2ನೇ ದಿನ ಭರ್ಜರಿ ಮೈಸೂರು ಚಲೋ ಪಾದಯಾತ್ರೆ

| Published : Aug 05 2024, 12:35 AM IST

ಸಾರಾಂಶ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಎನ್ ಡಿಎ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ 2ನೇ ದಿನವಾದ ಭಾನುವಾರ ಬಿಡದಿಯಿಂದ - ಚನ್ನಪಟ್ಟಣದ ಕೆಂಗಲ್ ವರೆಗೆ ಸುಮಾರು 22 ಕಿ.ಮೀ. ಭರ್ಜರಿಯಾಗಿ ಸಾಗಿತು.

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಎನ್ ಡಿಎ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ 2ನೇ ದಿನವಾದ ಭಾನುವಾರ ಬಿಡದಿಯಿಂದ - ಚನ್ನಪಟ್ಟಣದ ಕೆಂಗಲ್ ವರೆಗೆ ಸುಮಾರು 22 ಕಿ.ಮೀ. ಭರ್ಜರಿಯಾಗಿ ಸಾಗಿತು.

ಬಿಡಿದಿ ಪಟ್ಟಣದ ಬಸ್ ನಿಲ್ದಾಣದ ಬಳಿ ಬೆಳಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮಟೆ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಪ್ರಮುಖ ನಾಯಕರು ಬಿಜೆಪಿ - ಜೆಡಿಎಸ್ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿ ಉತ್ಸಾಹ ಇಮ್ಮಡಿಗೊಳಿಸಿದರು.

ಬಿಡದಿಯ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಿಂದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಸರ್ವಿಸ್ ರಸ್ತೆಗೆ ಆಗಮಿಸಿದ ಪಾದಯಾತ್ರೆ ಕಲ್ಲುಗೋಪಳ್ಳಿ ಮಾರ್ಗವಾಗಿ ಮಾಯಗಾನಹಳ್ಳಿ ತಲುಪಿತು. ಅಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಟೀ , ಕಾಫಿ, ಬಿಸ್ಕೆಟ್, ತಂಪು ಪಾನೀಯ ಸವಿದರು. ತರುವಾಯ ಬಸವನಪುರ ಮಾರ್ಗವಾಗಿ ರಾಮನಗರದ ಪದ್ಮಾವತಿ ದೇವಸ್ಥಾನದ ಬಳಿಗೆ ಬಂದ ಪಾದಯಾತ್ರಿಗಳು ಮಧ್ಯಾಹ್ನದ ಭೋಜನ ಸ್ವೀಕರಿಸಿದರು.

ಅಲ್ಲಿಂದ ರಾಮನಗರ ಟೌನ್ ಒಳಗೆ ಪ್ರವೇಶಿಸಿದ ಪಾದಯಾತ್ರೆಗೆ ಉಭಯ ಪಕ್ಷಗಳ ಕಾರ್ಯಕರ್ತರು ಬೃಹತ್ ಗಾತ್ರದ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ವಿಜಯನಗರದಲ್ಲಿರುವ ಎತ್ತರದ ಆಂಜನೇಯ ಮೂರ್ತಿಗೆ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿರವರು ಕ್ರೇನ್ ಸಹಾಯದಿಂದ ತೆರಳಿ ಪುಷ್ಪಾರ್ಚನೆ ಮಾಡಿದರು.

ಹೆದ್ದಾರಿಯಲ್ಲಿ ಸಾಗಿ ಬಂದ ಪಾದಯಾತ್ರಿಗಳ ಮೇಲೆ ಕಾರ್ಯಕರ್ತರು ಹೂ ಮಳೆ ಸುರಿಸಿದರು. ಎಂ.ಜಿ.ರಸ್ತೆ ಮೂಲಕ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಸಮಾವೇಶಗೊಂಡರು. ನಂತರ ಹಳೇ ಮೈಸೂರು - ಬೆಂಗಳೂರು ಹೆದ್ದಾರಿ ಮೂಲಕ ಕೆಂಗಲ್ ತಲುಪಿತು. ಸುಮಾರು 22 ಕಿಲೋ ಮೀಟರ್ ವರೆಗೆ ಬಿಜೆಪಿ - ಜೆಡಿಎಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಿದರು.

ದಾರಿ ಉದ್ದಕ್ಕೂ ತಮಟೆ ಶಬ್ಧಕ್ಕೆ ಹೆಣ್ಣು ಮಕ್ಕಳ ನೃತ್ಯ, ಡೊಳ್ಳು ಕುಣಿತ ಗಮನ ಸೆಳೆಯಿತು. ಎರಡನೇ ದಿನದ ಪಾದಯಾತ್ರೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಕಾಲ್ನಡಿಗೆಯಲ್ಲಿ ಸಾಗಿದರು.

