ಕಾಂಗ್ರೆಸ್‌-ಬಿಜೆಪಿ ಸರ್ಕಾರಗಳಿಂದ ಹಗಲು ದರೋಡೆ: ಎಎಪಿ

| Published : Apr 05 2025, 12:46 AM IST

ಸಾರಾಂಶ

ಕೇಂದ್ರ, ರಾಜ್ಯ ಸರ್ಕಾರಗಳು ಶೇ.100, 200ರಷ್ಟು ತೆರಿಗೆ ಹೇರುವ ಮೂಲಕ ತುಘಲಕ್ ಮಾದರಿಯಲ್ಲಿ ಜನರನ್ನು ದರೋಡೆ ಮಾಡುತ್ತಿವೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ, ರಾಜ್ಯ ಸರ್ಕಾರಗಳು ಶೇ.100, 200ರಷ್ಟು ತೆರಿಗೆ ಹೇರುವ ಮೂಲಕ ತುಘಲಕ್ ಮಾದರಿಯಲ್ಲಿ ಜನರನ್ನು ದರೋಡೆ ಮಾಡುತ್ತಿವೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ತೆರಿಗೆ ಹೆಚ್ಚಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಸುವ ಮೂಲಕ ಜನಸಾಮಾನ್ಯರಿಗೆ ಅನಾನುಕೂಲ ಮಾಡುತ್ತಿರುವುದು ಖಂಡನೀಯ ಎಂದರು.

ರಾಜ್ಯ ಸರ್ಕಾರವು ಮುದ್ರಾಂಕ ಶುಲ್ಕವನ್ನು ಶೇ.200ರಿಂದ 300ರಷ್ಟು ಹೆಚ್ಚಿಸಿದೆ. ಆಸ್ತಿ ಮೇಲಿನ ಮಾರ್ಗಸೂಚಿ ದರ, ವಾಹನಗಳ ನೋಂದಣಿ ಶುಲ್ಕ, ನಂದಿನಿ ಹಾಲು, ದೇಶೀಯ ಮದ್ಯದ ಬೆಲೆ, ಪೆಟ್ರೋಲ್, ಡೀಸೆಲ್, ವಿದ್ಯುತ್ ವಾಹನ ತೆರಿಗೆ, ಕುಡಿಯುವ ನೀರು, ಸರ್ಕಾರಿ ಆಸ್ಪತ್ರೆ ಶುಲ್ಕ ಸೇರಿದಂತೆ 19 ಅಗತ್ಯ ವಸ್ತುಗಳ ಬೆಲೆ ಮತ್ತು ತೆರಿಗೆ ಹೆಚ್ಚಿಸಿವೆ. ತಕ್ಷಣವೇ ಬೆಲೆ ಏರಿಕೆ, ತೆರಿಗೆ ಹೇರಿಕೆ ಹಿಂಪಡೆಯಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಆದಿಲ್ ಖಾನ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳ ಬೆಲೆ ಏರಿಕೆ, ತೆರಿಗೆ ಹೆಚ್ಚಳ ವಿರೋಧಿಸಿ ಏ.5ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಜಯದೇವ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಬೆಲೆ ಏರಿಕೆ, ತೆರಿಗೆ ಹೇರಿಕೆ ಕೈಬಿಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಅರ್ಪಿಸಲಾಗುವುದು ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ರವೀಂದ್ರ, ಸುರೇಶ ಶಿಡ್ಲಪ್ಪ, ಶಬ್ಬೀರ್ ಅಹಮದ್, ಕೆ.ಪಿ.ವಿಕಾಸ್, ಲಕ್ಷ್ಷಣ ಇದ್ದರು.

- - -

-4ಕೆಡಿವಿಜಿ61: