ಪಟ್ಟಣದ ಎನ್.ಎಂ.ಡಿ ಖ್ಯಾತಿಯ ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್‌ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ೧೧ ಜನರನ್ನು ಬಂಧಿಸಲಾಗಿದ್ದು, ಬಂಧನಕ್ಕೊಳಗಾಗಿರುವ ಕೊಲೆ ಆರೋಪಿಗಳ ಮನೆಗಳ ಮೇಲೆ ಪೊಲೀಸರ ತಂಡ ಭಾನುವಾರ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.

ಕನ್ನಡಪ್ರಭ ವಾರ್ತೆ ಮುಂಡಗೋಡ

ಪಟ್ಟಣದ ಎನ್.ಎಂ.ಡಿ ಖ್ಯಾತಿಯ ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್‌ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ೧೧ ಜನರನ್ನು ಬಂಧಿಸಲಾಗಿದ್ದು, ಬಂಧನಕ್ಕೊಳಗಾಗಿರುವ ಕೊಲೆ ಆರೋಪಿಗಳ ಮನೆಗಳ ಮೇಲೆ ಪೊಲೀಸರ ತಂಡ ಭಾನುವಾರ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೆ ನಾಲ್ವರು ಆರೋಪಿಗಳನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಬಳಸಲಾಗಿತ್ತು. ಈಗಾಗಲೇ ೩ ಪಿಸ್ತೂಲ್ , ೬ ಸಜೀವ ಗುಂಡುಗಳನ್ನು ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿದ್ದರು. ಅಸಲಿಗೆ ಎರಡು ವರ್ಷದ ಹಿಂದೆಯೇ ಹತ್ಯೆಗೆ ಪ್ಲಾನ್ ರಚಿಸಿದ್ದ ಹಂತಕರು, ಅದಕ್ಕಾಗೇ ಅವತ್ತೇ ಕಂಟ್ರಿಮೇಡ್ ಪಿಸ್ತೂಲ್ ಖರೀದಿಸಲು ರೆಡಿಯಾಗಿದ್ದರು. ಹೀಗಾಗಿ, ಪ್ರಮುಖ ಆರೋಪಿ ಮಂಜು ಕಾಜಗಾರಗೆ ಅವತ್ತು ಶಿರಸಿ ಜೈಲಲ್ಲಿ ಪರಿಚಯವಾಗಿದ್ದ ಪಿಸ್ತೂಲ್ ಕಾ ದಿಲ್ ರಾಜ್ ನ ಮೂಲಕ ಉತ್ತರ ಪ್ರದೇಶಕ್ಕೆ ಮಂಜು ಕಾಜಗಾರ ಜೊತೆ ಉತ್ತರ ಪ್ರದೇಶದ ಗೋರಕಪುರಕ್ಕೆ ತೆರಳಿದ್ದವರು ಇದೇ ನಾಲ್ವರು ಆರೋಪಿಗಳು. ತನಿಖೆ ವೇಳೆ ದಿಲ್ ರಾಜ್ ಹಾಗೂ ಮಂಜು ಕಾಜಗಾರ ಬಾಯಿಬಿಟ್ಟ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದರು. ಹೀಗಾಗಿ ಇವತ್ತು ೭ ತಂಡಗಳಲ್ಲಿ ಪೊಲೀಸು ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಾಲಗಾಂವಿ ಗ್ರಾಮದ ಮಂಜು ಕಾಜಗಾರ ಮನೆ, ಮುಂಡಗೋಡ ಕಿಲ್ಲೆ ಓಣಿಯ ಮಲ್ಲಿಕ್‌ಜಹಾನ ಜಹೀರ ಶಬ್ಬಿರ ಶೇಖ್, ಮಹಮ್ಮದ ಸಾಧಿಕ ಅಬ್ದುಲ್ ರಜಾಕ ದರ್ಗಾವಾಲೆ, ಮುಂಡಗೋಡ ಮಾರಿಕಾಂಬಾ ನಗರದ ಅಸಗರ ಅಲಿ ತಂದೆ ಮಕ್ತುಮ ಅಲಿ ದೊಡ್ಮನಿ, ಸಾಹೀಲ್ ಬಾಬಾಬುಡನ್ ಶೇಖ, ತನ್ವಿರ್, ಶ್ರೀಕಾಂತ್ ಸೇರಿದಂತೆ ೭ ಜನ ಆರೋಪಿಗಳ ಮನೆ ಮೇಲೆ ದಾಳಿ ಮಾರಕಾಸ್ತ್ರಗಳು ಸೇರಿದಂತೆ ಇನ್ನೂ ಏನಾದರೂ ಕ್ರಿಮಿನಲ್ ಹಿನ್ನೆಲೆಯ ದಾಖಲೆಗಳು ಸಿಗಬಹುದು ಎನ್ನುವ ನಿಟ್ಟಿನಲ್ಲಿ ಸರ್ಚ್ ಮಾಡಿದ್ದಾರೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಮಾರ್ಗದರ್ಶನ ಹಾಗೂ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.