ಅಮೃತ ನಗರೋತ್ಥಾನ ಹಂತ 3ರ ಯೋಜನೆಯಡಿ ₹4.26 ಕೋಟಿ ವೆಚ್ಚದಲ್ಲಿ ನಗರದ ಜೆ.ಎನ್. ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಶಾಸಕ ಆರ್.ವಿ ದೇಶಪಾಂಡೆ ಶುಕ್ರವಾರ ಉದ್ಘಾಟಿಸಿದರು.
ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ ಮಾಡಿದ ಶಾಸಕ
ಕನ್ನಡಪ್ರಭ ವಾರ್ತೆ ದಾಂಡೇಲಿಅಮೃತ ನಗರೋತ್ಥಾನ ಹಂತ 3ರ ಯೋಜನೆಯಡಿ ₹4.26 ಕೋಟಿ ವೆಚ್ಚದಲ್ಲಿ ನಗರದ ಜೆ.ಎನ್. ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಶಾಸಕ ಆರ್.ವಿ ದೇಶಪಾಂಡೆ ಶುಕ್ರವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕರ್ನಾಟಕದ ನಗರಸಭೆಗಳಲ್ಲಿ ದಾಂಡೇಲಿ ನಗರಸಭೆ ಅನುದಾನ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ನನ್ನಿಂದ ಆಗಿದೆ ಎಂದು ನೀವೆಲ್ಲರೂ ಭಾವಿಸಿದ್ದೀರಿ. ಆದರೆ, ಈ ಸಾಧನೆ ನಿಮ್ಮೆಲ್ಲರಿಂದಾಗಿ ಆಗಿದೆ. ನನ್ನ ಕ್ಷೇತ್ರವಾದ ದಾಂಡೇಲಿ, ಹಳಿಯಾಳ ತಾಲೂಕಿನ ಮತದಾರರೇ ಕಾರಣರಾಗಿದ್ದಾರೆ. ಇಂತಹ ಪ್ರಜ್ಞಾವಂತ ಮತದಾರರು ಇಲ್ಲದಿದ್ದರೆ ದಾಂಡೇಲಿ ನಗರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಹರಿದು ಬರಲು ಸಾಧ್ಯವಿರಲಿಲ್ಲ. ದಾಂಡೇಲಿ-ಹಳಿಯಾಳ ತಾಲೂಕಿನ ಜನರು ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಚಾಣಾಕ್ಷತನ ಹೊಂದಿದ್ದಾರೆ. ಇಂತಹ ಪ್ರಜ್ಞಾವಂತ ಮತದಾರರಿಂದಲೇ ನಾನು ಇಷ್ಟು ವರ್ಷ ಯಶಸ್ವಿಯಾಗಿ ರಾಜಕೀಯ ಜೀವನ ನಡೆಸಲು ಸಾಧ್ಯವಾಯಿತು ಎಂದರು.ತಹಶೀಲ್ದಾರ್ ಶೈಲೇಶ್ ಪರಮಾನಂದ, ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಪಂಚ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ರಿಯಾಜ್ ಬಾಬು ಸೈಯದ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಆಶಪಾಕ್ ಶೇಖ್ ಇದ್ದರು.ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರ್, ಮುಖಂಡರಾದ ಆರ್.ಪಿ. ನಾಯ್ಕ, ತಸ್ವರ ಸೌದಾಗರ, ಬಶೀರ್ ಗಿರಿಯಾಲ, ಬ್ಲಾಕ್ ಕಾಂಗ್ರೆಸ್ ಮಹಿಳಾಧ್ಯಕ್ಷೆ ರೇಣುಕಾ ಬಂದಮ್, ರಾಮಲಿಂಗ ಜಾಧವ, ದಾದಾಪೀರ್ ನದಿಮುಲ್ಲಾ, ಪ್ರಭುದಾಸ ಯನಿಬೆರ್ ಸೇರಿದಂತೆ ಇತರ ನಿಕಟಪೂರ್ವ ನಗರಸಭೆ ಸದಸ್ಯರು ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ಸ್ವಾಗತಿಸಿದರು. ಪತ್ರಕರ್ತ ಸಂದೇಶ ಜೈನ್ ನಿರೂಪಿಸಿದರು. ನಗರಸಭೆ ವ್ಯವಸ್ಥಾಪಕ ಪರಶುರಾಮ ಶಿಂಧೆ ವಂದಿಸಿದರು.ತ್ರಿಚಕ್ರ ವಾಹನಗಳ ವಿತರಣೆ:
ಇದೇ ಸಂದರ್ಭ ಶಾಸಕರು, ₹ 40 ಲಕ್ಷ ವೆಚ್ಚದ ತ್ರಿಚಕ್ರ ವಾಹನಗಳನ್ನು ಐವರು ಅಂಗವಿಕಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು. ಸುಮಾರು 30 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ.ಇದೇ ಸಂದರ್ಭ ಶಾಸಕರು, ₹ 40 ಲಕ್ಷ ವೆಚ್ಚದ ತ್ರಿಚಕ್ರ ವಾಹನಗಳನ್ನು ಐವರು ಅಂಗವಿಕಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು. ಸುಮಾರು 30 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ.