ಪುತ್ತಿಗೆ, ಶಿರ್ತಾಡಿಯಲ್ಲಿ ಮನೆಗಳಿಗೆ ಹಾನಿ, ಗುಡ್ಡ ಕುಸಿತ

| Published : Aug 03 2024, 12:39 AM IST

ಸಾರಾಂಶ

ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲಿನಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಿರ್ತಾಡಿ ಗ್ರಾಮದ ದಡ್ಡಲ್‌ಪಲ್ಕೆ ಎಂಬಲ್ಲಿ ವಿಕ್ರಮ್ ಆಚಾರ್ಯ ಎಂಬವರ ಮನೆಯು ಗುರುವಾರ ರಾತ್ರಿ ಭಾಗಶಃ ಕುಸಿದಿದ್ದು ಅಪಾರ ನಷ್ಟವುಂಟಾಗಿದೆ. ವಿಕ್ರಮ ಆಚಾರ್ಯ, ತಾಯಿ, ಪತ್ನಿ ಮಕ್ಕಳೊಂದಿಗೆ ಮಲಗಿದ್ದು ರಾತ್ರಿ ೨ಗಂಟೆ ಸುಮಾರಿಗೆ ಮನೆಯ ಹಿಂಭಾಗ, ದೇವರ ಕೋಣೆ ಭಾಗವು ಕುಸಿದು ಬಿದ್ದಿದ್ದು ಮನೆಯೊಳಗಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಪಂಚಾಯತ್ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲಿನಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ.

ಹಂಡೇಲು- ಮುಂಡೇಲಿನ ಝೀನತ್, ಜಮೀಲ, ಅಸ್ಮತ್, ಜೈನಾಬು ಅವರ ಮನೆಗೆ ಮಣ್ಣು ಕುಸಿದು ಬಿದ್ದು ಹಾನಿಯಾಗಿದೆ.

ಮೈಮೂನ, ಮೊಹಮ್ಮದ್, ಅಬ್ದುಲ್ ಹಮೀದ್, ಮುಂಡೇಲಿನ ಅಬೂಬಕ್ಕರ್, ಗಿಡ್ಡಬೆಟ್ಟು ಶಾರದಾ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ.

ಹಾನಿಗೊಳಗಾಗಿರುವ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭೀಮ ನಾಯಕ್ ಬಿ.ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಾಯದಲ್ಲಿರುವ ಕುಟುಂಬದವರಿಗೆ ಪುತ್ತಿಗೆ ಪಂಚಾಯಿತಿ ಸಭಾಭವನದಲ್ಲಿ ತೆರೆದಿರುವ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.