ದಾವಣಗೆರೆ ಬಸವ ಜಯಂತಿ ಗಂಗೋತ್ರಿಯೂ ಹೌದು: ಡಾ.ಬಸವಪ್ರಭು ಸ್ವಾಮೀಜಿ

| Published : Apr 25 2025, 11:50 PM IST

ದಾವಣಗೆರೆ ಬಸವ ಜಯಂತಿ ಗಂಗೋತ್ರಿಯೂ ಹೌದು: ಡಾ.ಬಸವಪ್ರಭು ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಶಿಕ್ಷಣ ನಗರಿ, ಬೆಣ್ಣೆ ನಗರಿಯಷ್ಟೇ ಅಲ್ಲ, ಬಸವ ಜಯಂತಿಯ ಗಂಗೋತ್ರಿ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ.

ದಾವಣಗೆರೆ: ದಾವಣಗೆರೆ ಶಿಕ್ಷಣ ನಗರಿ, ಬೆಣ್ಣೆ ನಗರಿಯಷ್ಟೇ ಅಲ್ಲ, ಬಸವ ಜಯಂತಿಯ ಗಂಗೋತ್ರಿ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.

ನಗರದ ಹೊಂಡದ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಬೆಳಗ್ಗೆ ಬಸವ ಕೇಂದ್ರ, ವಿರಕ್ತ ಮಠ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ (ವೀರಶೈವ) ತರುಣ ಸಂಘದ ಸಹಯೋಗದಲ್ಲಿ 113ನೇ ವರ್ಷದ ಬಸವ ಜಯಂತ್ಯುತ್ಸವ ಅಂಗವಾಗಿ ನಡೆದ 109ನೇ ವರ್ಷದ ಬಸವ ಪ್ರಭಾತ್ ಪೇರಿಯ 2ನೇ ದಿನದ ಜನಜಾಗೃತಿ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹರ್ಡೇಕರ್ ಮಂಜಪ್ಪ ಅವರು ಮೃತ್ಯುಂಜಯ ಅಪ್ಪಗಳ ಜೊತೆ ಸೇರಿ 1917ನೇ ಇಸವಿಯಲ್ಲಿ ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿಯನ್ನು ಆರಂಭಿಸಿದರು. ಅಂದಿನಿಂದ ಇಂದಿಗೂ ಈ ದಾವಣಗೆರೆ ಬಸವ ಜಯಂತಿಯ ಗಂಗೋತ್ರಿಯಾಗಿದೆ. ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಂತೋಷದ ವಿಷಯ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ ಮಾತನಾಡಿದರು. ದೂಡಾ ಸದಸ್ಯೆ ವಾಣಿ ಬಕ್ಕೇಶ, ಅಭಿ ಕಾಟನ್ ಮಾಲೀಕ ಬಕ್ಕೇಶ್, ಬೀರಲಿಂಗೇಶ್ವರ ದೇವಸ್ಥಾನ ಸಮಿತಿ, ಕಟ್ಟೆ ದುರ್ಗಮ್ಮ ದೇವಸ್ಥಾನ ಕಮಿಟಿಯ ಶಿವಾನಂದ ಕಾಡಪ್ಪನವರ, ಹೊನ್ನಪ್ಪ, ಸುರೇಶ, ಬಾಳೆಹೊಲದ ಸಿದ್ದಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ಕೆ.ಸಿ.ಉಮೇಶ, ಚನ್ನಬಸವ ಶೀಲವಂತ್, ಮಹಾಲಿಂಗೇಶ್ವರ, ಸಂಕಲ್ಪ ಫೌಂಡೇಷನ್ ಅಧ್ಯಕ್ಷ ಜಿ.ಮಹಾಂತೇಶ, ಬಾದಾಮಿ ಜಯಣ್ಣ, ಶರಣಬಸವ, ಕೀರ್ತಿ, ಕುಮಾರಸ್ವಾಮಿ, ಕೊಟ್ರೇಶ್, ಮಹಾದೇವಮ್ಮ, ಸುಜಾತ, ವೀಣಾ ಮಂಜುನಾಥ ಇತರರು ಇದ್ದರು. ಬಸವ ಕಲಾಲೋಕದ ಅರುಣ ಮತ್ತು ತಂಡದವರು ವಚನ ಭಜನೆ ನಡೆಸಿಕೊಟ್ಟರು.

- - - -25ಕೆಡಿವಿಜಿ34.ಜೆಪಿಜಿ:

ದಾವಣಗೆರೆಯಲ್ಲಿ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವ ಜಯಂತಿ ಅಂಗವಾಗಿ 2ನೇ ದಿನದ ಬಸವ ಪ್ರಭಾತ್ ಪೇರಿ ನಡೆಯಿತು.