10 ದಿನಗಳ ವಿಶ್ವ ವಜ್ರ ಪ್ರದರ್ಶನಕ್ಕೆ ಚಾಲನೆ

| Published : Dec 06 2024, 09:00 AM IST

10 ದಿನಗಳ ವಿಶ್ವ ವಜ್ರ ಪ್ರದರ್ಶನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಗೋಪಿ ವೃತ್ತದ ಬಳಿ ಇರುವ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ ಮಳಿಗೆಯಲ್ಲಿ ವಿವಿಧ ದೇಶಗಳ ಆಭರಣವನ್ನು ಅನಾವರಣ ಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದಕ್ಷಿಣ ಭಾರತದ ಅತಿ ದೊಡ್ಡ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ‘ವಿಶ್ವ ವಜ್ರ ಪ್ರದರ್ಶನ’ ಗುರುವಾರ ನಗರದ ಗೋಪಿ ವೃತ್ತದ ಬಳಿ ಇರುವ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ ಮಳಿಗೆಯಲ್ಲಿ ಉದ್ಘಾಟಿಸಲಾಯಿತು.

ಬುಧವಾರದಿಂದ ಡಿ.15 ರವರೆಗೆ 10 ದಿನಗಳ ಕಾಲ ನಡೆಯುವ ಈ ಪ್ರದರ್ಶದನಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಸಿದ್ಧ ಆಭರಣ ಮತ್ತು ವಜ್ರವನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಇದನ್ನು ಖರೀಸಿದವರಿಗೆ ಫ್ಲಾಟ್ 8 ಸಾವಿರ ರು. ರಿಯಾಯತಿಯನ್ನೂ ಸಹ ಘೋಷಿಸಲಾಗಿದೆ.

ವಿವಿಧ ರಾಷ್ಟ್ರಗಳ ಆಭರಣವನ್ನು ಮಹಿಳಾ ಉದ್ಯಮಿಗಳಾದ ಜಯಲಕ್ಷ್ಮೀ ಸ್ಟೀಲ್ ಕಾರ್ಪೊರೇಷನ್‌ನ ಜೆ.ಕೆ.ಶಶಿಕಲಾ, ಹೊಸನಗರ ಸರ್ಕಾರಿ ಆಸ್ಪತೆಯ ಕಣ್ಣು ತಜ್ಞೆ ಡಾ.ಶಂಶಾದ್ ಬೇಗಂ, ಎಸ್.ಎ.ಫ್ಲವರ್ ಮತ್ತು ಡೆಕೋರೇಷನ್‌ ಮಾಲಕಿ ಶೆರ್ಲಿ ಕ್ಲೆಮೆಂಟ್, ಶಕ್ತಿ ಇನೋವೇಶನ್‌ನ ಸಿಇಒ ಶಿಲ್ಪಾ ಗೋಪಿನಾಥ, ಉದ್ಯಮಿ ಎಸ್.ಎಚ್.ಗಾಯತ್ರಿ, ರೂಪದರ್ಶಿ ಕೀರ್ತಿ ಶಿವಮೂರ್ತಿ ಮತ್ತು ಮೇಕಪ್ ಆರ್ಟಿಸ್ಟ್ ದೀನಾಜ್ ಅಯೂಮ್ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಶಿಲ್ಪಾ ಗೋಪಿನಾಥ್, ಇದೊಂದು ಅದ್ಭುತವಾದ ಆಭರಣಗಳ ಪ್ರದರ್ಶನವಾಗಿದ್ದು, ಹಿಂದೆಂದೂ ನೋಡಿರದ ಅಪೂರ್ವ ಸಂಗ್ರಹ ಇಲ್ಲಿದೆ. ಮಹಿಳೆಯರು ಇಷ್ಟಪಡುವ ಮತ್ತು ಮನ ಆಕರ್ಷಿಸುವ ಆಭರಣಗಳು ಇವಾಗಿದ್ದು, ಗ್ರಾಹಕರು ನಿಶ್ಚಿತವಾಗಿಯೂ ಇಷ್ಟಪಡುತ್ತಾರೆ ಎಂದು ಹೇಳಿದರು.

ರೂಪದರ್ಶಿ ಕೀರ್ತಿ ಶಿವಮೂರ್ತಿ ಮಾತನಾಡಿ, ಹಿಂದೆಂದೂ ನೋಡಿರದ ವಜ್ರಾಭರಣಗಳ ಸಂಗ್ರಹ ಶಿವಮೊಗ್ಗದಂತಹ ನಗರದಲ್ಲಿ ನಡೆಯುತ್ತಿರುವುದು ನಗರದ ಗ್ರಾಹಕರ ಪಾಲಿಗೆ ವಿಶಿಷ್ಟವಾಗಿದೆ. ಮಹಿಳೆಯರು ವಿಶೇಷವಾಗಿ ಆಭರಣಪ್ರಿಯರು ಇದರ ಲಾಭ ಪಡೆಯಬೇಕು. ವಿದೇಶಿ ಆಭರಣಗಳ ಸಂಗ್ರಹವನ್ನು ಒಂದೇ ಸೂರಿನಡಿ ನೋಡು, ಖರೀದಿಸು ವ್ಯವಸ್ಥೆ ಮಾಡಿರುವುದು ಮೆಚ್ಚತಕ್ಕದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಅಜಿತ್ ಮತ್ತು ಶೋಯೆಬ್, ಅನೇಕ ಗ್ರಾಹಕರು ಹಾಜರಿದ್ದರು.