ಸಾರಾಂಶ
ದಾಂಡಿಯಾ ನೃತ್ಯದ ಮೂಲಕ ಜನರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಪೀಳಿಗೆಯಿಂದ ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಸಂಸ್ಕೃತಿಗಳ ಪರಂಪರೆ ಜೀವಂತವಾಗಿರಲಿದೆ.
ಧಾರವಾಡ:
ಕರ್ನಾಟಕದಲ್ಲಿ ದಸರಾ ಭಾಗವಾಗಿ ದಾಂಡಿಯಾ ನೃತ್ಯ ಪರಂಪರೆಯು ಪ್ರಮುಖ ಆಕರ್ಷಣೆಯಾಗಿ ಬೆಳೆದು ನಿಂತಿದೆ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.ಇಲ್ಲಿಯ ಕಲಾಶಕ್ತಿ ಫೌಂಡೇಶನ್ ವತಿಯಿಂದ ಎಂ.ಬಿ. ನಗರದ ಶಿವಾಲಯದಲ್ಲಿ ದಾಂಡಿಯಾ ನೃತ್ಯ ತರಬೇತಿಗೆ ಚಾಲನೆ ನೀಡಿದ ಅವರು, ನವರಾತ್ರಿ ಸಂಭ್ರಮ ಒಂಬತ್ತು ದಿನ ರಂಗೇರುತ್ತಿದ್ದು, ನಗರದ ವಿವಿಧೆಡೆ ನಡೆಯುತ್ತಿರುವ ದಾಂಡಿಯಾ ಹಾಗೂ ಗಾರ್ಬಾ ನೃತ್ಯ ಎಲ್ಲರಿಗೂ ನಮ್ಮ ಸಂಸ್ಕೃತಿಗಳ ಮಹತ್ವ ತಿಳಿಸಲು ಹಾಗೂ ಎಲ್ಲರ ನಡುವಿನ ಸಂಬಂಧ ಗಟ್ಟಿಮಾಡುತ್ತಿರುವುದು ಸಂತಸ ತಂದಿದೆ ಎಂದರು.
ದಾಂಡಿಯಾ ನೃತ್ಯದ ಮೂಲಕ ಜನರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಪೀಳಿಗೆಯಿಂದ ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಸಂಸ್ಕೃತಿಗಳ ಪರಂಪರೆ ಜೀವಂತವಾಗಿರಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘಟಕ ಮಾರ್ತಾಂಡಪ್ಪ ಕತ್ತಿ, ದಾಂಡಿಯಾ ತನ್ನ ಕಲಾತ್ಮಕ ಸೌಂದರ್ಯ ಮೀರಿ ಆಳವಾದ ಸಾಂಸ್ಕೃತಿಕ ಮಹತ್ವ ಸಾರುತ್ತದೆ ಎಂದು ಹೇಳಿದರು.
ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷೆ ಅನ್ನಪೂರ್ಣಾ ಪಾಟೀಲ, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್, ಮಲ್ಲನಗೌಡ ಪಾಟೀಲ ಇದ್ದರು. ಅಮೃತಾ ಪಾಟೀಲ ಪ್ರಾರ್ಥಿಸಿದರು. ಪೂಜಾ ಪಾಟೀಲ ನಿರೂಪಿಸಿದರು.