ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಅಂಗವಾಗಿ ನಡೆದ ಪುರುಷರ ಕುಸ್ತಿ ಪಂದ್ಯಾವಳಿ ಫ್ರೀ ಸ್ಟೈಲ್ಮತ್ತು ಗ್ರೆಕೊ ರೋಮನ್ ವಿಭಾಗದಲ್ಲಿ ಬೆಳಗಾವಿ ಕುಸ್ತಿ ಪಟುಗಳು ಮೇಲುಗೈ ಸಾಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವ ಅಂಗವಾಗಿ ನಡೆದ ಪುರುಷರ ಕುಸ್ತಿ ಪಂದ್ಯಾವಳಿ ಫ್ರೀ ಸ್ಟೈಲ್ಮತ್ತು ಗ್ರೆಕೊ ರೋಮನ್ ವಿಭಾಗದಲ್ಲಿ ಬೆಳಗಾವಿ ಕುಸ್ತಿ ಪಟುಗಳು ಮೇಲುಗೈ ಸಾಧಿಸಿದ್ದಾರೆ.57 ಕೆ.ಜಿ. ವಿಭಾಗದಲ್ಲಿ ಮೈಸೂರಿನ ಇ. ಮೋಹನರಾಜ್ಪ್ರಥಮ ಸ್ಥಾನ ಪಡೆದರು. ಕಲ್ಬುರ್ಗಿಯ ಅಮೃತ್ಗಾನವಾನ್ ಅವರು ದ್ವಿತೀಯ ಸ್ಥಾನಪಡೆದರು. 61 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಮುತ್ತು ಆದಿನ್ಪ್ರಥಮ, ಕೆಂಪಣ್ಣ ದ್ವಿತೀಯ, 65 ಕೆಜಿ ವಿಭಾಗದಲ್ಲಿ ಅಭಿಲಾಷ್ಜೋಗಲೆ ಪ್ರಥಮ, ವೈ.ಎ. ಮಲ್ಲೇಶ್ದ್ವಿತೀಯ ಸ್ಥಾನ ಪಡೆದರು.
70 ಕೆಜಿ ವಿಭಾಗದಲ್ಲಿ ಬೆಂಗಳೂರು ಗ್ರಾಮಾತಂರದ ಅರ್ಜುನ್ಪ್ರಥಮ, ಮೈಸೂರಿನ ಎಚ್.ಸಿ. ಸೂರಜ್ದ್ವಿತೀಯ, 74 ಕೆಜಿ ವಿಭಾಗದಲ್ಲಿ ಬೆಳಗಾವಿಯ ಸುನಿಲ್ಮೇತ್ರಿ ಪ್ರಥಮ, ಸಚಿನ್ಚಿಕಟ್ಟಿ ದ್ವಿತೀಯ, 79 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಅಯಾನ್ಬಿ. ಕಕ್ಕೇರಿ ಪ್ರಥಮ, ಮಹಂತೇಶ್ಗಡ್ಡಿ ದ್ವಿತೀಯ, 86 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ವರುಣ್ಕುಮ್ಕಳೆ ಪ್ರಥಮ, ಸಚಿನ್ಮಗ್ದುಮ್ದ್ವಿತೀಯ. 92 ಕೆ.ಜಿ. ವಿಭಾಗದಲ್ಲಿ ಮೈಸೂರಿನ ಹನುಮಂತ್ಕೆಂಪಣವರ್ ಪ್ರಥಮ, ಬೆಳಗಾವಿಯ ಸುರೇಶ್ಲಂಗೋಟಿ ದ್ವಿತೀಯ. 97 ಕೆಜಿ ವಿಭಾಗದಲ್ಲಿ ಬೆಳಗಾವಿಯ ಶ್ರೀರಾಜ್ಎಸ್. ಪಾಟೀಲ್ ಪ್ರಥಮ ಸ್ಥಾನಗಳಿಸಿದ್ದಾರೆ.ಗ್ರೆಕೊ ರೋಮನ್ಕುಸ್ತಿ:
