಸನ್ಮಾನಿಸಿದರು.