ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕುಮ್ಮಟದುರ್ಗ ಹಾಗೂ ಹೇಮಕೂಟ ಪ್ರದೇಶದಲ್ಲಿ ಗಂಡುಗಲಿ ಕುಮಾರರಾಮನ ಆಡಳಿತಾವಧಿಯಲ್ಲಿ ಶಕ್ತಿ ಪ್ರದರ್ಶನ ಹಾಗೂ ವಿಜಯದ ಸಂಕೇತವಾಗಿ ದಸರಾ ಮತ್ತು ನವರಾತ್ರಿ ಆಚರಣೆಗಳಿಗೆ ಭದ್ರ ಅಡಿಪಾಯ ಹಾಕಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ದಸರಾ ಕೇವಲ ಹಬ್ಬವಲ್ಲ, ಇದು ನಮ್ಮ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸ ಹಾಗೂ ಕಲೆಯ ಪ್ರತೀಕ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಭಾನುವಾರ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬವು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ದುಷ್ಟಶಕ್ತಿಗಳ ನಿಗ್ರಹ ಹಾಗೂ ಶಕ್ತಿ ದೇವತೆಯಾದ ದುರ್ಗಾದೇವಿಯ ಧರ್ಮ ವಿಜಯದ ಸಂಕೇತವಾಗಿದೆ ಎಂದರು.

ದಸರಾ ಹಬ್ಬದಲ್ಲಿ ಕೆಲವೇ ಕೆಲವು ಕಲಾವಿದರು ಅಥವಾ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಕೊಪ್ಪಳ ಜಿಲ್ಲೆಯ ಎಲ್ಲಾ ಸಂಘಟನೆಗಳು, ಸಾರ್ವಜನಿಕರು ಒಟ್ಟಾಗಿ ಸೇರಿ ಹಬ್ಬವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕುಮ್ಮಟದುರ್ಗ ಹಾಗೂ ಹೇಮಕೂಟ ಪ್ರದೇಶದಲ್ಲಿ ಗಂಡುಗಲಿ ಕುಮಾರರಾಮನ ಆಡಳಿತಾವಧಿಯಲ್ಲಿ ಶಕ್ತಿ ಪ್ರದರ್ಶನ ಹಾಗೂ ವಿಜಯದ ಸಂಕೇತವಾಗಿ ದಸರಾ ಮತ್ತು ನವರಾತ್ರಿ ಆಚರಣೆಗಳಿಗೆ ಭದ್ರ ಅಡಿಪಾಯ ಹಾಕಿದರು. ಆ ನಂತರ ಆನೆಗುಂದಿ ಹಾಗೂ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ 300 ಹೆಚ್ಚು ವರ್ಷಗಳ ಕಾಲ ಆಚರಿಸಿಕೊಂಡು ಬರಲಾಯಿತು ಎಂದು ಅವರು ವಿವರಿಸಿದರು.

ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರಿನ ಒಡೆಯರ್ ರಾಜವಂಶಸ್ಥರ ಕಾಲದಿಂದ ಇಂದಿನವರೆಗೂ ಅದೇ ಭವ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ದಸರಾ ಹಾಗೂ ಸ್ಥಳೀಯ ಜಾತ್ರೆಗಳು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಂತಹ ಸೌಹಾರ್ದ ಆಚರಣೆಗಳು ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸುವ ಮತ್ತು ನಾಡಿನ ಒಗ್ಗಟ್ಟನ್ನು ಸಾರುವ ಜೀವಂತ ಉದಾಹರಣೆಗಳಾಗಿವೆ ಎಂದರು.

ಕನ್ನಡ ನಾಡಿನ ಕಲೆ, ಸಂಸ್ಕೃತಿ ಮತ್ತು ಸೈನಿಕ ಬಲವನ್ನು ಪ್ರದರ್ಶಿಸುವ ಈ ಮಹೋತ್ಸವವನ್ನು ಸಾರ್ವಜನಿಕರೆಲ್ಲರೂ ವಿಜೃಂಭಣೆಯಿಂದ ಆಚರಿಸಿ, ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.ಕೃಷ್ಣರಾಜ ಒಡೆಯರ್‌ ಆಡಳಿತ ದಿನವಾಗಿ ಘೋಷಿಸಿ

- ಸಿಎಂಗೆ ಶಾಸಕ ಟಿ.ಎಸ್‌. ಶ್ರೀವತ್ಸ ಮನವಿ

ಕನ್ನಡಪ್ರಭ ವಾರ್ತೆ ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮ ದಿನವಾದ ಜೂ.4 ರಂದು ರಾಜ್ಯ ಸರ್ಕಾರ ರಾಜರ್ಷಿ ಕೃಷ್ಣರಾಜ ಆಡಳಿತ ದಿನವನ್ನಾಗಿ ಘೋಷಿಸಬೇಕು ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಲ್ಲಿ ಮನವಿ ಮಾಡಿದ್ದಾರೆ.ಸಂಗೀತ ಕಲಾನಿಧಿ ಮೈಸೂರು ಕೆ. ವಾಸುದೇವಾಚಾರ್ಯರು ಮೈಸೂರಿನ ಅಗ್ರಹಾರದಲ್ಲಿ ವಾಸವಿದ್ದ ಮನೆಯನ್ನು ಸರ್ಕಾರದಿಂದ ಸಂರಕ್ಷಿಸಿ ಪಾರಪರಿಕ ಕಟ್ಟಡವಾಗಿ ಘೋಷಿಸಬೇಕು. ಅಂತೆಯೇ 100 ವರ್ಷ ಇತಿಹಾಸವಿರುವ ಇಟ್ಟಿಗೆಗೂಡಿನ ಶ್ರೀ ಕರಗ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.