ಕಾರ ಹುಣ್ಣಿಮೆ ಎತ್ತುಗಳ ಮೈಮೇಲೆ ದರ್ಶನ್ ಖೈದಿ ಸಂಖ್ಯೆ, ದಿ ಬಾಸ್‌ ಬರಹ

| Published : Jul 21 2024, 01:21 AM IST

ಸಾರಾಂಶ

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಸಂಪ್ರದಾಯದಂತೆ ಓಡಿಸುವ ಎತ್ತುಗಳ ಮೈಮೇಲೆ ನಟ ದರ್ಶನ ಕೈದಿ ಸಂಖ್ಯೆ ಹಾಗೂ ದಿ ಬಾಸ್ ಎಂದು ಬರೆದಿರುವುದು ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಗುಡಸ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಸಂಪ್ರದಾಯದಂತೆ ಓಡಿಸುವ ಎತ್ತುಗಳ ಮೈಮೇಲೆ ನಟ ದರ್ಶನ ಕೈದಿ ಸಂಖ್ಯೆ ಹಾಗೂ ದಿ ಬಾಸ್ ಎಂದು ಬರೆದಿರುವುದು ಗಮನ ಸೆಳೆಯಿತು.

ಊರಿನ ಜನರೆಲ್ಲ ಸೇರಿ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳಿಗೆ ಬಣ್ಣ ಬಳಿದು, ಸಿಂಗಾರ ಮಾಡಿ ಓಡಿಸುವುದು ಪ್ರತಿವರ್ಷದ ಸಂಪ್ರದಾಯ. ಶುಕ್ರವಾರ ಗ್ರಾಮದಲ್ಲಿ ನಡೆದ ಕಾರಹುಣ್ಣಿಮೆ ನಿಮಿತ್ತ ಎತ್ತು ಓಡಿಸುವ ಸಂಪ್ರದಾಯದ ವೇಳೆ ಒಂದು ಎತ್ತಿನ ಮೈಮೇಲೆ ಬಣ್ಣದಿಂದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್‌ ಕೈದಿ ಸಂಖ್ಯೆ 6106, ಇನ್ನೊಂದು ಎತ್ತಿನ ಮೈಮೇಲೆ D BOSS ಎಂದು ಬರೆದು ನಟನ ಮೇಲಿರುವ ಅಭಿಮಾನ ಪ್ರದರ್ಶಿಸಿದ್ದಾರೆ.

ಮುತ್ತು ಕಾಂಬಳೆ, ಮಾರುತಿ ಕಾಂಬಳೆ, ಪ್ರಮೋದ ಕೆಂಪರಾಯಗೂಳ, ರವಿಂದ್ರ ಮ್ಯಾಗೇರಿ, ಮಲ್ಲಪ್ಪ ದೇವರ್ಷಿ, ಮಾರುತಿ ಕಾಂಬಳೆ, ಮಹೇಶ ಬಂಗಾರಿ, ಅಣಪ್ಪಾ ಬಂಗಾರಿ ಸೇರಿದಂತೆ ಗುಡಸ್ ಗ್ರಾಮದ ಗ್ರಾಮಸ್ಥರು, ಗುರು ಹಿರಿಯರು ಉಪಸ್ಥಿತರಿದ್ದರು.