ಸಾರಾಂಶ
ದಾವಣಗೆರೆ: ಕೇಂದ್ರೀಯ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಹಣಕಾಸು ಬಜೆಟ್ ಅನ್ನು ಜು.23ರಂದು ಮಂಡಿಸಲಿದ್ದಾರೆ. ಈ ಬಜೆಟ್ ಹಿನ್ನೆಲೆ ದಾವಣಗೆರೆಗೆ ಬಜೆಟ್‌ನಲ್ಲಿ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಚುರುಕಿಗೆ ವಿಶೇಷ ₹500 ಕೋಟಿ ಅನುದಾನ. ದಾವಣಗೆರೆ ಜಿಲ್ಲೆ ಐಟಿ ಪಾರ್ಕ್ (ಹೊಸ ಜಾಗದಲ್ಲಿ ಹೊಸ ಐಟಿ ಪಾರ್ಕ್ ಸ್ಥಾಪನೆ)ಗೆ ವಿಶೇಷ ₹500 ಕೋಟಿ ಅನುದಾನ ಬೇಕು ಎಂಬುದು ಜನರ ಬಹುದಿನದ ಬೇಡಿಕೆಯಾಗಿದೆ.ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜವಳಿ ಪಾರ್ಕ್ ನಿರ್ಮಾಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ, ಬೃಹತ್ ಕೈಗಾರಿಕೆ ಘಟಕಗಳ ಆರಂಭಕ್ಕೆ ಲ್ಯಾಂಡ್ ಬ್ಯಾಂಕ್. ರೈಲ್ವೆ, ಹೆದ್ದಾರಿ ಯೋಜನೆಗಳಿಗೆ ₹3 ಸಾವಿರ ಕೋಟಿ (ವಿಶೇಷ ಪ್ಯಾಕೇಜ್) ಹಣ ಬಿಡುಗಡೆ ಮಾಡಬೇಕು.
ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಫ್ಯಾಕ್ಟರಿ ಜೊತೆ ಇತರೆ ಕೈಗಾರಿಕೆಗಳು, ಜಿಲ್ಲೆಯಲ್ಲಿ ಎಸ್‌ಇಝೆಡ್ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಬೇಕು. ದಶಕದಿಂದ ಬೇಡಿಕೆ ಆಗಿರುವ ದಾವಣಗೆರೆ ವಿಮಾನ ನಿಲ್ದಾಣಕ್ಕೆ ಮಂಜೂರು ಹಾಗೂ ಅನುದಾನ (ಉಡಾನ್ ಯೋಜನೆಯಡಿ ದಾವಣಗೆರೆ ವಿಮಾನ ನಿಲ್ದಾಣ ನಿರ್ಮಾಣ), ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಆಗಬೇಕಿದೆ. ಪಾಳು ಬಿದ್ದಿರುವ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಕೈಗಾರಿಕೆಗಳಾಗಬೇಕು.ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನ್ನು ಚುರುಕುಗೊಳಿಸಬೇಕು. ಸ್ಥಳೀಯ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಒತ್ತು ನೀಡಲಿ. ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್ ಪಾರ್ಕ್ ಆರಂಭಿಸುವುದು ಸೇರಿದಂತೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
- - --22ಕೆಡಿವಿಜಿ43ಃ: ರೋಹಿತ್ ಎಸ್. ಜೈನ್