- ಲೈಫ್‌ಸ್ಟೈಲ್, ಫ್ಯಾಷನ್, ಫುಡ್ ಫೆಸ್ಟಿವೆಲ್, ಮಕ್ಕಳು, ಮಹಿಳೆಯರು, ಪ್ರತಿಭೆಗಳಿಗೆ ವೇದಿಕೆ - ಏಷ್ಯಾನೆಟ್ ಸುವರ್ಣ ನ್ಯೂಸ್- ಕನ್ನಡಪ್ರಭದಿಂದ ಹೈಸ್ಕೂಲ್ ಮೈದಾನದಲ್ಲಿ ಆಯೋಜನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಜೂ.26, 27 ಹಾಗೂ 28ರಂದು ದಾವಣಗೆರೆ ಸುವರ್ಣ ಸಂಭ್ರಮ-2026 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನ ಲೈಫ್ ಸ್ಟೈಲ್, ಫ್ಯಾಷನ್, ಫುಡ್ ಫೆಸ್ಟಿವೆಲ್ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಮೂರು ದಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹಾಲಿ-ಮಾಜಿ ಜನಪ್ರತಿನಿಧಿಗಳು, ಮಹಿಳಾ, ಪುರುಷ, ಯುವ ಮುಖಂಡರು, ವಿವಿಧ ಸಂಘ- ಸಂಸ್ಥೆ, ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವರು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಜೂ.26ರಂದು ಬೆಳಗ್ಗೆ 11 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಅದೇ ಮಧ್ಯಾಹ್ನ 12 ಗಂಟೆಗೆ ಸಂಭ್ರಮ ಆರಂಭವಾಗಲಿದೆ. ಸಂಜೆ 5 ಗಂಟೆವರೆಗೆ ಓಪನ್ ಸ್ಟೇಜ್ ಮತ್ತು ಗಾಯನವಿರುತ್ತದೆ. ಸಂಜೆ 5ರಿಂದ 6 ಗಂಟೆವರೆಗೆ ಮಕ್ಕಳಿಗಾಗಿ ಮುದ್ದುಮಗು ಮತ್ತು ವೇಷಭೂಷಣ ಪ್ರದರ್ಶನ, 7 ಗಂಟೆಗೆ ವೇದಿಕೆ ಸಮಾರಂಭ ಉದ್ಘಾಟನೆ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮವಿದೆ. ರಾತ್ರಿ 8ರಿಂದ 9 ಗಂಟೆವರೆಗೆ ಮಿಮಿಕ್ರಿ ಸಾಗರ್ ಹಾಗೂ ರಾಘವೇಂದ್ರ ಅವರಿಂದ ಮಿಮಿಕ್ರಿ ಕಾರ್ಯಕ್ರಮ, ರಾತ್ರಿ 9ರಿಂದ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಲಿವೆ.
27ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಮುದ್ದುಮಗು ಮತ್ತು ವೇಷಭೂಷಣ ಪ್ರದರ್ಶನ, ಮಧ್ಯಾಹ್ನ 12ರಿಂದ ಅಡುಗೆ ಮಹಾರಾಣಿ (ಮಹಿಳೆಯರಿಗೆ) 1ನೇ ಸುತ್ತು, ಮಧ್ಯಾಹ್ನ 2ರಿಂದ 6 ಗಂಟೆವರೆಗೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ 6.30ರಿಂದ 7 ಗಂಟೆವರೆಗೆ ಕಿಡ್ಸ್ ಅಂಡ್ ಫ್ಯಾಮಿಲಿ ಫ್ಯಾಷನ್ ಶೋ, ಮಿನಿಟ್ ಟು ಮಿನಿಟ್, ಬೆಳಗ್ಗೆ 7ರಿಂದ 8 ಗಂಟೆವರೆಗೆ ಹಾಸ್ಯ ಸಂಜೆ-ಮಿಮಿಕ್ರಿ ಗೋಪಿ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಡ್ಯುಯಲ್ ವಾಯ್ಸ್ ಸಿಂಗರ್ ಮಂಜು ಹಾಸನ್‌ರಿಂದ ನಡೆಯಲಿದೆ. ರಾತ್ರಿ 8ರಿಂದ 9 ಗಂಟೆವರೆಗೆ ವೇದಿಕೆ ಕಾರ್ಯಕ್ರಮವಿದೆ. ರಾತ್ರಿ 9ರಿಂದ ನೃತ್ಯ ಕಾರ್ಯಕ್ರಮ ನಡೆಯಲಿವೆ.
