ಅಪ್ರಾಪ್ತೆಯ ರೇಪ್‌ ಮಾಡಿದ ಡ್ಯಾನ್ಸ್‌ಮಾಸ್ಟರ್‌ಗೆ ಥಳಿತ

| Published : Feb 10 2024, 01:47 AM IST

ಅಪ್ರಾಪ್ತೆಯ ರೇಪ್‌ ಮಾಡಿದ ಡ್ಯಾನ್ಸ್‌ಮಾಸ್ಟರ್‌ಗೆ ಥಳಿತ
Share this Article
  • FB
  • TW
  • Linkdin
  • Email

ಸಾರಾಂಶ

3 ವರ್ಷದಿಂದ ತನ್ನ ಬಳಿ ಡ್ಯಾನ್ಸ್ ಕಲಿಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಡ್ಯಾನ್ಸ್‌ ಮಾಸ್ಟರ್‌ನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

3 ವರ್ಷದಿಂದ ತನ್ನ ಬಳಿ ಡ್ಯಾನ್ಸ್ ಕಲಿಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಡ್ಯಾನ್ಸ್‌ ಮಾಸ್ಟರ್‌ನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ಸಂತೆ ಮೈದಾನದ ನಿವಾಸಿ ರುಮಾನ್ , ಅತ್ಯಾಚಾರವೆಸಗಿದ ಆರೋಪಿ.

ಈತ ಪ್ರೀತಿಸುವ ನಾಟಕವಾಡಿ, ಮುರುಡೇಶ್ವರ, ಬೇಲೂರು, ಮಂಗಳೂರಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ವಿಡಿಯೋ ಮಾಡಿ, ಮನೆಯಲ್ಲಿ ಹೇಳಿದರೆ ವಿಡಿಯೋ, ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಬಾಲಕಿಯ ತಂದೆ ದೂರು ನೀಡಿದ್ದಾರೆ. ಈತನ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿದೆ.

ವಿಷಯ ತಿಳಿದು ಹಿಂದೂ ಕಾರ್ಯಕರ್ತರು ರುಮಾನ್‌ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಲಾಗಿದೆ. ಈ ಮಧ್ಯೆ, ಡ್ಯಾನ್ಸ್ ಮಾಸ್ಟರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಿಎಚ್‌ಪಿ ಜಿಲ್ಲಾ ಸಂಚಾಲಕ ಸೇರಿ 7 ಹಿಂದೂ ಕಾರ್ಯಕರ್ತರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.