ಸಾರಾಂಶ
ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದಾಮಸ್ ಕಟ್ಟೆ ಶಾಖೆಯಲ್ಲಿ ಗ್ರಾಹಕರ ಹಾಗೂ ಹಿತೈಷಿಗಳ ಕೂಟ ನಡೆಯಿತು. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಡಿಮೆ ಬಡ್ಡಿ ದರದಲ್ಲಿ ಕೃಷಿ ಚಟುವಟಿಕೆಗೆ ಸಾಲ ಸೌಲಭ್ಯ ನೀಡಿ ಗ್ರಾಮೀಣ ಕೃಷಿಕರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಆರೋಗ್ಯ ತಪಾಸಣೆ ಹಾಗೂ ಕ್ಷೇಮ ಪಾಲನಾ ಶಿಬಿರದಂತಹ ಸಮಾಜ ಸೇವೆ ಚಟುವಟಿಕೆಯು ಅಭಿನಂದನೀಯ ಎಂದು ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಹೇಳಿದರು.ಅವರು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದಾಮಸ್ ಕಟ್ಟೆ ಶಾಖೆಯಲ್ಲಿ ಜರುಗಿದ ಗ್ರಾಹಕರ ಹಾಗೂ ಹಿತೈಷಿಗಳ ಕೂಟದಲ್ಲಿ ಮಾತನಾಡಿದರು.
ಈ ಸಂದರ್ಭ ವಿದ್ಯುತ್ ಗುತ್ತಿಗೆದಾರ ಅನುಮತಿ ಪಡೆದ ಸಂಘದ ಅಧ್ಯಕ್ಷ ಕುಶಲ ಪೂಜಾರಿ, ಕಿನ್ನಿಗೋಳಿ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜೋಸೆಫ್ ಕ್ವಾಡ್ರೆಸ್, ಉಪಾಧ್ಯಕ್ಷ ಪುರಂದರ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೆರೆಸಾ ಕ್ರಾಸ್ತಾ, ಶಾಖಾ ವ್ಯವಸ್ಥಾಪಕ ರಾಜೇಂದ್ರ ಕುಮಾರ್ ಶೆಣೈ, ದಾಮಸ್ ಕಟ್ಟೆ ಕಿರೆಂ ರೆಮೆದಿ ಅಮ್ಮನವರ ದೇವಾಲಯ ಪಾಲನ ಮಂಡಳಿ ಉಪಾಧ್ಯಕ್ಷ ರೋಹನ್ ಡಿಕೋಸ್ಟ ಮತ್ತಿತರರು ಉಪಸ್ಥಿತರಿದ್ದರು.