ದಾವಣಗೆರೆ ಪಿ.ಕೃತಿ ಮಿಸ್ ಕರ್ನಾಟಕ-2024 ಪ್ರಶಸ್ತಿ

| Published : May 09 2024, 01:03 AM IST

ಸಾರಾಂಶ

ತುಮಕೂರಿನ ಎಸ್‌ ಮಾಲ್‌ನಲ್ಲಿ ಮೇ 5ರಂದು ನಡೆದ ಮಿಸ್ ಕರ್ನಾಟಕ ಮಾಡೆಲ್-2024 ಆಗಿ ದಾವಣಗೆರೆ ಸರಸ್ವತಿ ನಗರದ ಎ ಬ್ಲಾಕ್‌ ನಿವಾಸಿ ಪಿ.ಕೃತಿ ಹೊರಹೊಮ್ಮಿದ್ದಾರೆ.

- 10ನೇ ತರಗತಿ ವಿದ್ಯಾರ್ಥಿನಿ ಸಾಧನೆ-ತಂದೆ ಪ್ರದೀಪ, ತಾಯಿ ಶ್ವೇತಾ ಹರ್ಷ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ತುಮಕೂರಿನ ಎಸ್‌ ಮಾಲ್‌ನಲ್ಲಿ ಮೇ 5ರಂದು ನಡೆದ ಮಿಸ್ ಕರ್ನಾಟಕ ಮಾಡೆಲ್-2024 ಆಗಿ ದಾವಣಗೆರೆ ಸರಸ್ವತಿ ನಗರದ ಎ ಬ್ಲಾಕ್‌ ನಿವಾಸಿ ಪಿ.ಕೃತಿ ಹೊರಹೊಮ್ಮಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಿಸ್ ಕರ್ನಾಟಕ ಪಿ.ಕೃತಿ, ದಾವಣಗೆರೆಯ ಕೆಎ ಡ್ಯಾನ್ಸ್ ತಂಡದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ನಂತರ ತುಮಕೂರಿನಲ್ಲಿ ನಡೆದ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿ, ಈ ಸಾಧನೆ ಮಾಡಿದ್ದೇನೆ ಎಂದರು.

ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 15 ಸ್ಪರ್ಧಿಗಳು ಆಯ್ಕೆಯಾಗಿದ್ದೆವು. ಒಟ್ಟು 4 ಸುತ್ತುಗಳ ನಿರ್ಣಾಯಕ ಆಯ್ಕೆಯಲ್ಲಿ ಅಂತಿಮವಾಗಿ ತಾವು ಆಯ್ಕೆಯಾಗಿದ್ದು, ಮಿಸ್ ಕರ್ನಾಟಕ ಆಗಿ ತಾವು ಆಯ್ಕೆಯಾಗಿದ್ದು ಖುಷಿ ತಂದಿದೆ ಎಂದು ತಿಳಿಸಿದರು.

ಎಲ್ಲ ವಯೋಮಾನದ ಗುಂಪಿನಲ್ಲಿ ಸ್ಪರ್ಧೆ ನಡೆದಿದೆ. ಗ್ರಾಮೀನಿಯಾ ಕಂಪನಿ ಸಹಯೋಗದಲ್ಲಿ ಫ್ಯಾಷನ್ ಶೋನಲ್ಲಿ ವಿಂಗ್ಲ್ ಫ್ಯಾಷನ್ ಕಂಪನಿಯು ಸ್ಪರ್ಧೆ ಆಯೋಜಿಸಿತ್ತು. ಇಲ್ಲಿನ ತರಳಬಾಳು ಶಾಲೆಯಲ್ಲಿ 10ನೇ ತರಗತಿಯಲ್ಲಿ ತಾವು ಓದುತ್ತಿರುವುದಾಗಿ ಪಿ.ಕೃತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಂದೆ ಪ್ರದೀಪ್‌, ತಾಯಿ ಶ್ವೇತಾ, ಸಹೋದರಿ ಖುಷಿ ಇದ್ದರು.

- - - -8ಕಡಿವಿಜಿ3:

ದಾವಣಗೆರೆಯಲ್ಲಿ ಮಿಸ್ ಕರ್ನಾಟಕ-2024 ಪ್ರಶಸ್ತಿಗೆ ಪಾತ್ರರಾದ ಪಿ.ಕೃತಿ ತಮ್ಮ ಪಾಲಕರೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. -8ಕಡಿವಿಜಿ4: ದಾವಣಗೆರೆಯಲ್ಲಿ ಮಿಸ್ ಕರ್ನಾಟಕ-2024 ಪ್ರಶಸ್ತಿಗೆ ಪಾತ್ರರಾದ ಪಿ.ಕೃತಿ.