ಜೂ.29ರಂದು ಬೆಳಗ್ಗೆ 11ರಿಂದ 12 ಗಂಟೆವರೆಗೆ ಮುದ್ದುಮಗು ಮತ್ತು ವೇಷಭೂಷಣ (ಮಕ್ಕಳಿಗೆ), 12ರಿಂದ 1 ಗಂಟೆವರೆಗೆ ಬೆಂಕಿರಹಿತ ಅಡುಗೆ (ಮಕ್ಕಳಿಗಾಗಿ), ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಅಡುಗೆ ಮಹಾರಾಣಿ (ಮಹಿಳೆಯರಿಗೆ) ಫಿನಾಲೆ, 4ರಿಂದ 5ರವರೆಗೆ ಚಿತ್ರಕಲಾ ಸ್ಪರ್ಧೆ, ಸಂಜೆ 7ರಿಂದ 8ರವರೆಗೆ ಬಹುಮಾನ ವಿತರಣೆ ಇರುತ್ತದೆ. ರಾತ್ರಿ 8ರಿಂದ 9ರವರೆಗೆ ಇಂಡಿಯನ್ ಫೋಕ್ ಮ್ಯೂಸ್ ಬ್ಯಾಂಡ್ ಜಂಭೆ ಝಲಕ್ ಬಾಲು ಮತ್ತು ತಂಡದಿಂದ ನಡೆಯಲಿದೆ. ರಾತ್ರಿ 9ರಿಂದ ನೃತ್ಯ ಕಾರ್ಯಕ್ರಮವಿರುತ್ತದೆ.ಮುದ್ದುಮಗು ವಿಭಾಗದಲ್ಲಿ 6 ತಿಂಗಳಿನಿಂದ 2 ವರ್ಷದ ಮಕ್ಕಳು, ವೇಷಭೂಷಣದಲ್ಲಿ 2ರಿಂದ 7 ವರ್ಷದ ಮಕ್ಕಳು, ಬೆಂಕಿರಹಿತ ಅಡುಗೆಯಲ್ಲಿ 8ರಿಂದ 14 ವರ್ಷದ ಮಕ್ಕಳು, ಚಿತ್ರಕಲಾ ಸ್ಪರ್ಧೆಗೆ 1ರಿಂದ 10ನೇ ತರಗತಿವರೆಗಿನ ಮಕ್ಕಳು ಪಾಲ್ಗೊಳ್ಳಬಹುದು. ನೃತ್ಯಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ಸೋಲೋ, ಗ್ರೂಪ್‌ಗೆ ಅವಕಾಶವಿದ್ದು, 3 ನಿಮಿಷಗಳ ಅವಕಾಶ ಇರುತ್ತದೆ. ಮೂರು ದಿನ ಚಿತ್ರಕಲಾ ಸ್ಪರ್ಧೆ, ನೃತ್ಯ ಸ್ಪರ್ಧೆ, ಅಡುಗೆ ಮಹಾರಾಣಿ, ವೇಷಭೂಷಣ ಸ್ಪರ್ಧೆ, ಬೆಂಕಿರಹಿತ ಅಡುಗೆ, ಬೊಂಬಾಟ್ ಜೋಡಿ, ನಮ್ಮೂರ ಮುದ್ದುಮಗು ಹೀಗೆ ನಾನಾ ಚಟುವಟಿಕೆಗಳು ಇರುತ್ತವೆ. ಪ್ರವೇಶ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಉಚಿತ ಮತ್ತು ಮುಕ್ತ ಅವಕಾಶ ಆಯಾ ವಯೋಮಾನದ ವಿಭಾಗದಲ್ಲಿ ಇರುತ್ತದೆ.
ದಾವಣಗೆರೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗಾಗಿ ''''ದಾವಣಗೆರೆ ಸುವರ್ಣ ಸಂಭ್ರಮ-2026'''' ಕಾರ್ಯಕ್ರಮ ಮೂರು ದಿನ ನಡೆಯಲಿದ್ದು, ಲೈಫ್‌ಸ್ಟೈಲ್, ಫ್ಯಾಷನ್, ಫುಡ್ ಫೆಸ್ಟಿವಲ್ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಗರವಾಗಿರುತ್ತದೆ. ಮೂರು ದಿನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿ, ಯುವ ಜನರು, ಹಿರಿಯ ನಾಗರೀಕರು, ಮಹಿಳೆಯರು, ಸಂಘ- ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ (ಮೊ-98440-24995), ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ವರದಿಗಾರ ಮಹಾಂತೇಶ ಕುರಬೇಟ (98803-27230), ಕನ್ನಡಪ್ರಭ ಜಾಹೀರಾತು ಪ್ರತಿನಿಧಿ ಟಿ.ಆರ್. ಸುಧೀಂದ್ರ (98449-13226) ಅವರನ್ನು ಸಂಪರ್ಕಿಸಲು ಸಂಸ್ಥೆ ಪ್ರಕಟಣೆ ಕೋರಿದೆ.- - -
-(ಫೋಟೋಗಳಿವೆ)25ಕೆಡಿವಿಜಿ45, 46, 47, 48ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಇಂದಿನಿಂದ 3 ದಿನಗಳ ಕಾಲ ಏಷ್ಯಾ ನೆಟ್ ಸುವರ್ಣ ನ್ಯೂಸ್-ಕನ್ನಡಪ್ರಭದಿಂದ ನಡೆಯುವ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ವೇದಿಕೆ, ಪೆಂಡಾಲ್ ಸಿದ್ದಗೊಳ್ಳುತ್ತಿರುವುದು.
