ಸಾರಾಂಶ
ನ.4ರಿಂದ 10ರ ವರೆಗೆ ಈ ಅಭಿಯಾನ ನಡೆಯಲಿದೆ, 4ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಲಿದ್ದಾರೆ. 7ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ನಡೆಯಲಿದೆ. 9ರಂದು ದತ್ತ ಮಾಲಾಧಾರಿಗಳು ಪಡಿ ಸಂಗ್ರಹ ಮಾಡಲಿದ್ದಾರೆ. 10ರಂದು ದತ್ತಪೀಠಕ್ಕೆ ಬೃಹತ್ ಶೋಭಾಯಾತ್ರೆ, ಶ್ರೀ ಸತ್ಯ ದತ್ತ ವೃತ ಮತ್ತು ದತ್ತ ಹೋಮ, ಪ್ರಸಾದ ವಿತರಣೆ ನಡೆಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಚಿಕ್ಕಮಗಳೂರಿನ ದತ್ತಪೀಠದ ಸಂಪೂರ್ಣ ಮುಕ್ತಿಗಾಗಿ ಶ್ರೀ ರಾಮ ಸೇನೆಯಿಂದ 21ನೇ ವರ್ಷದ ದತ್ತ ಮಾಲೆ ಅಭಿಯಾನದಲ್ಲಿ ಉಡುಪಿ ಜಿಲ್ಲೆಯಿಂದ ಈ ಬಾರಿ 500ಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ನ.4ರಿಂದ 10ರ ವರೆಗೆ ಈ ಅಭಿಯಾನ ನಡೆಯಲಿದೆ, 4ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಲಿದ್ದಾರೆ. 7ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ನಡೆಯಲಿದೆ. 9ರಂದು ದತ್ತ ಮಾಲಾಧಾರಿಗಳು ಪಡಿ ಸಂಗ್ರಹ ಮಾಡಲಿದ್ದಾರೆ. 10ರಂದು ದತ್ತಪೀಠಕ್ಕೆ ಬೃಹತ್ ಶೋಭಾಯಾತ್ರೆ, ಶ್ರೀ ಸತ್ಯ ದತ್ತ ವೃತ ಮತ್ತು ದತ್ತ ಹೋಮ, ಪ್ರಸಾದ ವಿತರಣೆ ನಡೆಸಲಿದ್ದಾರೆ.ನ.10ರಂದು ಚಿಕ್ಕಮಗಳೂರು ನಗರದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಅದರಲ್ಲಿ ಶ್ರೀ ರಾಮಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಜೇವರ್ಗಿಯ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಗಾಣಗಾಪುರದ ಶ್ರೀ ವಿವೇಕ ಚಿಂತಾವಣಿ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ.ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ತೆಲಂಗಾಣದ ಪ್ರಖರ ವಾಗ್ಮಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಂಸದ ಪ್ರತಾಪ್ ಸಿಂಹ, ಸಮಸ್ತ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನದ ಯೋಗಿ ಸಂಜಿತ್ ಸುವರ್ಣ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸೇನೆಯ ಮಂಗಳೂರು ವಿಭಾಗೀಯ ಅಧ್ಯಕ್ಷ ಜಯರಾಮ್ ಅಂಬೆಕಲ್ಲು, ಜಿಲ್ಲಾ ಕಾರ್ಯಾಧ್ಯಕ್ಷ ಶರತ್ ಮಣಿಪಾಲ, ಸಂಘಟನಾ ಕಾರ್ಯದರ್ಶಿ ಸುದೀಪ್ ನಿಟ್ಟೂರು ಮತ್ತು ಸಂಪರ್ಕ್ ಪ್ರಮುಖ್ ಸುಜಿತ್ ಉಪಸ್ಥಿತರಿದ್ದರು.* ಧಾರ್ಮಿಕ ಸಭೆಯ ಬೇಡಿಕೆಗಳು
ಈ ಧಾರ್ಮಿಕ ಸಭೆಯಲ್ಲಿ, ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ದತ್ತ ಪೀಠದಲ್ಲಿ ಕೇವಲ ಹಿಂದೂ ಅರ್ಚಕರಿಗೆ ಅವಕಾಶ ನೀಡಬೇಕು, ದತ್ತ ಭಕ್ತರಿಗೆ ಮಹಾಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಬೇಕು, ನಿತ್ಯ ಗಾಣಗಾಪುರದಿಂದ ದತ್ತ ಪೀಠಕ್ಕೆ ಬಸ್ ಸೇವೆ ಆರಂಭಿಸಬೇಕು.