ಸಂಸದ ಡಾ.ಸಿ.ಎನ್ .ಮಂಜುನಾಥ್ , ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಶ್ರೀರಾಮುಲು, ರೇಣುಕಾಚಾರ್ಯ ಸೇರಿದಂತೆ ಅನೇಕರ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

(ಈ ಬಿಟ್ಸ್‌ಗಳು ಬ್ರೀಫ್‌ನಲ್ಲಿ ಬಳಸಿ)ಆರ್.ಅಶೋಕ್ ಗೈರು

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎರಡನೇ ದಿನದ ಪಾದಯಾತ್ರೆಗೆ ಗೈರಾಗಿದ್ದರು. ಯಾದಗಿರಿ ನಗರ ಠಾಣೆ ಪಿಎಸ್ ಐ ಪರುಶುರಾಮ್ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಅವರು ಕೊಪ್ಪಳ ಜಿಲ್ಲೆಯ ಕಾರಟಗಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ. ಈ ಕಾರಣದಿಂದಾಗಿ 2ನೇ ದಿನದ ಪಾದಯಾತ್ರೆಯಲ್ಲಿ ಭಾಗಿಯಾಗಲಿಲ್ಲ.

ತಟ್ಟೆ ಇಡ್ಲಿ ಸವಿದ ವಿಜಯೇಂದ್ರ

2ನೇ ದಿನದ ''''''''ಮೈಸೂರು ಚಲೋ'''''''' ಪಾದಯಾತ್ರೆ ಪ್ರಾರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಡದಿಯಲ್ಲಿ ತಟ್ಟೆ ಇಡ್ಲಿ ಸವಿದರು. ಬೆಂಗಳೂರನಿಂದ ಬಿಡದಿಗೆ ಬೆಳಗ್ಗೆ ಆಗಮಿಸಿದ ವಿಜಯೇಂದ್ರರವರು ಶಾಸಕ ಕೃಷ್ಣಪ್ಪ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಹೋಟೆಲ್ ನಲ್ಲಿ ತಟ್ಟೆ ಇಡ್ಲಿ ಸೇವಿಸಿದರು.

ನಾಯಕರಿಗೆ ಕ್ಯಾರವ್ಯಾನ್

ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಿಜೆಪಿ - ಜೆಡಿಎಸ್ ನಾಯಕರು ನಡೆದು ಸುಸ್ತಾದರೆ ಮಾರ್ಗಮಧ್ಯೆ ಕೆಲಕಾಲ ರೆಸ್ಟ್ ಮಾಡಲು, ಹಾಸಿಗೆ, ಚೇರು, ಟಿವಿ, ಶೌಚಾಲಯ ವ್ಯವಸ್ಥೆ ಕ್ಯಾರವ್ಯಾನ್ ಗಳು ಹೊಂದಿವೆ. ಪಾದಯಾತ್ರೆ ಸಾಗುವ ಮಾರ್ಗಮಧ್ಯದಲ್ಲಿ 3 ಕ್ಯಾರವ್ಯಾನ್ ನಿಲುಗಡೆ ಮಾಡಿದ್ದು, ಪಾದಯಾತ್ರೆ ಉದ್ದಕ್ಕೂ ಮೈಸೂರಿನವರೆಗೂ ಸುಮಾರು 8-10 ಕ್ಯಾರವ್ಯಾನ್ ಗಳು ಸಾಗುತ್ತಿವೆ.ರಸ್ತೆ ಪಕ್ಕದ ಅಂಗಡೀಲಿ

ಟೀ ಕುಡಿದ ನಾಯಕರು

ಪಾದಯಾತ್ರೆಯಲ್ಲಿ ನಡೆದು ಸುಸ್ತಾದ ಬಿಜೆಪಿ - ಜೆಡಿಎಸ್ ನಾಯಕರು ರಸ್ತೆ ಬದಿ ಅಂಗಡಿಯಲ್ಲಿ ಟೀ ಕಾಫಿ ಸವಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್, ಮಾಜಿ ಶಾಸಕರಾದ ಎ.ಮಂಜುನಾಥ್ ಸುರೇಶ್ ಗೌಡ ಸೇರಿದಂತೆ ನಾಯಕರು ಟೀ ಕಾಪಿ ಕುಡಿದರು. ಈ ವೇಳೆ ನಿಖಿಲ್ ನೀಡಿದ ಹಣ ಪಡೆಯಲು ಅಂಗಡಿಯಲ್ಲಿದ್ದ ಮಹಿಳೆ ನಿರಾಕರಿಸಿದರು. ಕೊನೆಗೆ ಕಾರ್ಯಕರ್ತರು ಹೇಳಿದಾಗ ಆ ಮಹಿಳೆ ನಿಖಿಲ್ ಅವರಿಂದ ಹಣ ಪಡೆದರು. ಟೀ ಕಾಫಿ ಕೊಟ್ಟಿದ್ದಕ್ಕಾಗಿ ನಿಖಿಲ್ ಮಹಿಳೆಗೆ ಕೈ ಮುಗಿದರು.

