ಅರಮನೆ ಆವರಣದ ದಸರಾ ಸಾಂಸ್ಕೃತಿಕ ವೈಭವಕ್ಕೆ ತೆರೆ

| Published : Oct 11 2024, 11:48 PM IST / Updated: Oct 11 2024, 11:49 PM IST

ಸಾರಾಂಶ

ಬಳಿಕ ಖ್ಯಾತ ಹಾರ್ಮೋನಿಯಂ ವಾದಕ ವೈ.ಎಂ. ಪುಟ್ಟಣ್ಣಯ್ಯ ಮತ್ತು ತಂಡದವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಗುಬ್ಬಿ ಕಂಪನಿ ಮೂಲದಿಂದ ಬಂದ ಪುಟ್ಟಣ್ಣಯ್ಯ ಅವರು ರಾಜ್ಯದ ಪ್ರಮುಖ ಹಾರ್ಮೋನಿಯಂ ವಾದಕರಲ್ಲಿ ಒಬ್ಬರು. ಇವರ ರಂಗಗೀತೆಗಳ ಗಾಯನ ಕೆಲಕಾಲ ಮೋಡಿ ಮಾಡಿತು.ಇಸ್ಕಾನ್‌ ನ ಸನ್ಯಾಸಿಗಳು ಮತ್ತು ಅನುಯಾಯಿಗಳು ನಡೆಸಿಕೊಟ್ಟ ಭಜನೆಯು ಭಕ್ತಿಯ ಲಹರಿ ಹರಿಸಿತು. ಇಸ್ಕಾನ್‌ಅನುಯಾಯಿಗಳ ಗುಂಪೊಂದು ಹಾಡಿಗೆ ಹೆಜ್ಜೆ ಹಾಕಿದರು. ಹರೇ ಹರೇ ಕೃಷ್ಣ ಹಾಡನ್ನು ಪಠಿಸುತ್ತ ಭಕ್ತಿ ಲೋಕದಲ್ಲಿ ತೇಲಿದರು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ರಂಗಗೀತೆ, ಹರೇ ಕೃಷ್ಣ ಹಾರೇ ಕೃಷ್ಣ ಭಜನೆ, ರಾಜಸ್ಥಾನಿ ಫೋಕ್‌ ಮತ್ತು ಸೂಫಿ ಗೀತೆಯೊಂದಿಗೆ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.

ಕಳೆದ ಒಂಬತ್ತು ದಿನಗಳಿಂದ ನಡೆದ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೂಫಿ ಗೀತೆಯೊಂದಿಗೆ ತೆರೆ ಎಳೆಯಲಾಯಿತು. ಮೊದಲಿಗೆ ಹಾವೇರಿಯ ಖಾಸಿಂ ಅಲಿ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಬಳಿಕ ಖ್ಯಾತ ಹಾರ್ಮೋನಿಯಂ ವಾದಕ ವೈ.ಎಂ. ಪುಟ್ಟಣ್ಣಯ್ಯ ಮತ್ತು ತಂಡದವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಗುಬ್ಬಿ ಕಂಪನಿ ಮೂಲದಿಂದ ಬಂದ ಪುಟ್ಟಣ್ಣಯ್ಯ ಅವರು ರಾಜ್ಯದ ಪ್ರಮುಖ ಹಾರ್ಮೋನಿಯಂ ವಾದಕರಲ್ಲಿ ಒಬ್ಬರು. ಇವರ ರಂಗಗೀತೆಗಳ ಗಾಯನ ಕೆಲಕಾಲ ಮೋಡಿ ಮಾಡಿತು.

ಇಸ್ಕಾನ್‌ ನ ಸನ್ಯಾಸಿಗಳು ಮತ್ತು ಅನುಯಾಯಿಗಳು ನಡೆಸಿಕೊಟ್ಟ ಭಜನೆಯು ಭಕ್ತಿಯ ಲಹರಿ ಹರಿಸಿತು. ಇಸ್ಕಾನ್‌ಅನುಯಾಯಿಗಳ ಗುಂಪೊಂದು ಹಾಡಿಗೆ ಹೆಜ್ಜೆ ಹಾಕಿದರು. ಹರೇ ಹರೇ ಕೃಷ್ಣ ಹಾಡನ್ನು ಪಠಿಸುತ್ತ ಭಕ್ತಿ ಲೋಕದಲ್ಲಿ ತೇಲಿದರು.

ಅಕ್ಕೈ ಪದ್ಮಸಾಲಿ ಅವರ ಒಂದೆಡೆ ರಂಗತಂಡದವರು ಜೋಗಪ್ಪ ಜೋಗಮ್ಮ ಚೌಡಿಕೆ ಪದಗಳನ್ನು ಪ್ರಸ್ತುತಪಡಿಸಿದರು. ನಂತರ ರಿಯಾಲಿಟಿ ಷೋನ ಖ್ಯಾತ ಗಾಯಕರು ಸ್ವತ ರಗ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಅನೇಕಾರು ಭಕ್ತಿಗೆ ಮತ್ತು ಸಿನಿಮಾ ಗೀತೆಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು.

ಕೊನೆಯದಾಗಿ ಮಮೆಖಾನ್‌ಮತ್ತು ಫ್ಲೇವರ್ಸ್‌ಆಫ್‌ಇಂಡಿಯಾ- ಕಂಟೆಪರರಿ ಡ್ಯಾನ್ಸ್‌ ಕಂಪನಿಯವರು ರಾಜಸ್ತಾನಿ ಫೋಕ್‌ಮತ್ತು ಸೂಫಿ ಡ್ಯಾನ್ಸರ್ಸ್‌ಜುಗಲ್‌ ಬಂದಿ ನಡೆಯಿತು.