ಬಿದಲೂರಲ್ಲಿ ತಂದೆಯಿಂದಲೇ ಮಗಳ ಹತ್ಯೆ

| Published : Oct 13 2023, 12:15 AM IST

ಸಾರಾಂಶ

ದೇವನಹಳ್ಳಿ: ತಾಲೂಕಿನ ಬಿದಲೂರು ಗ್ರಾಮದಲ್ಲಿ ಮರ್ಯಾದೆಗೆ ಅಂಜಿ ತಂದೆಯೇ ತನ್ನ ಮಗಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆಯೊಂದು ವರದಿಯಾಗಿದೆ.
ದೇವನಹಳ್ಳಿ: ತಾಲೂಕಿನ ಬಿದಲೂರು ಗ್ರಾಮದಲ್ಲಿ ಮರ್ಯಾದೆಗೆ ಅಂಜಿ ತಂದೆಯೇ ತನ್ನ ಮಗಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆಯೊಂದು ವರದಿಯಾಗಿದೆ. ಕವನ(20) ಹತ್ಯೆಗೀಡಾದ ಯುವತಿ. ಬಿದಲೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಮಂಜುನಾಥ ಮಗಳನ್ನು ಹತ್ಯೆ ಮಾಡಿರುವ ಆರೋಪಿ. ತನ್ನ ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿರುವ ವಿಷಯ ತಿಳಿದು ಬುಧವಾರ ರಾತ್ರಿ ಕೋಳಿ ಕೊಯ್ಯುವ ಚಾಕುವಿನಿಂದ ತಮ್ಮ ಕುಟುಂಬದ ಮರ್ಯಾದೆ ಹೋಗುತ್ತದೆಂದು ಮಗಳನ್ನು ಕತ್ತು ಕೊಯ್ದು ಕೊಲೆ ಮಾಡಿ ನಂತರ ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಎಸ್ಪಿ ಪುರುಷೋತ್ತಮ ಮಾತನಾಡಿ, ಮೊದಲು ದೊಣ್ಣೆಯಿಂದ ಯುವತಿ ತಲೆಗೆ ಹೊಡೆದು ನಂತರ, ಚಾಕುವಿನಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.