ಗೊಂದಲದ ಗೂಡಾದ ದಲಿತ ಕುಂದು ಕೊರತೆ ಸಭೆ

| Published : Aug 23 2025, 02:00 AM IST

ಸಾರಾಂಶ

ಕಳೆದ ಒಂದು ವರ್ಷಗಳ ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ನೂರಾರು ಸಮಸ್ಯೆಗಳನ್ನು ಹೊತ್ತ ದಲಿತ ಮುಖಂಡರು ಅಧಿಕಾರಿಗಳ ಮೇಲೆ ನಡೆಸಿದ ವಾಗ್ದಾಳಿಗೆ ತಲ್ಲಣಗೊಂಡರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಕಳೆದ ಒಂದು ವರ್ಷಗಳ ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ನೂರಾರು ಸಮಸ್ಯೆಗಳನ್ನು ಹೊತ್ತ ದಲಿತ ಮುಖಂಡರು ಅಧಿಕಾರಿಗಳ ಮೇಲೆ ನಡೆಸಿದ ವಾಗ್ದಾಳಿಗೆ ತಲ್ಲಣಗೊಂಡರು.

ಸಭೆ ಆರಂಭ ಆಗುತ್ತಿದ್ದಂತೆ ನಿರೀಕ್ಷೆಗೂ ಮೀರಿದ ದಲಿತ ಮುಖಂಡರು ಆಗಮಿಸಿದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ಕೂರುವ ಸ್ಥಳದ ಸಮಸ್ಯೆ ಉಂಟಾಗಿತ್ತು. ದಲಿತ ಮುಖಂಡರಿಗೆ ಕುರ್ಚಿ ಹಾಕಿಸುವಂತೆ ಹಲವಾರು ಮುಖಂಡರು ಅಧಿಕಾರಿಗಳ ಮೇಲೆ ವಾಗ್ವಾದ ಮಾಡಿದರೂ ನಂತರ ತಾಲೂಕು ಪಂಚಾಯಿತಿ ಸಿಬ್ಬಂದಿ ಆವರಣಕ್ಕೆ ಕುರ್ಚಿಗಳನ್ನು ತಂದು ಸಮಾಧಾನ ಪಡಿಸಿದರು. ಸಭೆ ಆರಂಭದ ಮೊದಲು ಆಕ್ರೋಶಗೊಂಡ ದಲಿತ ಮುಖಂಡರು ಕಳೆದ ಒಂದು ವರ್ಷದಿಂದ ಸಭೆ ಕರೆದಿಲ್ಲ ದಲಿತರ ಬಗ್ಗೆ ಕಾಳಜಿ ಇಲ್ಲ ಅಂತಹ ಉದಾಸೀನತೆ ಉಳ್ಳಂತಹ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಜಿಲ್ಲಾ ದಲಿತ ಮುಖಂಡ ವೈ ಎಚ್ ಹುಚ್ಚಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ದಲಿತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಈ ರೀತಿ ದಲಿತರ ಕುಂದು ಕೊರತೆಗಳ ಸಭೆ ನಡೆಸಬೇಕೆಂದು ಕಾನೂನು ತಂದಿದೆ ಆದರೆ ಅದರ ಬಗ್ಗೆ ಉದಾಸೀನತೆ ಮಾಡುತ್ತಿರುವಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಲವಾರು ದಲಿತ ಪರ ಮುಖಂಡರು ಅಮೃತೂರು ಯಡಿಯೂರು ಹುಲಿಯೂರು ದುರ್ಗ ಭಾಗಗಳಿಗೆ ಹೆಚ್ಚಾದ ದಲಿತರ ಸಮಾಜಗಳಿವೆ ಕಳೆದ ಹಲವಾರು ವರ್ಷಗಳಿಂದ ಬಹುತೇಕ ಸಮಸ್ಯೆಗಳು ಮುಂದುವರಿಯುತ್ತಾ ಬಂದಿವೆ ತಾತ್ಕಾಲಿಕವಾಗಿ ಕನಿಷ್ಠ ಮೂರು ಅಥವಾ ನಾಲ್ಕು ಪ್ರಕರಣಗಳನ್ನು ತಕ್ಷಣ ಇತ್ಯರ್ಥ ಮಾಡಬೇಕೆಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ರಶ್ಮಿ ಸಮಸ್ಯೆ ಪ್ರತಿದಿನ ಬರುತ್ತವೆ. ಅದಕ್ಕಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ ಹಳೆಯ ಅರ್ಜಿಗಳನ್ನು ಇತ್ಯರ್ಥ ಮಾಡುವಲ್ಲೂ ಕೂಡ ನಾವು ಪರಿಶ್ರಮ ಪಡುತ್ತಿದ್ದು ಈಗ ನೀವು ಸಮಾಧಾನವಾಗಿ ಚರ್ಚೆ ಮಾಡಲು ಸಭೆಗೆ ಅನುವು ಮಾಡಿಕೊಟ್ಟರೆ ಸಭೆ ಬಗೆಹರಿಸುವ ಸಮಸ್ಯೆಗಳನ್ನು ನಿಮ್ಮ ಕಣ್ಣೆದುರೇ ನೋಡಬಹುದು ಎಂದರು. ನಂತರ ಹಲವಾರು ದಲಿತ ಮುಖಂಡರ ವಾಗ್ವಾದ ಗೊಂದಲದ ನಡುವೆ ಸಭೆ ಪ್ರಾರಂಭವಾಯಿತು.