ಸಾರಾಂಶ
ಚಿತ್ರದುರ್ಗದ ಟಿ.ಎಂ. ಪ್ರಥಮ ಬಹುಮಾನ, ಜಿ.ಎಸ್.ಕೃಷ್ಣ ಹರಿಹರ (ನಟರಾಜ ಚಿತ್ರ) ದ್ವಿತೀಯ ಬಹುಮಾನ, ಚಿಕ್ಕೋಡಿಯ ಶಿವಪ್ಪ ಕೋಥ್ (ಗಿಳಿಗಳು ಚಿತ್ರ), ಸುರಪುರದ ಸಿದ್ದನಗೌಡ ಎಸ್.ಗಬಸವಳಗಿ (ವೀಣಾಪಾಣಿ ಚಿತ್ರ) ದ್ವಿತೀಯ ಬಹುಮಾನ, ಬೆಂಗಳೂರಿನ ಎಲ್.ರವಿ(ವಿಷ್ಣು ಮಿನಿಯೇಚರ್ ಚಿತ್ರ)ಕ್ಕೆ ಲಭಿಸಿದೆ.
ದಾವಣಗೆರೆ: ನಗರದಲ್ಲಿ ಮಾ. 3 ರಂದು ನಡೆದ 3ನೇ ವರ್ಷದ ಚಿತ್ರ ಸಂತೆಯಲ್ಲಿ ಭಾಗವಹಿಸಿದ ವಿವಿಧ ಕಲಾವಿದರು, ತಂಡಗಳಿಗೆ ಬಹುಮಾನ ಘೋಷಿಸಲಾಗಿದೆ.
ಉತ್ತಮ ಚಿತ್ರ ಹಿರಿಯರ ವಿಭಾಗ:ಚಿತ್ರದುರ್ಗದ ಟಿ.ಎಂ. ಪ್ರಥಮ ಬಹುಮಾನ, ಜಿ.ಎಸ್.ಕೃಷ್ಣ ಹರಿಹರ (ನಟರಾಜ ಚಿತ್ರ) ದ್ವಿತೀಯ ಬಹುಮಾನ, ಚಿಕ್ಕೋಡಿಯ ಶಿವಪ್ಪ ಕೋಥ್ (ಗಿಳಿಗಳು ಚಿತ್ರ), ಸುರಪುರದ ಸಿದ್ದನಗೌಡ ಎಸ್.ಗಬಸವಳಗಿ (ವೀಣಾಪಾಣಿ ಚಿತ್ರ) ದ್ವಿತೀಯ ಬಹುಮಾನ, ಬೆಂಗಳೂರಿನ ಎಲ್.ರವಿ(ವಿಷ್ಣು ಮಿನಿಯೇಚರ್ ಚಿತ್ರ)ಕ್ಕೆ ಲಭಿಸಿದೆ.
ಉತ್ತಮ ಚಿತ್ರ ಹವ್ಯಾಸಿ/ವಿದ್ಯಾರ್ಥಿ ವಿಭಾಗ:ದಾವಣಗೆರೆಯ ಸಾಯಿ ಬ್ರಷ್ ಪ್ಲೇ (ಒಟ್ಟು ಕಲಾಕೃತಿಗಳು), ಚಿದಾನಂದ( ಸಾಲುಮರದ ತಿಮ್ಮಕ್ಕ ಚಿತ್ರ) ಪ್ರಥಮ ಬಹುಮಾನ, ಸತೀಶ್ ಬಿರಾದಾರ್(ಒಟ್ಟು ಕಲಾಕೃತಿಗಳು), ಆರ್. ವಿಕಾಸ್( ಒಟ್ಟು ಕಲಾಕೃತಿಗಳು)ದ್ವಿತೀಯ ಬಹುಮಾನವನ್ನು, ಸ್ನೇಹಾ ಪಬ್ಲಿಕ್ ಸ್ಕೂಲ್‌ನ (ಒಟ್ಟು ಕಲಾಕೃತಿಗಳು) ತೃತೀಯ ಬಹುಮಾನ ಗಳಿಸಿದವು.
ಉತ್ತಮ ಸ್ಟಾಲ್ ನಿರ್ವಹಣೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಅರಳಪ್ಪು ದೇವರಾಜ(ಸ್ಟಾಲ್ ನಂ.36), ರಟ್ಟಿಹಳ್ಳಿ ಪರಮೇಶ್ವರಪ್ಪ ಹುಲಮನಿ(ಸ್ಟಾಲ್ ನಂ. 40) ಪ್ರಥಮ ಬಹುಮಾನ, ದಾವಣಗೆರೆಯ ಮೌನೇಶ ಬಡಿಗೇರ(ಸ್ಟಾಲ್ ನಂ. 48), ಹೂವಿನ ಹಿಪ್ಪರಗಿಯ ಶ್ರೀಶೈಲ ಭಜಂತ್ರಿ(ಸ್ಟಾಲ್ ನಂ. 27) ದ್ವಿತೀಯ ಬಹುಮಾನವನ್ನು, ಮಹಾರಾಷ್ಟ್ರದ ಇಚಲಕಾರಂಜಿಯ ಮಾಧವಿ ದತ್ತಾತ್ರೇಯ ಗೋಳ್ಕರ್( ಸ್ಟಾಲ್ ನಂ. 8), ದಾವಣಗೆರೆಯ ಎಂ.ಎನ್.ಮೇಘಶ್ರೀ( ಸ್ಟಾಲ್ ನಂ. 96), ನೀತಾ ಹರ್ಷಗೌಡರ್(ಸ್ಟಾಲ್ ನಂ. 69) ತೃತೀಯ ಬಹುಮಾನಗಳ ಗಳಿಸಿದ್ದಾರೆ. ಈ ಕಲಾವಿದರಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ ಎಂದು ಪರಿಷತ್ ಕಾರ್ಯದರ್ಶಿ ಶೇಷಾಚಲ ತಿಳಿಸಿದ್ದಾರೆ.....