ಗುರು ದತ್ತಾತ್ರೇಯರು ನೆಲೆಸಿದ, ಅತ್ರಿ ಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ ದತ್ತಪೀಠವಾಗಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ದತ್ತ ಜಯಂತಿಗೆ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಈ ಭಾಗದ ಕೆಲವೇ ತಾಲೂಕುಗಳಲ್ಲಿ ಮಾತ್ರ ದತ್ತಮಾಲಾ ಧಾರಣೆ ಮಾಡುತ್ತಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರ ಸತತ ಪರಿಶ್ರಮದಿಂದ ಇಡೀ ರಾಜ್ಯದಾದ್ಯಂತ ಎಲ್ಲಾ ಹಿಂದುಗಳ ಭಾಗವಹಿಸುವ ಸುವರ್ಣ ಅವಕಾಶ ನಮಗೆ ಒದಗಿ ಬಂದಿದೆ. ಇಂದು ಸಮಸ್ತ ಹಿಂದೂ ಸಮಾಜದ ಕಾರ್ಯಕರ್ತರು ಶ್ರದ್ಧಾ ಭಕ್ತಿಗಳಿಂದ ದತ್ತ ಕರ್ನಾಟಕದ ಅಯೋಧ್ಯೆ ಎಂದು ಪ್ರಸಿದ್ಧವಾಗಿರುವ ದತ್ತಪೀಠದಲ್ಲಿ ದತ್ತ ಜಯಂತಿಯಲ್ಲಿ ಭಾಗಿಯಾಗುವುದು ಸೌಭಾಗ್ಯವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು "ಕರ್ನಾಟಕದ ಅಯೋಧ್ಯೆ " ಎಂದೇ ಖ್ಯಾತಿಯಾಗಿರುವ ಧಾರ್ಮಿಕ ಕ್ಷೇತ್ರ ದತ್ತಪೀಠ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ ಎಂದು ಪುಷ್ಪಗಿರಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಕೇಂದ್ರ ಸಮಿತಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಬಿ. ಶಿವರಾಜು ಹೇಳಿದರು.ಚೆನ್ನಕೇಶವ ದೇಗುಲದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ತು ಬಜರಂಗದಳ ವತಿಯಿಂದ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುರು ದತ್ತಾತ್ರೇಯರು ನೆಲೆಸಿದ, ಅತ್ರಿ ಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ ದತ್ತಪೀಠವಾಗಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ದತ್ತ ಜಯಂತಿಗೆ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಈ ಭಾಗದ ಕೆಲವೇ ತಾಲೂಕುಗಳಲ್ಲಿ ಮಾತ್ರ ದತ್ತಮಾಲಾ ಧಾರಣೆ ಮಾಡುತ್ತಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರ ಸತತ ಪರಿಶ್ರಮದಿಂದ ಇಡೀ ರಾಜ್ಯದಾದ್ಯಂತ ಎಲ್ಲಾ ಹಿಂದುಗಳ ಭಾಗವಹಿಸುವ ಸುವರ್ಣ ಅವಕಾಶ ನಮಗೆ ಒದಗಿ ಬಂದಿದೆ. ಇಂದು ಸಮಸ್ತ ಹಿಂದೂ ಸಮಾಜದ ಕಾರ್ಯಕರ್ತರು ಶ್ರದ್ಧಾ ಭಕ್ತಿಗಳಿಂದ ದತ್ತ ಕರ್ನಾಟಕದ ಅಯೋಧ್ಯೆ ಎಂದು ಪ್ರಸಿದ್ಧವಾಗಿರುವ ದತ್ತಪೀಠದಲ್ಲಿ ದತ್ತ ಜಯಂತಿಯಲ್ಲಿ ಭಾಗಿಯಾಗುವುದು ಸೌಭಾಗ್ಯವಾಗಿದೆ. ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.ಸಮಾಜ ಸೇವಕ ಸಂತೋಷ್ ದಪ್ಪಾ ಮಾತನಾಡಿ, ಜಯಂತಿ ಎಂಬುದು ನಮ್ಮ ಹಿಂದೂ ಧರ್ಮದ ಪವಿತ್ರ ಹಬ್ಬ. ಇದನ್ನು ಹಿಂದಿನಿಂದಲೂ ಸಹ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಅದರಂತೆ ಇಂದು ಬೈಕ್ ಜಾಥಕೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಅವರಿಗೆ ಶುಭಾಶಯಗಳು ಕೋರುವವರ ಜೊತೆಗೆ ಮುಂದಿನ ದಿನಗಳಲ್ಲಿ ದತ್ತ ಪೀಠ ಹಿಂದುಗಳ ಧರ್ಮಪೀಠವಾಗಲಿ ಎಂದರು.ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದ ಸಂಚಾಲಕ ನಾಗೇಶ್, ಧನಪಾಲ್, ಹೇಮಂತ್, ಭರತ್ ಸೇರಿದಂತೆ ಇತರರು ಹಾಜರಿದ್ದರು.