ನೀತಿ ಸಂಹಿತೆ ದೂರಿಗೆ ಸ್ಪಂದಿಸದ ಡಿಸಿ, ಆಯುಕ್ತೆ, ಉಪ ಆಯುಕ್ತೆ ವರ್ಗಾಯಿಸಬೇಕು

| Published : Apr 12 2024, 01:01 AM IST

ನೀತಿ ಸಂಹಿತೆ ದೂರಿಗೆ ಸ್ಪಂದಿಸದ ಡಿಸಿ, ಆಯುಕ್ತೆ, ಉಪ ಆಯುಕ್ತೆ ವರ್ಗಾಯಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ರಂಜಾನ್ ಹಬ್ಬಕ್ಕೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ದಿನಸಿ ಸಾಮಗ್ರಿ ವಿತರಿಸುವುದೂ ಸೇರಿದಂತೆ ಕಾಂಗ್ರೆಸ್ಸಿನವರು ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಐದು ವಿವಿಧ ಪ್ರಕರಣಗಳ ಬಗ್ಗೆ ದೂರು ನೀಡಿದರೂ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಹಾಗೂ ಉಪ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಬಿಜೆಪಿ ಕಾನೂನು ಪ್ರಕೋಷ್ಟ ಬುಧವಾರ ಒತ್ತಾಯಿಸಿತು.

- ಕಾಂಗ್ರೆಸ್‌ ವಿರುದ್ಧ ದೂರುಗಳ ನಿರ್ಲಕ್ಷ್ಯ: ಬಿಜೆಪಿ ಆರೋಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಂಜಾನ್ ಹಬ್ಬಕ್ಕೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ದಿನಸಿ ಸಾಮಗ್ರಿ ವಿತರಿಸುವುದೂ ಸೇರಿದಂತೆ ಕಾಂಗ್ರೆಸ್ಸಿನವರು ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಐದು ವಿವಿಧ ಪ್ರಕರಣಗಳ ಬಗ್ಗೆ ದೂರು ನೀಡಿದರೂ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಹಾಗೂ ಉಪ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಬಿಜೆಪಿ ಕಾನೂನು ಪ್ರಕೋಷ್ಟ ಬುಧವಾರ ಒತ್ತಾಯಿಸಿತು.

ನಗರದಲ್ಲಿ ಬುಧವಾರ ವಕೀಲ ಎ.ಸಿ.ರಾ‍ಘವೇಂದ್ರ ಮೊಹರೆ, ದಿವಾಕರ ಹನುಮಂತಪ್ಪ, ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಅಧಿಕಾರಿಗಳ ನಡೆಯನ್ನು ಖಂಡಿಸಿದರು.

ಭಗತ್ ಸಿಂಗ್ ನಗರ, ಯಲ್ಲಮ್ಮ ನಗರ, ಎಸ್‌ಒಜಿ ಕಾಲನಿ ಇತರೆಡೆ ದಿನಸಿ ಹಂಚಿಕೆ ಬಗ್ಗೆ ಮೌಖಿಕವಾಗಿ, ವೀಡಿಯೋ ಕಳಿಸಿ, ಲಿಖಿತ ದೂರು ನೀಡಿದ್ದೇವೆ. ಜಿಲ್ಲಾಧಿಕಾರಿ ಕಾಂಗ್ರೆಸ್ ಹಾಗೂ ಸ್ಥಳೀಯ ಸಚಿವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸಚಿವರು ಜಿಲ್ಲೆ ಕೆಲವು ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಸೂಚನೆ ನೀಡಿದ್ದಾರೆ. ಹಬ್ಬಗಳ ನೆಪದಲ್ಲಿ ಮತದಾರರಿಗೆ ಉಡುಗೊರೆ ನೀಡುವ, ಆಹಾರ ಧಾನ್ಯ ನೀಡುವ ಮೂಲಕ ಓಲೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಆಯೋಗಕ್ಕೆ ದೂರು ನೀಡುವ ಜೊತೆಗೆ ರಾಜ್ಯಪಾಲರ ಬಳಿ ಶೀಘ್ರವೇ ನಿಯೋಗ ತೆರಳಲಿದ್ದೇವೆ ಎಂದರು.

ಖಾಸಗಿ ಬ್ಯಾಂಕ್ ಸಮುದಾಯ ಭ‍ವನದಲ್ಲಿ ಸೊಸೈಟಿಗಳು, ನ್ಯಾಯ ಬೆಲೆ ಅಂಗಡಿಯವರ ಸಭೆ ಮಾಡಿದರೆ, ಅಧಿಕಾರಿಗಳು ಅಲ್ಲಿ ಕಾಂಗ್ರೆಸ್ಸಿನ ಕೈಗೊಂಬೆಯಂತೆ ವರ್ತಿಸಿದ್ದಾರೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಿಂದ ಸುಮಾರು 1.70 ಲಕ್ಷಕ್ಕೂ ಅಧಿಕ ಮತದಾರರ ಹೆಸರು 2 ಕಡೆ ಇವೆ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಎಚ್‌.ಪಿ. ವಿಶ್ವಾಸ್, ಟಿಂಕರ್ ಮಂಜಣ್ಣ, ಕಿಶೋರಕುಮಾರ, ಬಾತಿ ಶಿವಣ್ಣ ಇತರರು ಇದ್ದರು.

- - - -10ಕೆಡಿವಿಜಿ6: ಬಿಜೆಪಿ ಕಾನೂನು ಪ್ರಕೋಷ್ಟ ಮುಖಂಡರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.