ವಿಜಯೇಂದ್ರಗೆ ಶುಭ

ಹಾರೈಸಿದ ಕುಟುಂಬಸ್ಥರು

ಮೈಸೂರು ಚಲೋ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಅವರ ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದರು. ಬಿಡದಿ ಪಟ್ಟಣದಿಂದ 2ನೇ ದಿನದ ಪಾದಯಾತ್ರೆ ವಿಜಯೇಂದ್ರ ಸೇರಿದಂತೆ ಬಿಜೆಪಿ - ಜೆಡಿಎಸ್ ನಾಯಕರೊಂದಿಗೆ ಪ್ರಾರಂಭಗೊಂಡು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನ ಸರ್ವಿಸ್ ರಸ್ತೆಗೆ ಆಗಮಿಸಿತು. ಈ ವೇಳೆ ಎಕ್ಸ್ ಪ್ರೆಸ್ ವೇಗೆ ಆಗಮಿಸಿದ ವಿಜಯೇಂದ್ರರ ಪತ್ನಿ, ಮಕ್ಕಳು ಪಾದಯಾತ್ರೆ ವೀಕ್ಷಿಸಿದರು.

(ಈ ಸುದ್ದಿಗೆ ಫೋಟೊ ಬಳಸಿ ಮೇಲಿನ ಸಿಂಗಲ್‌ ಕಾಲಂನಲ್ಲಿ ಹಾಕಿ)ಕಾರಿಂದಲೇ ದೋಸ್ತಿ ಪಾದಯಾತ್ರೆ ನೋಡಿದ ಡಿಕೆಶಿಬೆಂಗಳೂರಿಂದ ಚನ್ನಪಟ್ಟಣಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ-ಜೆಡಿಎಸ್ ದೋಸ್ತಿ ಪಾದಯಾತ್ರೆ ನೋಡಿಕೊಂಡು ಸಾಗಿದರು. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಪೊಲೀಸ್ ಭದ್ರತೆಯಲ್ಲಿ ಹೋಗುತ್ತಿದ್ದ ಡಿ.ಕೆ.ಶಿವಕುಮಾರ್ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದ್ದ ಪಾದಯಾತ್ರೆ ನೋಡಿದರು. ಈ ವೇಳೆ ಪಾದಯಾತ್ರೆಯಲ್ಲಿ ಸ್ಕ್ಯಾಮ್ ಸರ್ಕಾರ, ಈ ಕಾಂಗ್ರೆಸ್ ಸರ್ಕಾರ .... ಹಾಡನ್ನು ಹಾಕಲಾಗಿತ್ತು. ಡಿ.ಕೆ.ಶಿವಕುಮಾರ್ ಕಾರನ್ನು ಕಂಡ ತಕ್ಷಣ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಲು ಪ್ರಾರಂಭಿಸಿದರು.4ಕೆಆರ್ ಎಂಎನ್ 4,5,6,7,8,9,10,11.ಜೆಪಿಜಿ

4.ಪಾದಯಾತ್ರೆಯಲ್ಲಿ ಸಂಸದ ಡಾ.ಸಿ.ಎನ್ .ಮಂಜುನಾಥ್ ಅವರೊಂದಿಗೆ ಮಹಿಳೆಯರು ಫೋಟೋ ತೆಗೆಸಿಕೊಳ್ಳುತ್ತಿರುವುದು

5. ಡಿಸಿಎಂ ಡಿ.ಕೆ.ಶಿವಕುಮಾರ್ ಪಾದಯಾತ್ರೆ ನೋಡಿಕೊಂಡು ತೆರಳುತ್ತಿರುವುದು.

6.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಡದಿ ಹೋಟೆಲ್ ನಲ್ಲಿ ತಟ್ಟೆ ಇಡ್ಲಿ ಸೇವಿಸಿದರು.

7,8.ಪಾದಯಾತ್ರೆಯ ದೃಶ್ಯ

9.ರಾಮನಗರದಲ್ಲಿ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಕಾರ್ಯಕರ್ತರು ಸ್ವಾಗತಿಸಿದರು.

10.ರಾಮನಗರದ ವಿಜಯನಗರ ಬಳಿಯ ಆಂಜನೇಯ ಮೂರ್ತಿಗೆ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿದರು.

11.ಪಾದಯಾತ್ರೆ ವೇಳೆ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರೊಂದಿಗೆ ರನ್ನಿಂಗ್ ಮಾಡಿದರು.