ನನ್ನ ಜೊತೆ ಸರಿಯಾಗಿ ನನ್ನ ಗಂಡ ಇರಲು ನನ್ನ ಅತ್ತೆ ಬಿಡುತ್ತಿಲ್ಲ. ಸಾಕಷ್ಟು ಕಿರುಕುಳ ನೀಡುತ್ತಿದ್ದು ನನ್ನ ಮೇಲೆ ಅನುಮಾನ ಪಡುತ್ತಿದ್ದಾರೆ. ಆಸ್ತಿ, ಚಿನ್ನಾಭರಣ ತರುವಂತೆ ಕಿರುಕುಳ ನೀಡಿ ಹೊಡೆಯಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಾಗಡಿ

ನನ್ನ ಗಂಡನ ಜೊತೆ ಬಾಳಲು ಅವಕಾಶ ಕೊಡುವಂತೆ ಶಿಕ್ಷಣ ಸಂಸ್ಥೆ ಮುಂದೆ ಸೊಸೆ ಹಾಗೂ ಅತ್ತೆ ಮಾವ ಧರಣಿ ಕೂತ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಪಟ್ಟಣದ ಹೆಸರಾಂತ ವಿದ್ಯಾ ಸಂಸ್ಥೆ ಹೊಸಪೇಟೆಯ ಮಾರುತಿ ವಿದ್ಯಾ ಸಂಸ್ಥೆ ಮಾಲೀಕ ಗಂಗರಾಜು, ಅತ್ತೆ ವರಲಕ್ಷ್ಮೀ, ಪತಿ ರೂಪೇಶ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ಗಂಗರಾಜು ಪುತ್ರ ರೂಪೇಶ್ ಜತೆ ಕಳೆದ ಒಂದು ವರ್ಷದ ಹಿಂದೆ ತಾಲೂಕಿನ ಮಾದಿಗೊಂಡನಹಳ್ಳಿ ಗ್ರಾಮದ ನಾಗಣ್ಣ ಮತ್ತು ಜಯಲಕ್ಷ್ಮೀ ದಂಪತಿ ಮಗಳಾದ ಪ್ರೀತಿ ಅವರ ಜತೆ ವಿವಾಹವಾಗಿದ್ದು, ವಿವಾಹವಾದ ಒಂದೇ ತಿಂಗಳಿಗೆ ವರದಕ್ಷಿಣೆ ಕಿರುಕುಳ ಕೊಡಲಾಗುತ್ತಿದೆ.

ನನ್ನ ಜೊತೆ ಸರಿಯಾಗಿ ನನ್ನ ಗಂಡ ಇರಲು ನನ್ನ ಅತ್ತೆ ಬಿಡುತ್ತಿಲ್ಲ. ಸಾಕಷ್ಟು ಕಿರುಕುಳ ನೀಡುತ್ತಿದ್ದು ನನ್ನ ಮೇಲೆ ಅನುಮಾನ ಪಡುತ್ತಿದ್ದಾರೆ. ಆಸ್ತಿ, ಚಿನ್ನಾಭರಣ ತರುವಂತೆ ಕಿರುಕುಳ ನೀಡಿ ಹೊಡೆಯಲಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ನಾನು ಮನೆಯಿಂದ ಹೊರ ಬಂದಿದ್ದು, ನಂತರ ಠಾಣೆಯಲ್ಲಿ ಇಬ್ಬರೂ ಒಪ್ಪಿಕೊಂಡು 10 ದಿನದ ನಂತರ ಮತ್ತೆ ನನ್ನ ಗಂಡ ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಲಾಗಿತ್ತು. 25 ದಿನವಾದರೂ ಕೂಡ ಕರೆದುಕೊಂಡು ಹೋಗಿಲ್ಲ, ಈ ಬಗ್ಗೆ ನನಗೆ ನ್ಯಾಯ ಕೊಡುವಂತೆ ಪ್ರೀತಿ ರವರ ತಂದೆ ತಾಯಿ ಪಟ್ಟಣದ ಹೊಸಪೇಟೆಯ ಮಾರುತಿ ಶಾಲಾ ಮುಂಭಾಗದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.ವಿಷಯ ದೊಡ್ಡದಾಗುತ್ತಿದ್ದಂತೆ ಮಾರುತಿ ಶಾಲಾ ಬಳಿ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಮುಖಂಡರಾದ ಮಾಡಬಾಳ್ ಜಯರಾಂ, ಜಯಮ್ಮ, ಶೈಲಜಾ, ಸೇರಿದಂತೆ ಅನೇಕ ಮುಖಂಡರು ಮಾರುತಿ ಸಂಸ್ಥೆಯ ಮಾಲೀಕರಾದ ಗಂಗರಾಜು ಜತೆ ರಾಜಿ ಮಾಡಲಾಯಿತು. ಆದರೆ ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗಲಿಲ್ಲ.

ಶಾಲಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರೀತಿ ಕುಟುಂಬದವರು ಶಾಲಾ ಅವಧಿ ಮುಗಿದ ನಂತರ ಗಂಡನ ಮನೆಯ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದು ನ್ಯಾಯಕ್ಕಾಗಿ ಪ್ರೀತಿ ಕುಟುಂಬ ಅಂಗಲಾಚುತ್ತಿದ್ದರು. ಈ ಪ್ರಕರಣ ಯಾವ ತಿರುಗು ಪಡೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.

ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಂಗರಾಜು, ವರದಕ್ಷಣೆ ಕಿರುಕುಳ ನೀಡಿಲ್ಲ. ನನ್ನ ಮಗನ ಜೊತೆ ನನ್ನ ಸೊಸೆ ಬಾಳುವೆ ಮಾಡಲಿ. ನಾನು ಯಾವುದೇ ಕಾರಣಕ್ಕೂ ಸೊಸೆ ಬೇಡ ಎಂದು ಹೇಳಿಲ್ಲ. ಆದರೆ ನನ್ನ ಶಿಕ್ಷಣ ಸಂಸ್ಥೆ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ನ್ಯಾಯ ಕೇಳುವವರು ಮನೆಗೆ ಬಂದು ನ್ಯಾಯ ಕೇಳಬಹುದಿತ್ತು ತಿಳಿಸಿದ್ದಾರೆ.

ಕೋಟ್‌...

ನಾನು ಗಂಡನ ಜತೆ ಬಾಳುವೆ ಮಾಡಬೇಕು ನಾನು ಠಾಣೆಯಲ್ಲಿ ನೀಡಿರುವ ದೂರನ್ನು ವಾಪಸ್ ಪಡೆಯುತ್ತೇನೆ. ನನ್ನ ಗಂಡನ ಜೊತೆ ಬಾಳಲು ಅವಕಾಶ ಮಾಡಿಕೊಡಿ, ನನ್ನ ಗಂಡ ಎಲ್ಲಿದ್ದಾನೆ ಎಂಬುದು ತಿಳಿಯುತ್ತಿಲ್ಲ.ಪ್ರೀತಿ, ಸಂತ್ರಸ್ತ ಸೊಸೆ