ನೃತ್ಯದಿಂದ ಮನಸಿಗೆ ಉಲ್ಲಾಸ, ದೇಹಕ್ಕೆ ಸದೃಢತೆ: ಶಂಕರ್ ಖಟಾವ್‍ಕರ್

| Published : Feb 16 2025, 01:45 AM IST

ನೃತ್ಯದಿಂದ ಮನಸಿಗೆ ಉಲ್ಲಾಸ, ದೇಹಕ್ಕೆ ಸದೃಢತೆ: ಶಂಕರ್ ಖಟಾವ್‍ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಮನೋಲ್ಲಾಸ ಉಂಟುಮಾಡುವ ಜೊತೆಗೆ ದೈಹಿಕ ಹಾಗೂ ಆರೋಗ್ಯವನ್ನೂ ದೃಢಗೊಳಿಸುವ ಶಕ್ತಿ ನೃತ್ಯಕ್ಕಿದೆ ಎಂದು ನಗರಸಭಾ ಸದಸ್ಯ ಶಂಕರ್ ಖಟಾವ್‍ಕರ್ ಹೇಳಿದ್ದಾರೆ.

- ಹರಿಹರದಲ್ಲಿ ‘ಸಂಕರ್ಷಣ ಉತ್ಸವ-ಶ್ರೀಕೃಷ್ಣ ವೈಭವ’ ಸಮಾರಂಭ- - - ಕನ್ನಡಪ್ರಭ ವಾರ್ತೆ ಹರಿಹರ

ಮನೋಲ್ಲಾಸ ಉಂಟುಮಾಡುವ ಜೊತೆಗೆ ದೈಹಿಕ ಹಾಗೂ ಆರೋಗ್ಯವನ್ನೂ ದೃಢಗೊಳಿಸುವ ಶಕ್ತಿ ನೃತ್ಯಕ್ಕಿದೆ ಎಂದು ನಗರಸಭಾ ಸದಸ್ಯ ಶಂಕರ್ ಖಟಾವ್‍ಕರ್ ಹೇಳಿದರು.

ನಗರದ ಎಸ್‍ಜೆವಿಪಿ ಕಾಲೇಜಿನ ಆವರಣದಲ್ಲಿ ಸಂಕರ್ಷಣ ನೃತ್ಯಾಲಯದಿಂದ ಆಯೋಜಿಸಿದ್ದ ‘ಸಂಕರ್ಷಣ ಉತ್ಸವ-ಶ್ರೀಕೃಷ್ಣ ವೈಭವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೃತ್ಯಾಭಿನಯ ಮಾಡುವವರಿಗೂ ಹಾಗೂ ನೋಡುಗರಿಗೂ ನೃತ್ಯದಿಂದ ಮನೋ ಉಲ್ಲಾಸವಾಗುತ್ತದೆ. ದೇಹದ ಬಹುತೇಕ ಅಂಗಾಂಗಗಳ ಚಾಲನೆ ಮಾಡುವುದರಿಂದ ಈ ಕಲೆಯು ದೈಹಿಕ ಆರೋಗ್ಯ ಸದೃಢಗೊಳಿಸುತ್ತದೆ ಎಂದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ನೃತ್ಯದ ಕಲೆಯು ದೇಶದಲ್ಲಿ ರಾಜ, ಮಹಾರಾಜರ ಕಾಲದಿಂದಲೂ ಪ್ರೋತ್ಸಾಹ ಪಡೆಯುತ್ತಿದೆ. ಮನೋರಂಜನೆಯ ಸೀಮಿತ ಅವಕಾಶಗಳಿದ್ದ ಅವಧಿಯಲ್ಲಿ ನೃತ್ಯವು ಪ್ರಧಾನ ಸ್ಥಾನ ಪಡೆದಿತ್ತು. ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಕಲಿಕೆಗೆ ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.

ನೃತ್ಯಾಲಯದ ಅಧ್ಯಕ್ಷೆ ವಿದುಷಿ ರಾಧಾ ಭಾಸ್ಕರ್ ಅಧ್ಯಕ್ಷತೆ ವಹಿಸಿ, 15 ವರ್ಷಗಳಿಂದ ಹರಿಹರ ಹಾಗೂ ಸುತ್ತಲಿನ ನಗರಗಳಲ್ಲಿ ಸಂಸ್ಥೆಯಿಂದ ನೃತ್ಯ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಹವ್ಯಾಸಕ್ಕಾಗಿ ಕಲಿಯುವ ಜೊತೆಗೆ ನೃತ್ಯ ಪರೀಕ್ಷೆ ಉತ್ತೀರ್ಣರಾದವರಿಗೆ ಉದ್ಯೋಗವೂ ದೊರೆಯುತ್ತದೆ ಎಂದು ಹೇಳಿದರು.

ಸಂಸ್ಥೆಯ 160 ವಿಧ್ಯಾರ್ಥಿನಿಯರು ಪ್ರದರ್ಶಿಸಿದ ನೃತ್ಯವು ಜನಮನ ಸೆಳೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಬಿ.ಕೆ. ಶಿವದೇವಿ, ನಗರಸಭಾ ಸದಸ್ಯೆ ಅಶ್ವಿನಿ ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರೇರಣಾ ಫೌಂಡೇಷನ್ ಅಧ್ಯಕ್ಷೆ ಉಷಾ ಮಂಜುನಾಥ್, ಸಾಮಾಜಿಕ ಕಾರ್ಯಕರ್ತೆ ಸುಮನ್ ಖಮಿತ್ಕರ್ ಇದ್ದರು.

ನೃತ್ಯಾಲಯದ ಹಿರಿಯ ವಿದ್ಯಾರ್ಥಿನಿಯರಾದ ಅನನ್ಯ ಎಚ್.ನಿಜಗುಣ, ಅಶ್ರೀತಾ ನಾಗರಾಜ, ಸಂಜನ ಕೆ.ಎಚ್.ಎಂ. ಮಹೇಶ್, ಶ್ರೇಯ ಬಿ.ಕೆ.ಮಲ್ಲೇಶ್, ಸಂಜನ ಜೆ. ರಮೇಶ್ ಇವರನ್ನು ಸತ್ಕರಿಸಲಾಯಿತು. ಕಾರ್ಯದರ್ಶಿ ರಜನಿ ಎಸ್.ಡಿ. ಹಾಗೂ ಮೈಸೂರು ರೇಡಿಯೋ ಆರ್.ಜೆ. ಅವಿನಾಶ್ ನಿರೂಪಿಸಿದರು.

- - - (** ಈ ಪೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-14ಎಚ್‍ಆರ್‍ಆರ್02:

ಹರಿಹರ ನಗರದ ಎಸ್‍ಜೆವಿಪಿ ಕಾಲೇಜಿನ ಆವರಣದಲ್ಲಿ ಸಂಕರ್ಷಣ ನೃತ್ಯಾಲಯದಿಂದ ಆಯೋಜಿಸಿದ್ದ ‘ಸಂಕರ್ಷಣ ಉತ್ಸವ-ಶ್ರೀಕೃಷ್ಣ ವೈಭವ’ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಪ್ರದರ್ಶಿಸಿದ ನೃತ್ಯಕಲೆ ಜನಮನ ಸೆಳೆಯಿತು.