ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ದ.ಕ. ಜಿಲ್ಲೆ: ಹಿರಣ್ಯ ವೆಂಕಟೇಶ್ವರ ಭಟ್‌

| Published : Jan 06 2025, 01:01 AM IST

ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ದ.ಕ. ಜಿಲ್ಲೆ: ಹಿರಣ್ಯ ವೆಂಕಟೇಶ್ವರ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಮ್ಮೇಳನದ ಸ್ಮರಣ ಸಂಚಿಕೆ ‘ಮಂಚಿಯ ಸಂಚಿ’ಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು. ಸಮ್ಮೇಳನದ ಯಶಸ್ವಿಗೆ ದುಡಿದವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಹೆಚ್ಚಿನ ವಿಶ್ವವಿದ್ಯಾನಿಲಯಗಳಿರುವ ಕರ್ನಾಟಕದಲ್ಲಿ ಅವಿಭಜಿತ ದ.ಕ. ಜಿಲ್ಲೆಯೇ ಹೆಚ್ಚಿನ ವಿವಿಗಳನ್ನು ಹೊಂದಿದ್ದು, ವಿದ್ಯಾನೆಲೆಯ ಪ್ರಬುದ್ಧತೆಯ ಜೊತೆಗೆ ಸಾಹಿತ್ಯಕ್ಕೂ ವಿಶೇಷ ಕೊಡುಗೆ ನೀಡಿದೆ ಎಂದು ಹಿರಿಯ ಭಾಷಾ ವಿದ್ವಾಂಸ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಹೇಳಿದರು. ಅವರು ಮಂಚಿ- ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಮಂಚಿ- ಕೊಳ್ನಾಡು ಸರಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಆಯೋಜನೆಗೊಂಡಿದ್ದ ಬಂಟ್ವಾಳ ತಾಲೂಕು ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಮಾತನಾಡಿ, ಕನ್ನಡವನ್ನು ಒಪ್ಪುವ ಮನಸ್ಸುಗಳಿಂದ ಕನ್ನಡ ಬೆಳೆಯಲಿದ್ದು, ಆಗ ಕನ್ನಡ ಮನೆ-ಮನದ ಉಸಿರಾಗುತ್ತದೆ. ಎಲ್ಲರ ಸಹಕಾರದಿಂದ ಇಲ್ಲಿ ಅತ್ಯಂತ ಯಶಸ್ಸಿನ ಸಾಹಿತ್ಯ ಸಮ್ಮೇಳನ ನಡೆದಿದ್ದು, ಇಂತಹ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವುದಕ್ಕೆ ಹೆಮ್ಮೆ ಇದೆ ಎಂದರು.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ನ್ಯಾಯವಾದಿ ಅಶ್ವನಿಕುಮಾರ್ ರೈ, ಮಂಚಿ ಧರ್ಮ ಜಾಗರಣಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪ್ರಗತಿಪರ ಕೃಷಿಕ ಕುಳಾಲು ಗಿರೀಶ್ ಭಂಡಾರಿ, ನಿವೃತ್ತ ಸೈನಿಕ ರಂಗನಾಥ ರೈ ಬಿಳಿಯೂರುಗುತ್ತು, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪತ್ತುಮುಡಿ ಸೂರ್ಯನಾರಾಯಣ ರಾವ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಶೀಲಾ ವಿಟ್ಲ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸವಿತಾ, ಕಸಾಪ ಬಂಟ್ವಾಳ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ-ಬಾಳಿಕೆ, ಪ್ರಧಾನ ಸಂಯೋಜಕ ರಾಮಪ್ರಸಾದ್ ರೈ ತಿರುವಾಜೆ, ಕಸಾಪ ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್, ಗೌರವ ಕೋಶಾಧ್ಯಕ್ಷ ಅಬ್ದುಲ್ ರಹಿಮಾನ್ ಡಿ. ಬಿ. ಉಪಸ್ಥಿತರಿದ್ದರು.ಸಮ್ಮೇಳನದ ಸ್ಮರಣ ಸಂಚಿಕೆ ‘ಮಂಚಿಯ ಸಂಚಿ’ಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು. ಸಮ್ಮೇಳನದ ಯಶಸ್ವಿಗೆ ದುಡಿದವರನ್ನು ಗೌರವಿಸಲಾಯಿತು. ಕಸಾಪ ಬಂಟ್ವಾಳದ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಸ್ವಾಗತಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಚಿ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಹಾಗೂ ರಶ್ಮಿತಾ ಸುರೇಶ್ ಜೋಗಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.ಕವಿಗೋಷ್ಠಿ ವಾಚನ-ಗಾಯನ-ಕುಂಚ ಕಾರ್ಯಕ್ರಮ

ಸಮ್ಮೇಳನದಲ್ಲಿ ಕವಿಗೋಷ್ಠಿ ವಾಚನ-ಗಾಯನ- ಕುಂಚ ಕಾರ್ಯಕ್ರಮ ನಡೆಯಿತು.

ಕವಿಗೋಷ್ಠಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮುಳಿಯ ಶಂಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಆಶಯ ನುಡಿಯಾಡಿದರು.

ಕವಿಗಳಾದ ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ದಾ.ನಾ. ಉಮಾಣ್ಣ ಕೊಕ್ಕಪುಣಿ, ಗೀತಾ ಎಸ್. ಕೊಂಕೋಡಿ, ರವೀಂದ್ರ(ಕಲಾಪ್ರಿಯ) ಕುಕ್ಕಾಜೆ, ಗಣೇಶ ಪ್ರಸಾದ್ ಪಾಂಡೇಲು, ಅಶೋಕ್ ಕಡೇಶ್ವಾಲ್ಯ, ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಅಬೂಬಕ್ಕರ್ ಅಮ್ಮುಂಜೆ, ಪ್ರತಿಮಾ ತುಂಬೆ, ಎಂ.ಡಿ.ಮಂಚಿ ಸ್ವರಚಿತ ಕವನಗಳನ್ನು ವಾಚಿಸಿದರು. ಪ್ರವೀಣ್ ಜಯ ವಿಟ್ಲ, ಧರಣ್ ಮಾಣಿ, ಯೋಗೀಶ್ ಆಳ್ವ ಪುದ್ದೊಟ್ಟು, ಕಾವ್ಯ ಶ್ರೀ ಗಡಿಯಾರ, ತಂಡದಿಂದ ಗಾಯನ ಪ್ರಸ್ತುತಗೊಂಡಿತು.

ಬಾಲಕೃಷ್ಣ ಶೆಟ್ಟಿ ಖಂಡಿಗ, ತಾರಾನಾಥ್ ಕೈರಂಗಳ, ಮುರಳಿ ಕೃಷ್ಣ ರಾವ್, ಮುರಳೀಧರ ಆಚಾರ್ಯ ಕುಂಚದ ಮೂಲಕ ಭಾವ ಮೂಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಪೂವಪ್ಪ ನೇರಳಕಟ್ಟೆ, ಇರಾ ಬಂಟರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ,‌ ಪತ್ರಕರ್ತ ಲತೀಫ್ ನೇರಳಕಟ್ಟೆ, ಶಿಕ್ಷಕ ದಾಮೋದರ ಕಾರ್ಯ ಉಪಸ್ಥಿತರಿದ್ದರು. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಕಾರ್ಯಕ್ರಮ ನಿರೂಪಿಸಿದರು. ರಮೇಶ್‌ ಮೆಲ್ಕಾರ್‌ ವಂದಿಸಿದರು.