ಹವಾಮಾನ ವೈಪರೀತ್ಯದಿಂದ ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಹಾಗೂ ಇತರೆ ಹಾನಿ : ಸಚಿವ ಮಲ್ಲಿಕಾರ್ಜುನ್

| Published : Dec 17 2024, 01:01 AM IST / Updated: Dec 17 2024, 12:21 PM IST

SS Mallikarjun
ಹವಾಮಾನ ವೈಪರೀತ್ಯದಿಂದ ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಹಾಗೂ ಇತರೆ ಹಾನಿ : ಸಚಿವ ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಹಾಗೂ ಇತರೆ ರೋಗದಿಂದ ಬೆಳೆ ಇಳುವರಿ ಕುಂಠಿತ ಆಗಿರುವುದು ಗಮನಕ್ಕೆ ಬಂದಿದೆ. ರೋಗ ನಿವಾರಣೆ ಕ್ರಮಗಳಿಗೆ ₹50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.

 ದಾವಣಗೆರೆ: ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಹಾಗೂ ಇತರೆ ರೋಗದಿಂದ ಬೆಳೆ ಇಳುವರಿ ಕುಂಠಿತ ಆಗಿರುವುದು ಗಮನಕ್ಕೆ ಬಂದಿದೆ. ರೋಗ ನಿವಾರಣೆ ಕ್ರಮಗಳಿಗೆ ₹50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಬದಲಾದ ಹವಾಮಾನ ವೈಪರೀತ್ಯಗಳಿಂದ 53 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಹಾಗೂ ಇತರೆ ಬಾಧೆ ಕಾಣಿಸಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಲವಾರು ಸಭೆಗಳನ್ನು ಸಂಬಂಧಪಟ್ಟವರೊಂದಿಗೆ ಮಾಡಲಾಗಿದೆ. ರೋಗದ ನಿವಾರಣೆಗೆ ಔಷಧ ಕಂಡು ಹಿಡಿಯಲು ಸೂಚಿಸಲಾಗಿದೆ. ಶಿವಮೊಗ್ಗ ವಿ.ವಿ.ಗೆ ₹50 ಲಕ್ಷ ಅನುದಾನ ಸಹ ನೀಡಲಾಗಿದೆ ಎಂದರು.

ಶೇ.18ರಷ್ಟು ಹವಮಾನ ವೈಪರೀತ್ಯದಿಂದಾಗಿ ಘಟ್ಟ ಪ್ರದೇಶದ ಕೆಳಭಾಗದಲ್ಲಿ ಅಡಕೆ ಬೆಳೆಯುವ ಪ್ರದೇಶದಲ್ಲಿ ರೋಗಗಳು ಕಂಡುಬಂದಿವೆ. ಇದು ಅಡಕೆ ಬೆಳೆಯುವ ಪ್ರದೇಶಕ್ಕೂ ಆವರಿಸಿದೆ. ಅಡಕೆ ಬೆಳೆ ರೋಗ ತಡೆ ಸೇರಿದಂತೆ ಬೆಳೆಯ ರಕ್ಷಣೆಗೆ, ಸಬ್ಸಿಡಿಗೆ ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗಿದೆ. ಅಡಕೆ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.