ದರ್ಶನ್‌ ಮಾಡಿದ್ದಾರೆ ಎನ್ನಲಾದ ಕೊಲೆ, ಬಂಧನದ ಕ್ಷಣಕ್ಷಣದ ವಿವರ

| Published : Jun 12 2024, 12:30 AM IST

ದರ್ಶನ್‌ ಮಾಡಿದ್ದಾರೆ ಎನ್ನಲಾದ ಕೊಲೆ, ಬಂಧನದ ಕ್ಷಣಕ್ಷಣದ ವಿವರ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆದ ದುಷ್ಕೃತ್ಯಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಿದ್ದು ಈ ಕೆಳಕಂಡಂತಿದೆ.

ಶನಿವಾರ

ಬೆಳಗ್ಗೆ 11 ಗಂಟೆ- ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅಪಹರಿಸಿದ ದರ್ಶನ್ ಸಹಚರರು

ಮಧ್ಯಾಹ್ನ 2- ಬೆಂಗಳೂರಿನ ಆರ್‌.ಆರ್‌.ನಗರದ ಪಟ್ಟಣಗೆರೆಗೆ ಕರೆದುತಂದ ಗ್ಯಾಂಗ್

ಮಧ್ಯಾಹ್ನ 3- ಪಟ್ಟಣಗೆರೆಯ ದರ್ಶನ್‌ ಸ್ನೇಹಿತನ ಶೆಡ್‌ಗೆ ರೇಣುಕಾಸ್ವಾಮಿ ಜತೆ ಪ್ರವೇಶ

ಮಧ್ಯರಾತ್ರಿ 12- ನಾಲ್ಕೈದು ತಾಸು ಮನಬಂದಂತೆ ಹಲ್ಲೆ ನಡೆಸಿ ರೇಣುಕಾಸ್ವಾಮಿ ಕೊಲೆ

ಭಾನುವಾರ

ಬೆಳಗಿನ ಜಾವ 3.40- ಸ್ಕಾರ್ಪಿಯೋ ಕಾರಿನಲ್ಲಿ ಚೀಲದಲ್ಲಿ ತುಂಬಿದ್ದ ರೇಣುಕಾಸ್ವಾಮಿ ಮೃತದೇಹ ಶೆಡ್‌ನಿಂದ ಸಾಗಣೆ

ಬೆಳಗಿನ ಜಾವ 4- ಸುಮನಹಳ್ಳಿ ಮೇಲ್ಸೇತುವೆ ಸಮೀಪದ ರಾಜಕಾಲುವೆಗೆ ಮೃತದೇಹ ಬಿಸಾಕಿ ಪರಾರಿ

ಬೆಳಗ್ಗೆ 8 ಗಂಟೆ- ಪೊಲೀಸರಿಗೆ ಅಪರಿಚಿತ ಮೃತದೇಹ ಪತ್ತೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ

ಸಂಜೆ 4- ಮೃತದೇಹ ಪತ್ತೆಯಾದ ಸ್ಥಳದ ಸಮೀಪದ ಅಪಾರ್ಟ್‌ಮೆಂಟ್‌ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ

ಸೋಮವಾರ

ರಾತ್ರಿ 8- ಪಿಎಸ್‌ಐಗೆ ಕರೆ ಮಾಡಿ ಶರಣಾಗತಿಯಾದ ದರ್ಶನ್‌ ಅವರ ನಾಲ್ವರು ಸಹಚರರು

ರಾತ್ರಿ 10- ಶರಣಾದ ಸಹಚರರ ವಿಚಾರಣೆ ಬಳಿಕ ಮತ್ತೆ ಏಳು ಮಂದಿಯ ಬಗ್ಗೆ ಮಾಹಿತಿ

ಮಧ್ಯರಾತ್ರಿ 12- ಕೊಲೆ ಕೃತ್ಯದಲ್ಲಿ ದರ್ಶನ್, ಗೆಳತಿ ಪವಿತ್ರಾ ಗೌಡ ಪಾತ್ರದ ಬಗ್ಗೆ ಹೇಳಿಕೆ

ಮಂಗಳವಾರ

ಬೆಳಗ್ಗೆ 8 ಗಂಟೆ- ಮೈಸೂರಿನಲ್ಲಿ ದರ್ಶನ್‌ರನ್ನು ವಶಕ್ಕೆ ಪಡೆದ ಕಾಮಾಕ್ಷಿಪಾಳ್ಯ ಪೊಲೀಸರು

ಬೆಳಗ್ಗೆ 10- ಬೆಂಗಳೂರಿನ ಆರ್‌.ಆರ್‌.ನಗರದ ಮನೆಯಲ್ಲಿ ಪವಿತ್ರಾಗೌಡ ಪೊಲೀಸ್‌ ವಶಕ್ಕೆ

ಬೆಳಗ್ಗೆ 11- ಮೈಸೂರಿನಿಂದ ಬೆಂಗಳೂರಿಗೆ ದರ್ಶನ್‌ರನ್ನು ಕರೆತಂದು ಪೊಲೀಸರ ವಿಚಾರಣೆ

ಸಂಜೆ 5- ಬೌರಿಂಗ್ ಆಸ್ಪತ್ರೆಯಲ್ಲಿ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ

ರಾತ್ರಿ 7- ಕೋರ್ಟ್‌ನಲ್ಲಿ ಎಲ್ಲ ಆರೋಪಿಗಳು ಹಾಜರು, 6 ದಿನ ಪೊಲೀಸ್ ವಶಕ್ಕೆ ನೀಡಿದ ಜಡ್ಜ್‌