ಸ್ಪರ್ಧೆಗಳು ಮಕ್ಕಳ ಮಾನಸಿಕ, ಭೌತಿಕ ಬೆಳವಣಿಗೆಗೆ ಅವಶ್ಯ

| Published : Jul 21 2024, 01:24 AM IST

ಸ್ಪರ್ಧೆಗಳು ಮಕ್ಕಳ ಮಾನಸಿಕ, ಭೌತಿಕ ಬೆಳವಣಿಗೆಗೆ ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧೆಯಲ್ಲಿ ದೇಶದ ಹಲವು ರಾಜ್ಯಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳು ಉತ್ಸವಕ್ಕೆ ಮೆರುಗು

ಕನ್ನಡಪ್ರಭ ವಾರ್ತೆ ಮೈಸೂರು

ಸ್ಪರ್ಧೆಗಳು ಮಕ್ಕಳ ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಅವಶ್ಯಕ ಎಂದು ನೃತ್ಯಗುರು ಪಿ.ಕೆ. ನಾಗಲಕ್ಷ್ಮೀ ನಾಗರಾಜನ್ ಹೇಳಿದರು.

ನಗರದ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು ಕಲೆಮನೆ ಸಭಾಂಗಣ ಹಮ್ಮಿಕೊಂಡಿದ್ದ 41ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವದ ಅಡಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭರತನಾಟ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ದೇಶದ ಹಲವು ರಾಜ್ಯಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳು ಉತ್ಸವಕ್ಕೆ ಮೆರುಗು ತಂದರು. 2024ರ ಅಂತಾರಾಷ್ಟ್ರೀಯ ಕಲೆಮನೆ ಪ್ರಶಸ್ತಿಯನ್ನು ದಂಪತಿಗಳಾದ ಪಿ.ಎಸ್. ನಂದಿನಿ, ಡಾ.ವಿ. ರಂಗನಾಥ್ ಸ್ವೀಕರಿಸಿ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ಈ ಕಾರ್ಯಗಳನ್ನು ಶ್ಲಾಘಿಸಿದರು.

ಅಸ್ಸಾಂ, ಚೆನ್ನೈ ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಯುವ ನೃತ್ಯ ಗುರುಗಳಾದ ರಕ್ಷಿತಾ ರಘುನಾಥನ್, ದಿವ್ಯಜೋತಿ ಚಕ್ರವರ್ತಿ, ಡಿ.ಎಸ್. ಸ್ನಿಗ್ಧ ಕಥಕ್ ಹಾಗೂ ಭರತನಾಟ್ಯ ನೃತ್ಯ ಕಾರ್ಯಕ್ರಮಗಳನ್ನು ಸಾದರಪಡಿಸಿದರು.

ಜ್ಯೋತಿ ಎನ್.ಹೆಗಡೆ, ಮಿತ್ರ ನವೀನ್, ಕೆ.ಎಸ್. ಶೈಲಾ, ಸ್ಮೃತಿ ರಮೇಶ್ ಕೌಶಿಕ್, ಬೈಜರಾಣಿ ಲಿಜಿನ್ ಇದ್ದರು.