ಕನ್ನಡ ಸಾಹಿತ್ಯದ ಮೌಲ್ಯಯುತ ಬೆಳವಣಿಗೆಗೆ ದಾಸ ಸಾಹಿತ್ಯ ಸಹಕಾರ

| Published : Feb 25 2024, 01:45 AM IST

ಕನ್ನಡ ಸಾಹಿತ್ಯದ ಮೌಲ್ಯಯುತ ಬೆಳವಣಿಗೆಗೆ ದಾಸ ಸಾಹಿತ್ಯ ಸಹಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಕ್ರಾಂತಿ, ಸಾಮಾಜಿಕ ಚಿಂತನೆ ಬೇರೆ ಆಗಿಸಿಕೊಂಡ ಸಾಹಿತ್ಯವೇ ದಾಸ ಸಾಹಿತ್ಯ. ಕನ್ನಡ ಸಾಹಿತ್ಯ ಮೌಲ್ಯಯುತವಾಗಿ ಬೆಳೆಯಲು ಇದು ಸಹಾಯಕವಾಗಿದೆ.

ಮುಂಡಗೋಡ:

ಸಾಮಾಜಿಕ ಕ್ರಾಂತಿ, ಸಾಮಾಜಿಕ ಚಿಂತನೆ ಬೇರೆ ಆಗಿಸಿಕೊಂಡ ಸಾಹಿತ್ಯವೇ ದಾಸ ಸಾಹಿತ್ಯ. ಕನ್ನಡ ಸಾಹಿತ್ಯ ಮೌಲ್ಯಯುತವಾಗಿ ಬೆಳೆಯಲು ಇದು ಸಹಾಯಕವಾಗಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ಎಸ್. ಸದಾನಂದ ಹೇಳಿದರು ಪಟ್ಟಣದ ನ್ಯಾಸರ್ಗಿ ದಲೈಲಾಮ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ದಿ. ರೇಣುಕಾ ಹನುಮಂತಪ್ಪ ಕಲಾಲ ಸ್ಮರಣಾರ್ಥ ನಡೆದ ದಾಸ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕದಲ್ಲಿ ಹಲವು ಚಳವಳಿಗಳು ನಡೆದಿವೆ. ಅವುಗಳಲ್ಲಿ ೧೨ನೇ ಶತಮಾನದಲ್ಲಿ ವಚನಗಳ ಮೂಲಕ ಶರಣರ ಮತ್ತು ದಾಸ ಸಾಹಿತ್ಯ ಚಳವಳಿಗಳು ನಡೆದಿವೆ. ದಾಸ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದ್ದು. ಇದು ಸಾಮಾಜಿಕ ಅಸಮಾಧಾನ ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದೆ ಎಂದರುಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಉತ್ತಮ ವಾತಾವರಣದಿಂದ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎನ್ನುವಂತೆ ದಾಸ ಸಾಹಿತ್ಯ ಕುರಿತು ವಿದ್ಯಾರ್ಥಿಗಳು ಮನನ ಮಾಡಿ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.ಪಾಂಡುರಂಗ ಟಿಕ್ಕೊಜಿ ಮಾತನಾಡಿ, ದಾಸ ಸಾಹಿತ್ಯ ಚಳವಳಿಯ ಪುರಂದರ ದಾಸರು, ಕನಕದಾಸರು ಇತರೆ ದಾಸರ ಮುಂಡಿಗೆಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಪ್ರಯೋಜಕರಾದ ಎಂ.ಎಚ್. ಕಲಾಲ, ಕಸಾಪ ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ವಿನಾಯಕ ಶೇಟ್, ಉಪನ್ಯಾಸಕ ರವಿ. ಭಜಂತ್ರಿ, ಆರ್.ಜೆ. ಬೆಳ್ಳೆನವರ, ಡಾ. ಪಿ.ಪಿ. ಛಬ್ಬಿ ಮಾತನಾಡಿದರು. ಉದ್ಯಮಿ ಸತೀಶ. ಕುರ್ಡೇಕರ್, ಡಾ. ಅನುಪಮ್, ಎಸ್.ಬಿ. ಹೂಗಾರ, ಸಂಗಪ್ಪ. ಕೋಳೂರು, ಗೋಪಾಲ. ಪಾಟೀಲ, ಆರ್.ಎಸ್. ಕಲಾಲ, ಗೌರಮ್ಮ ಕೊಳ್ಳಾನವರ, ಆನಂದ. ಹೊಸೂರು ಇದ್ದರು.