ಗಣೇಶ ವಿಸರ್ಜನೇಲಿ ನಗರಸಭಾ ಸದಸ್ಯರಿಂದ ನೃತ್ಯ

| Published : Sep 01 2025, 01:03 AM IST

ಗಣೇಶ ವಿಸರ್ಜನೇಲಿ ನಗರಸಭಾ ಸದಸ್ಯರಿಂದ ನೃತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಬಸವೇಶ್ವರ ನಗರ ರಸ್ತೆಯಲ್ಲಿ ವೀರಶೈವ ಲಿಂಗಾಯಿತ ಸಮಾಜ ಮೊದಲ ಬಾರಿಗೆ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಉತ್ಸವದಲ್ಲಿ ಮೂರ್ತಿಗಳ ವಿಸರ್ಜನೆ ವೇಳೆ ಹಲವು ವರ್ಷ ಮುನಿಸಿಕೊಂಡು ಪರಸ್ಪರ ವೈರತ್ವ ಹೊಂದಿದ್ದ ನಗರಸಭೆ ಸದಸ್ಯರಾದ ಸುಮ ಸುಬ್ಬಣ್ಣ ಹಾಗೂ ಜಿ. ಪಿ. ಶಿವಕುಮಾರ್ ಒಗ್ಗೂಡಿ ಬೆಂಕಿಯಾಕಾರದಲ್ಲಿ ಕಣ್ಣುಗಳನ್ನು ಪರಸ್ವರ ಇಬ್ಬರು ದಿಟ್ಟಿಸಿ ನೋಡಿಕೊಳ್ಳುವ ಮೂಲಕ ಭರ್ಜರಿ ನೃತ್ಯ ಮಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇತ್ತೀಚೆಗೆ ಸಂಕಷ್ಟಹರ ಗಣಪತಿ ದೇಗುಲದಲ್ಲಿ ಪ್ರಥಮ ಬಾರಿಗೆ ತಲಕಾಡಿನ ನದಿತೀರದಿಂದ ಮರಳಿನ ಗೌರಮ್ಮನ ತಯಾರಿಸಿ ಗೌರಮ್ಮನ ಜೊತೆ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಗಣೇಶ ವಿಸರ್ಜನೆ ವೇಳೆ ಸದಸ್ಯರು ನೃತ್ಯ ಮಾಡಿ ಜನರನ್ನು ರಂಜಿಸಿದರು. ಸುಮ ಸುಬ್ಬಣ್ಣ ಮತ್ತು ಜಿ. ಪಿ. ಶಿವಕುಮಾರ್ ಇಬ್ಬರು ಸಂಬಂಧಿಗಳಾಗಿದ್ದು (ಅತ್ತಿಗೆ- ಮೈದುನ) ಇಬ್ಬರು ರಾಜಕೀಯವಾಗಿ ವೈರತ್ವ ಹೊಂದಿದ್ದರು. ಜಿದ್ದಾಜಿದ್ದಿನಿಂದಲೇ ಇಬ್ಬರು ಸಹಾ ರಾಜಕಾರಣದಲ್ಲಿ ವಿರುದ್ದ ದಿಕ್ಕಿನಲ್ಲಿ ಗುರುತಿಸಿಕೊಂಡಿದ್ದರು.ಆದರೆ ಕಾಲ ಬದಲಾಗುತ್ತಿದ್ದಂತೆ ಇಬ್ಬರು ಒಗ್ಗೂಡಿ ನೖತ್ಯ ಪ್ರದರ್ಶಿಸಿದ್ದು ನಾನಾ ಚರ್ಚೆಯ ಆಸ್ಪದ ಮಾಡಿಕೊಟ್ಟಿತು. ಇಬ್ಬರು ನಗರಸಭಾ ಸದಸ್ಯರ ಈ ಕುಣಿತ ಸಾಕಷ್ಟು ವೈರಲ್ ಆಗಿದ್ದು ಸಾಕಷ್ಟು ಚರ್ಚೆಯ ಕೇಂದ್ರ ಬಿಂಧುವೂ ಆಗಿದೆ ಎನ್ನಬಹುದುಗೌರಮ್ಮ-ಸಮೇತ ಸ್ಥಾಪಿತ ಗಣಪತಿಯನ್ನು ಮೆರವಣಿಗೆ ಬಳಿಕ ಕಾವೇರಿ ನದಿ ತೀರದಲ್ಲಿ ಪ್ರಧಾನ ಅರ್ಚಕ ಶಿವಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ವಿಧಿ, ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ಬಳಿಕ ವಿಸರ್ಜಿಸಲಾಯಿತು.

ಮುಖಂಡರುಗಳಾದ ಸಿಂಗಾನಲ್ಲೂರು ಪರಮೇಶ್, ಮಂಜೇಶ್, ಮಹದೇವಪ್ಪ, ಈರುಳ್ಳಿ ಮಹದೇವಣ್ಣ, ವಿರೇಶ್, ಪ್ರಕಾಶ್, ಪಂಪ, ವೀರೂಪಾಕ್ಷ, ಪ್ರಕಾಶ್, ಲೋಕೇಶ್, ಬಿ ಮಾರ್ಟ್ ಚಂದ್ರು, ನಟರಾಜಪ್ಪ, ಮಹೇಶ್, ಮಧುವನಹಳ್ಳಿ ಪ್ರಭಾಕರ್, ಸಿಂಗನಲ್ಲೂಕು ಕುಮಾರಣ್ಣ, ಸಿದ್ದೇಶ್ ಬಾಬು, ಚೇತನ್, ನಂಜಪ್ಪ, ಮಹೇಶ ಇನ್ನಿತರಿದ್ದರು