ಕೆ.ಎನ್‌.ರಾಜಣ್ಣ ನಿವಾಸಕ್ಕೆ ದಲಿತ ಹಿಂದುಳಿದ ಸಮುದಾಯ ಶ್ರೀಗಳು

| Published : Sep 01 2025, 01:04 AM IST

ಕೆ.ಎನ್‌.ರಾಜಣ್ಣ ನಿವಾಸಕ್ಕೆ ದಲಿತ ಹಿಂದುಳಿದ ಸಮುದಾಯ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ಬೆಂಬಲಕ್ಕೆ ದಲಿತ-ಹಿಂದುಳಿದ ಸಮುದಾಯದ ಮಠಾಧೀಶರು ನಿಂತಿದ್ದು, ಭಾನುವಾರ ದಲಿತ-ಹಿಂದುಳಿದ ಮಠಾಧೀಶರ ಒಕ್ಕೂಟ ತುಮಕೂರಿನ ಕ್ಯಾತಸಂದ್ರದಲ್ಲಿರುವ ರಾಜಣ್ಣರ ಮನೆಗೆ ಭೇಟಿ ಕೊಟ್ಟು ಬೆಂಬಲ ಸೂಚಿಸಿದೆ.

ತುಮಕೂರು: ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ಬೆಂಬಲಕ್ಕೆ ದಲಿತ-ಹಿಂದುಳಿದ ಸಮುದಾಯದ ಮಠಾಧೀಶರು ನಿಂತಿದ್ದು, ಭಾನುವಾರ ದಲಿತ-ಹಿಂದುಳಿದ ಮಠಾಧೀಶರ ಒಕ್ಕೂಟ ತುಮಕೂರಿನ ಕ್ಯಾತಸಂದ್ರದಲ್ಲಿರುವ ರಾಜಣ್ಣರ ಮನೆಗೆ ಭೇಟಿ ಕೊಟ್ಟು ಬೆಂಬಲ ಸೂಚಿಸಿದೆ. ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದ ಶ್ರೀ, ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಶ್ರೀ ಸೇರಿದಂತೆ 15ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ, ರಾಜಣ್ಣರ ಜೊತೆ ಮಾತುಕತೆ ನಡೆಸಿದರು

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದ ನಾಯಕ ರಾಜಣ್ಣರಿಗೆ ಮೋಸ ಮಾಡಿದೆ. ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆ ಕೊಟ್ಟಿದೆ. ಕೆ.ಎನ್.ರಾಜಣ್ಣರಿಗೆ ಸಮಯಾವಕಾಶ ಕೊಡಬೇಕಿತ್ತು. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್‌ನಿಂದ ಚದುರಿ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು.