ರೇವೂರ್‌ಗೆ ನನ್ನ ಬಗ್ಗೆ ಮಾತಾಡು ನೈತಿಕತೆ ಇಲ್ಲ: ಅಲ್ಲಂಪ್ರಭು

| Published : Feb 12 2024, 01:36 AM IST

ಸಾರಾಂಶ

ಅಪ್ಪು ಗೌಡ್ರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅದ್ಯಕ್ಷರಾಗಿ ಎರಡು ವರ್ಷ ದಕ್ಷಿಣ ಮತಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಶೂನ್ಯ, ಅವರಿಗೆ ಬೇಕಾದವರಿಗೆ ಟೆಂಡರ್‌ ನೀಡಿ ಅವರಿಂದ ಕೋಟ್ಯಂತರ ರುಪಾಯಿ ಹಣ ಮಾಡಿಕೊಂಡು ಯಾದಗಿರಿ ಕಡೆಚೂರಿನಲ್ಲಿ ಸುಮಾರು ರು.200ಕೋಟಿ ಮೆಡಿಸಿನ್ ಕಂಪನಿ ಹಾಕಿದ್ದಾರೆ, ಇದೇ ಅವರ ಸಾಧನೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ದಕ್ಷಿಣ ಮತಕ್ಷೆತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಚುನಾವಣೆಯಲ್ಲಿ ಮತದಾರರು 21 ಸಾವಿರ ಮತಗಳ ಅಂತರದಿಂದ ಸೋಲಿಸಿ ನನಗೆ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಹೀನಾಯ ಸೋಲಿನಿಂದ ಹತಾಶರಾಗಿ ಮನಬಂದಂತೆ ಮಾಧ್ಯಮಗಳಿಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಶಾಸಕ ರೇವೂರ್‌ಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲವೆಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಸೇರಿ ಹಲವಾರು ಜನಪರ ಯೋಜನೆಗಳನ್ನು ಚುನಾವಣೆ ಸಮಯದಲ್ಲಿ ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಭರವಸೆಗಳನ್ನು ಈಡೇರಿಸಿದ್ದೆವೆ. ಜನರಪರ ಯೋಜನೆಗಳ ಉಪಯೋಗ ಸಾರ್ವಜನಿಕರು ಪಡೆಯುತ್ತಿದ್ದಾರೆ.

ಜನಪರ ಯೋಜನೆ ಜನರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಅಪ್ಪು ಗೌಡ್ರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅದ್ಯಕ್ಷರಾಗಿ ಎರಡು ವರ್ಷ ದಕ್ಷಿಣ ಮತಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಶೂನ್ಯ, ಅವರಿಗೆ ಬೇಕಾದವರಿಗೆ ಟೆಂಡರ್‌ ನೀಡಿ ಅವರಿಂದ ಕೋಟ್ಯಂತರ ರುಪಾಯಿ ಹಣ ಮಾಡಿಕೊಂಡು ಯಾದಗಿರಿ ಕಡೆಚೂರಿನಲ್ಲಿ ಸುಮಾರು ₹200ಕೋಟಿ ಮೆಡಿಸಿನ್ ಕಂಪನಿ ಹಾಕಿದ್ದಾರೆ, ಇದೇ ಅವರ ಸಾಧನೆ ಎಂದು ದೂರಿದರು.

ಸುಮಾರು ₹16 ಕೋಟಿ ಕೊಟ್ಟು ಕೇಂದ್ರ ಬಸ್ ನಿಲ್ದಾಣ ಹತ್ತಿರ ಜಿಡಿಎ ನಿವೇಶನ ಖರೀದಿಸಿ ಅದರಲ್ಲಿ 20 ಕೋಟಿ ವೆಚ್ಚ ಮಾಡಿ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ. ಕೆಕೆಆರ್‌ಡಿಬಿ ಅನುದಾನ ಟೆಂಡರ್‌ ಪಡೆದವರಿಂದ ಸ್ವತಃ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಇವರು ಅಭಿವೃದ್ಧಿ ಮಾಡದೆ ಇರುವುದರಿಂದ ಜನರು ಇವರ ಸರ್ವಾಧಿಕಾರ ಮತ್ತು ಲೂಟಿ ಆಡಳಿತಕ್ಕೆ ಧಿಕ್ಕರಿಸಿ ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ಆದ್ದರಿಂದ ನಾನು ಖಂಡಿತ ಜನರ ಸಮಸ್ಯೆ ಆಲಿಸಿ ಅಭಿವೃದ್ಧಿ ಕೆಲಸ ಮಾಡುತ್ತೆನೆ. ಹಿಂದಿನ ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕಾರ್ಡ್ ಸಮೇತ ಚರ್ಚೆಗೆ ಬರಲಿ, ಜನರು, ಅವರು ಕೇವಲ ಪೇಪರ್‌ನಲ್ಲಿ ಮಾಡಿದ ಅಭಿವೃದ್ಧಿ ನೋಡಿಯೇ ಬೇಸತ್ತಿದ್ದರು. ಸೈಕಲ್ ಟ್ರ್ಯಾಕ್ ಕಾಮಗಾರಿ ಎಲ್ಲಿದೆ? ಸುಮಾರು ₹30 ಕೋಟಿ ಕಾಮಗಾರಿ ಅವೈಜ್ಞಾನಿಕ ಕಾಮಗಾರಿ, ಅಪ್ಪನ ಕೆರೆ ಕಾಮಗಾರಿ ಸುಮಾರು ₹20 ಕೋಟಿ ಎಲ್ಲಿವೆ? ಅವರ ಅಭಿವೃದ್ಧಿ ಕೆಲಸ ಅವರು ತೊರಿಸಲಿ? ಅಭಿವೃದ್ಧಿ ಮಾಡಿದರೆ ಅವರನ್ನು ಜನ ಯಾಕೆ ಹೀನಾಯವಾಗಿ ಸೊಲಿಸುತ್ತಿದ್ದರು? ಮೊದಲು ಅದನ್ನು ಮನವರಿಕೆ ಮಾಡಿಕೊಳ್ಳಲ್ಲಿ ಎಂದು ಸಲಹೆ ನೀಡಿದ್ದಾರೆ.

ನಮ್ಮ ಕುಟುಂಬದವರು ಯಾರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ, ಮಾಡಲು ನಾನು ಅವಕಾಶ ಸಹ ‌ನೀಡುವುದಿಲ್ಲ. ಅಪ್ಪು ಗೌಡರು ಕೇವಲ ಇಬ್ನರನ್ನು ಮಾತ್ರ ಬೆಳೆಸಿದ್ದಾರೆಂದು ಜನ ಮಾತಾಡತ್ತಿದ್ದಾರೆ. ದಕ್ಷಿಣ ಮತ ಕ್ಷೇತ್ರ ಅಭಿವೃದ್ಧಿ ಮಾಡುವುದು ಬಿಟ್ಟು ಸ್ವತಃ ಅಭಿವೃದ್ಧಿಯಾದ ಅಪ್ಪು ಗೌಡ್ರಿಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲವೆಂದಿದ್ದಾರೆ.

ತಮ್ಮನ್ನು ಸ್ವಜನ ಪಕ್ಷಪಾತ, ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದೀರಿ ಎಂದು ಟೀಕಿಸಿದ್ದಾರೆ. ಅವರು ಹೀಗೆ ಟೀಕಿಸುವ ಪೂರ್ವದಲ್ಲಿ ತಮ್ಮ ಇತಿಹಾಸ ಸ್ವಲ್ಪ ಮೆಲಕು ಹಾಕಲಿ, ಪಿಡಬ್ಲೂಡಿ ಎಇಇ ಪಟ್ಟಣಶೆಟ್ಟಿ ಎಂಬುವವರ ಬಗ್ಗೆ ಮಾತನಾಡಿದ್ದಾರೆ. ಇವರು ನಮ್ಮ ಬಂಧುಗಳಾದರೂ ಕಳೆದ 2 ದಶಕದಿಂದ ದಿ. ಚಂದ್ರಶೇಖರ ಪಾಟೀಲ್‌ ರೇವೂರ್‌ ಹಿಡಿದುಕೊಂಡು ದತ್ತಾತ್ರೇಯ ರೇವೂರ್‌ ವರೆಗೂ ಅಲ್ಲೇ ಇದ್ದು ಅವರ ಸೇವೆಯನ್ನೇ ಮಾಡಿದ್ದಾರೆ. ಸರ್ಕಾರದ ವರ್ಗಾವಣೆಯಲ್ಲಿ ಅವರು ಇದೀಗ ಪಿಡಬ್ಲೂಡಿಗೆ ಬಂದಿದ್ದಾರೆ. ಇದರಲ್ಲಿ ನನ್ನದೇನು ಪಾತ್ರವಿದೆ? ಆರೋಪ ಮಾಡುವ ಮುನ್ನ ಮಾಜಿ ಶಾಸಕರು ಇದನ್ನು ಗಮನಿಸಬೇಕಿತ್ತು ಎಂದು ಹೇಳಿದ್ದಾರೆ.

5 ದಶಕಗಳ ರಾಜಕಾರಣ ಮಾಡಿದವ ಈಗಲೂ ನಾನೇ ಶಾಸಕ, ಪುತ್ರರು ಸೇರಿದಂತೆ ಯಾರಿಗೂ ಹಸ್ತಕ್ಷೇಪಕ್ಕೆ ಅವಕಾಶ ನೀಡಿಲ್ಲ, ನೀಡೋದಿಲ್ಲವೆಂದು ಅಲ್ಲಂಪ್ರಭು ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಕಣ್ಣಿ ತರಕಾರಿ ಮಾರುಟಕ್ಕೆ ಟೆಂಡರ್‌ ಗೋಲ್ಮಾಲ್‌ ಜನರಿಗೆ ಗೊತ್ತಿರೋ ಸಂಗತಿ. ಈ ಕೆಲಸ ಬಿಜೆಪಿ ಅವಧಿಯಲ್ಲೇ ಮಲಗಿತ್ತು. ಇದೀಗ ವೇಗದಲ್ಲಿದೆ. ನಗರದಲ್ಲಿರುವ ಅಪ್ಪನ ಕೆರೆ ಅಭಿವೃದ್ಧಿಗೆ ಗ್ರಹಣ ಹಿಡಿಸಿದ ಕೀರ್ತಿ ರೇವೂರ್‌ ಗೌಡರಿಗೇ ಸೇರುತ್ತದೆ. ನಾನು ನಿರಂತರ ಜನ ಸೇವೆಗೆ ಬದ್ಧನಾಗಿರುವ ಶಾಸಕ. ಬೆಳಗಿನ 6 ಗಂಟೆಯಿಂದ ರಾತ್ರಿ 11 ಗಂಟೆಯವರಗೂ ಜನರಿಗೆ ಲಭ್ಯ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೊತ್ತಿದೆ, ಮಾಜಿ ಶಾಸಕರ ಸರ್ಟಿಫಿಕೇಟ್‌ ತಮಗೆ ಬೇಕಿಲ್ಲವೆಂದು ಅಲ್ಲಂಪ್ರಭು ಹೇಳಿದ್ದಾರೆ.