ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆ ಸಾರಿದ ನಾರಿಯರು
ಕನ್ನಡಪ್ರಭ ವಾರ್ತೆ, ಬೀರೂರುಪುರುಷ ಪ್ರಧಾನ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯ ಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ ಸಾರಿರುವ ಪ್ರಸಂಗ ಪಟ್ಟಣದಲ್ಲಿ ನಡೆದಿದೆ. ಗುರುವಾರ ಬೀರೂರು ಪಟ್ಟಣದಲ್ಲಿ ಭಾವಸಾರ ಸಮಾಜದ ವಿಶ್ವನಾಥ ಅವರು ನಿಧನರಾಗಿದ್ದರು. ಮೃತ ವಿಶ್ವನಾಥ್ ಅವರಿಗೆ ಮಕ್ಕಳೇ ಇರಲಿಲ್ಲ. ಅವರ ಸಹೋದರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮೃತ ವಿಶ್ವನಾಥ್ ಸಹೋದರನ ಮಗಳು ಐಶ್ವರ್ಯ ಅವರೂ ಸಹ ನನ್ನ ತಂದೆ. ಅವರ ಅಂತ್ಯ ಸಂಸ್ಕಾರದ ಅಂತಿಮ ವಿಧಿ-ವಿಧಾನವನ್ನ ತಾನೇ ಮಾಡುವುದಾಗಿ ಕುಟುಂಬದವರಿಗೆ ತಿಳಿಸಿದ್ದಳು.
ಕುಟುಂಬ ಹಾಗೂ ಭಾವಸಾರ ಸಮಾಜದ ಎಲ್ಲಾ ಮುಖಂಡರು ಸಮ್ಮತಿಸಿದರು. ಬಳಿಕ ಸಹೋದರಿ ಭಾವನಳ ಜೊತೆ ನಿನ್ನೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ. ಹೆಗಲ ಮೇಲೆ ಕುಡಿಕೆ ಹೊತ್ತು ಮೃತದೇಹದ ಸುತ್ತ ಮೂರು ಸುತ್ತು ಹಾಕಿ ತಂದೆ (ಚಿಕ್ಕಪ್ಪ) ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರು ಯುವತಿಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ಬೀರೂರಿನ ಇತಿಹಾಸದಲ್ಲಿ ಮಹಿಳೆಯರು ಅಂತ್ಯ ಸಂಸ್ಕಾರ ಮಾಡಿದ್ದು ಇದೇ ಪ್ರಥಮ, ನಿನ್ನೆ ನಮ್ಮ ಸಮಾಜದ ಮಕ್ಕಳಿರದ ವಿಶ್ವನಾಥ್ ಅವರು ದೈವದೀನರಾದರು, ಎಲ್ಲಾ ಕಡೆ ಮೃತರ ಅಂತ್ಯ ಸಂಸ್ಕಾರವನ್ನು ಗಂಡು ಮಕ್ಕಳೇ ಹೆಚ್ಚಾಗಿ ಮಾಡುವುದು. ಆದರೆ ಮಕ್ಕಳಿಲ್ಲದ ವಿಶ್ವನಾಥ್ ಗೆ ಸೋದರನ ಮಕ್ಕಳಾದ ಐಶ್ವರ್ಯ ಮತ್ತು ಭಾವನ ಅಂತ್ಯ ಸಂಸ್ಕಾರ ನಡೆಸಿ ತಮ್ಮ ಆತ್ಮ ಸ್ಥೈರ್ಯದಿಂದ ಸಮಾನತೆ ಸಾರಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಮಾಜಿ ಕಾರ್ಯದರ್ಶಿ ಪರುಷರಾಂ ಬೇಂದ್ರೆ ಹೇಳಿದ್ದಾರೆ.14 ಬೀರೂರು 1ಐಶ್ವರ್ಯ ಮತ್ತು ಭಾವನ