ರಾಣಿಬೆನ್ನೂರು:ಸಾಂಸ್ಕೃತಿಕ ಪರಂಪರೆಯುಳ್ಳ ದಸರಾ ಧಾರ್ಮಿಕ ಮಹತ್ವ ಹೊಂದಿದ ಹಬ್ಬವಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ ಎಂ ಬೇವಿನಮರದ ಹೇಳಿದರು.

ನಗರದ ಮೆಡ್ಲೇರಿ ರಸ್ತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೋಬಳಿ ಹಾಗೂ ಗ್ರಾಮೀಣ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗದಹಳ್ಳಿಯ ಹಿರೇಮಠದ ವೀರಭದ್ರ ಶಿವಾಚಾರ್ಯರು, ಸಾಹಿತಿಗಳನ್ನು ಸೇರಿಸಿಕೊಂಡು ಕನ್ನಡ ನಾಡು ಕಟ್ಟುವುದರ ಮುಖಾಂತರ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ತೊಂದರೆಗಳಾದಾಗ ರಾಜ್ಯ ಸರ್ಕಾರಕ್ಕೆ ಸಾಹಿತ್ಯ ಪರಿಷತ್ತಿನ ಮೂಲಕ ಎಚ್ಚರಿಕೆಗೊಳಿಸುವಂಥ ಕೆಲಸಗಳು ನಡೆಯುತ್ತಿವೆ. ಅನೇಕ ಹೋರಾಟಗಳು ಒಟ್ಟಿಗೆ ಕನ್ನಡವನ್ನು ಕಟ್ಟುವ ಕೆಲಸ ಇವತ್ತು ನಡೆಯುತ್ತಿರುವುದು ವಿಶೇಷ. ಕೇವಲ ದಸರಾ ಹಬ್ಬವನ್ನು ಮನೋರಂಜನಾ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸದೆ ಸಂಸ್ಕಾರದ ಪ್ರತೀಕವಾಗಿ ಸಡಗರದ ಸಂಭ್ರಮದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಹಬ್ಬವನ್ನು ನಾಡಿನಾದ್ಯಂತ ತಮ್ಮ ತಮ್ಮ ಮನೆಯ ಹಬ್ಬವಾಗಿ ಆಚರಿಸುವಂತಾಗಲಿ ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸದಾ ನೆಲಸಲಿ ಎಂದರು.

ಹಿರಿಯ ಸಾಹಿತಿ ಡಾ. ಕೆ.ಎಚ್. ಮುಕ್ಕಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು.

ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡರ, ಜಿಲ್ಲಾ ಬಿಸಿಎಂ ನಿವೃತ್ತ ಅಧಿಕಾರಿ ವಿ.ಎಸ್.ಹಿರೇಮಠ, ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಹನುಮಂತಪ್ಪ ಕಬ್ಬಾರ, ಚಿತ್ರಾವತಿ ಬೆನ್ನೂರ, ಎ. ಬಿ. ರತ್ನಮ್ಮ, ವೀರೇಶ ಜಂಬಿಗಿ, ಜಗದೀಶ ಹುಳ್ಯಾಳ, ಎಸ್.ಎಚ್.ಮೇಟಿ, ಜಿ.ಜಿ. ಹೊಟ್ಟಿಗೌಡರ, ಅರ್ಚನಾ ಜೇಡರ ಉಪಸ್ಥಿತರಿದ್ದರು.