55 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಯಶ್ವಂತ್ಸಣ್ಣಕ್ಕಿ ಪ್ರಥಮ, ಕಲ್ಬುರ್ಗಿಯ ದೇವರಾಜ್ಯೆಲ್ವೂರ್ದ್ವಿತೀಯ, 60 ಕೆ.ಜಿ ವಿಭಾಗದಲ್ಲಿ ಮೈಸೂರಿನ ಎಸ್.ಎಸ್. ಸಚಿನ್ಪ್ರಥಮ, ಬೆಳಗಾವಿಯ ಸುದೀಪ್ ನೆಸರ್ಗಿ ದ್ವಿತೀಯ, 63 ಕೆಜಿ ವಿಭಾಗದಲ್ಲಿ ಬೆಳಗಾವಿಯ ಸೂರಜ್ಗಂಧಿತ್ಕರ್ಪ್ರಥಮ, ಶಿವಪ್ಪ ಅಲ್ಬಾಲ್ದ್ವಿತೀಯ. 67 ಕೆ.ಜಿ ವಿಭಾಗದಲ್ಲಿ ಡಿ.ಸಿ. ಕೀರ್ತನಾ ಪ್ರಥಮ, ಬೆಳಗಾವಿ ಶ್ರೀಧರ್ಘೋರ್ಪಡೆ ದ್ವಿತೀಯ, 72 ಕೆಜಿ ವಿಭಾಗದಲ್ಲಿ ಬೆಳಗಾವಿಯ ಅಭಿನಂದನ್ಯಲ್ಗುಡ್ರಿ ಪ್ರಥಮ, 77 ಕೆಜಿ ವಿಭಾಗದಲ್ಲಿ ಬೆಳಗಾವಿ ದನೇಶ್ಗಲಗಲಿ ಪ್ರಥಮ, ಕಿರಣ್ನಾಯಕ್ದ್ವಿತೀಯ ಸ್ಥಾನ ಪಡೆದರು.82 ಕೆ.ಜಿ ವಿಭಾಗದಲ್ಲಿ ಮೈಸೂರಿನ ತುಷಾರ್ಗೌಡ ಪ್ರಥಮ, ಬೆಳಗಾವಿಯ ಮಹೇಶ್ಬಿರ್ಜೆ ದ್ವಿತೀಯ, 87 ಕೆಜಿ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ಹಂಚನಾಳ್ಪ್ರಥಮ,. 97 ಕೆಜಿ ವಿಭಾಗದಲ್ಲಿ ಮೈಸೂರಿನ ಎಸ್. ಸುಜನ್ಪ್ರಥಮ, ಬೆಳಗಾವಿಯ ಲಕ್ಷ್ಮಣ್ಸುತಾರ್ ದ್ವಿತೀಯ, 130 ಕೆಜಿ ವಿಭಾಗದಲ್ಲಿ ಬೆಳಗಾವಿಯ ವಿಜಯ್ಬಂಗ್ಯನವ್ಕರ್ಪ್ರಥಮ ಸ್ಥಾನ ಪಡೆದರು.
ಮಹಿಳೆಯರ ವಿಭಾಗದ ಕುಸ್ತಿ:ಮೈಸೂರು ಕುಸ್ತಿ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಮೈಸೂರು ಮತ್ತು ಬೆಳಗಾವಿ ತಂಡಗಳು ಮೇಲುಗೈ ಸಾಧಿಸಿವೆ. 53 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಸೋನಿಯಾ ಜಾಧವ್ಪ್ರಥಮ ಸ್ಥಾನ ಪಡೆದರು.
62 ಕೆಜಿ ವಿಭಾಗದಲ್ಲಿ ಮೈಸೂರಿನ ಆರ್. ರೀತು ಪ್ರಥಮ, ಬೆಳಗಾವಿಯ ಸವಿತಾ ಸಿದ್ದಿ ದ್ವಿತೀಯ, 65 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪ್ರಿಂಸಿಟಾ ಸಿದ್ದಿ ಪ್ರಥಮ, 68 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪ್ರತೀಕ್ಷಾ ಬೋವಿ ಪ್ರಥಮ, ಸ್ಥಾನಪಡೆದರು.