ಜ್ಞಾನ ಮತ್ತು ಕರ್ಮಗಳು ಒಟ್ಟಾಗಿ ಸಾಗಿದಾಗ ಮಾತ್ರ ಜೀವನ ಪರಿಪಕ್ವವಾಗಲು ಸಾಧ್ಯ.
ಸತ್ಚಿಂತನೆಗಳು, ಸದಾಚಾರಗಳು ಮನುಷ್ಯನ ಮನಸ್ಸನ್ನು ಶುದ್ಧವಾಗಿಡಲು ಪ್ರೇರಣೆ ನೀಡುತ್ತವೆ
ಕನ್ನಡಪ್ರಭ ವಾರ್ತೆ ಗದಗಜ್ಞಾನ ಮತ್ತು ಕರ್ಮಗಳು ಒಟ್ಟಾಗಿ ಸಾಗಿದಾಗ ಮಾತ್ರ ಜೀವನ ಪರಿಪಕ್ವವಾಗಲು ಸಾಧ್ಯ ಎಂದು ನರೇಗಲ್ ಹಿರೇಮಠ ಹಾಗೂ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗದಗ ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ 2026 ನೇ ಸಾಲಿನ ದಸರಾ ಮಹೋತ್ಸವ ಹಾಗೂ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸತ್ಚಿಂತನೆಗಳು ಮತ್ತು ಸದಾಚಾರಗಳು ಮನುಷ್ಯನ ಮನಸ್ಸನ್ನು ಶುದ್ಧವಾಗಿಡಲು ಪ್ರೇರಣೆ ನೀಡುತ್ತವೆ ಎಂದರು.ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರಾದ ಉದ್ಯಮಿ ಎಸ್.ಪಿ. ಸಂಶಿಮಠ (ಶ್ರೇಷ್ಠ ಉದ್ಯಮರತ್ನ), ಎಸ್‌ವೈಬಿಎಂಎಸ್ ಯೋಗಪಾಠ ಶಾಲೆಯ ಪ್ರಾಚಾರ್ಯ ಕೆ.ಎಸ್. ಪಲ್ಲೇದ (ಶ್ರೇಷ್ಠ ಯೋಗರತ್ನ), ಎಂ.ಎ. ಹಿರೇಒಡೆಯರ (ಇಂಗ್ಲಿಷ್ ಸಾಹಿತ್ಯರತ್ನ) ಹಾಗೂ ಗೀತಾ ಹೂಗಾರ (ಸಾಹಿತ್ಯ ಮತ್ತು ಕಲಾ ಸೇವಾರತ್ನ) ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸಮ್ಮುಖ ವಹಿಸಿದ್ದರು. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಗವಾಯಿಗಳು ಪುರಾಣ ಪ್ರವಚನ ನಡೆಸಿಕೊಟ್ಟರು. ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ, ಮಹಿಳಾ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಗಡಾದ, ಅನ್ನಪೂರ್ಣೇಶ್ವರಿ ಕಬಾಡರ, ಅಶ್ವಿನಿ ನೀಲಗುಂದ, ಅಮೃತಾ ವಾರಕರ, ವೇದಾ ಬಿದರೂರ, ಪ್ರಕಾಶ ಅಕ್ಕಿ, ವಿನಾಯಕ ಪಾಟೀಲ, ಶಿವಪ್ರಭು ನೀಲಗುಂದ, ಬಸವರಾಜ ಬ್ಯಾಹಟ್ಟಿ, ಪ್ರಭುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.ವಿಜಯಲಕ್ಷ್ಮೀ ಹೊಸಳ್ಳಿಮಠ ಸ್ವಾಗತಿಸಿದರು. ಈರಣ್ಣ ಬಾಳಿಕಾಯಿ ವಂದಿಸಿದರು.