ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಕೊಡುಗೆ ಅಮೂಲ್ಯ-ಸೋಮನಾಥ ಕುದರಿ

| Published : Apr 16 2024, 01:05 AM IST

ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಕೊಡುಗೆ ಅಮೂಲ್ಯ-ಸೋಮನಾಥ ಕುದರಿ
Share this Article
  • FB
  • TW
  • Linkdin
  • Email

ಸಾರಾಂಶ

ಸನ್ಮಾರ್ಗ ತೋರಿಸುವ ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ನಗರ ದೇವಾಂಗ ಸಮಾಜದ ಅಧ್ಯಕ್ಷ ಸೋಮನಾಥ ಕುದರಿ ಹೇಳಿದರು.

ಹಾವೇರಿ: ಸನ್ಮಾರ್ಗ ತೋರಿಸುವ ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ನಗರ ದೇವಾಂಗ ಸಮಾಜದ ಅಧ್ಯಕ್ಷ ಸೋಮನಾಥ ಕುದರಿ ಹೇಳಿದರು. ಸ್ಥಳೀಯ ಶಿವಲಿಂಗ ನಗರದಲ್ಲಿರುವ ಬನಶಂಕರಿದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ಬಸವಾದಿ ಶರಣರ ವಚನಗಳು ಸಕಾರಾತ್ಮಕ ಬದಲಾವಣೆಗೆ ರಾಜಮಾರ್ಗ ಎಂಬುದು ಇದರಿಂದ ಸಾಬೀತಾಗುತ್ತದೆ. ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಬಸವಣ್ಣ, ದೇವರದಾಸಿಮಯ್ಯ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ಜಯಂತಿ ಆಚರಿಸುವ ಮೂಲಕ ಅವರ ಬದುಕಿನ ಅನೇಕ ಮಜಲುಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು. ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಮಹೇಶ ಕುದರಿ, ಎಂ. ಜಿ. ದೇವಾಂಗಮಠ, ರಾಜಶೇಖರ ಕುದರಿ, ದೇವೇಂದ್ರಪ್ಪ ಕುದರಿ, ಗೋಪಾಲ ಕುದರಿ, ವಿಶಾಲ ಕೊಪ್ಪಳ, ಶರದ ಕುದರಿ, ಎಸ್.ಬಿ ಹರಿಹರ, ನಾರಾಯಣ ಮತ್ತೂರ, ರಾಜು ತೆವರಿ, ಮಂಜುನಾಥ ಕುದರಿ, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಕುದರಿ, ವಸುದಾ ಕುದರಿ ಇದ್ದರು.