ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಮಂಗಳವಾರ ದಿಢೀರ್ ಭೇಟಿ ನೀಡಿ ಸಕ್ಕರೆ ಯಾಡ್೯ನಲ್ಲಿ ರೈತರಿಗೆ ಕಲ್ಪಿಸಿರುವ ಮೂಲ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.ರೈತರಿಗೆ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವ ಬಗ್ಗೆ ಖಾತ್ರಿ ಪಡಿಸುಕೊಂಡ ಜಿಲ್ಲಾಧಿಕಾರಿಗಳು ಕ್ಯಾಂಟೀನ್ ತೆರೆಯಲು ಆಸಕ್ತಿ ಹೊಂದಿರುವವರಿಗೆ ಅವಕಾಶ ನೀಡುವಂತೆ ತಿಳಿಸಿದರು.
ಕಬ್ಬಿನ ಹಾಲು ವ್ಯರ್ಥವಾಗುತ್ತಿದೆ ಎಂಬ ದೂರುಗಳ ಬಗ್ಗೆ ಪರಿಶೀಲಿಸಿದಾಗ ಪೈಪ್ ಲೈನ್ ದುರಸ್ತಿಯಿಂದ ಹೊರಬರುತ್ತಿದೆ. ಅದನ್ನು ಸಂಗ್ರಹಿಸಿ ವ್ಯರ್ಥವಾಗದಂತೆ ಕ್ರಮಕೈಗೊಂಡಿರುವ ಬಗ್ಗೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು.ಪ್ರತಿ ದಿನ ಕಬ್ಬು ಹರಿಯುವಿಕೆ ಕುರಿತಂತೆ ಸೂಚನಾ ಫಲಕದಲ್ಲಿ ಅನಾವರಣ ಕುರಿತು ಹಾಗೂ ರೈತರಿಗೆ ಮಾಹಿತಿ ನೀಡಲು ಸಿಬ್ಬಂದಿ ನಿಯೋಜಿಸಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿದಿನ 2500 ಮೆಟ್ರಿಕ್ ಟನ್ ಕಬ್ಬು ಹರಿಯುವ ರೀತಿ ಕೆಲಸ ನಿರ್ವಹಿಸುವಂತೆ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಯಂತ್ರಗಳನ್ನು ಸುಸ್ಥಿತಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಸಣ್ಣ ಪುಟ್ಟ ರಿಪೇರಿ ಇದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಬ್ಬು ಕಟಾವು ಮಾಡಲು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕಾರ್ಮಿಕರು ಆಗಮಿಸಿದ್ದು, ಅಗತ್ಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಈ ವೇಳೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಮುಖ್ಯ ಎಂಜಿನಿಯರ್ ವಿರೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಆರೆಸ್ಸೆಸ್ ಗೀತೆ ಯಾವುದೋ ಸಂಸ್ಥೆ, ಪಕ್ಷ, ಜಾತಿಗೆ ಸೇರಿಲ್ಲ: ಕೆ.ಎಂ.ಉದಯ್ಮದ್ದೂರು:
ಆರ್‌ಎಸ್‌ಎಸ್ ಗೀತೆ ಯಾವುದೇ ಸಂಸ್ಥೆ, ಪಕ್ಷ ಅಥವಾ ಜಾತಿಗೆ ಸೀಮಿತವಲ್ಲ. ಈ ಗೀತೆ ಹಾಡಲು ಯಾವುದೇ ನಿಯಮ, ಕಾನೂನುಗಳಿಲ್ಲ. ಬೀದಿಯಲ್ಲಿ ಹೋಗೋ ದಾಸಯ್ಯನೂ ಹಾಡುತ್ತಾನೆ. ಓರ್ವ ಫೇಮಸ್ ಸಿಂಗರ್ ಕೂಡ ಹಾಡುತ್ತಾನೆ ಎಂದು ಶಾಸಕ ಕೆ.ಎಂ.ಉದಯ್ ವ್ಯಂಗ್ಯವಾಡಿದರು.ತಾಲೂಕಿನ ಕೆ.ಬೆಳ್ಳೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರೆಸ್ಸೆಸ್ ಗೀತೆ ಇದಕ್ಕೆ ಸೇರಿದೆ ಎಂದು ಏನಾದರೂ ಬರೆದು ಕೊಟ್ಟಿದ್ದಾರಾ. ಯಾರು ಬೇಕಾದರೂ ಎಲ್ಲಾದರೂ ಹಾಡಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡರು.
ಆರೆಸ್ಸೆಸ್ ಗೀತೆ ದೇವರ ಹಾಡು. ಇದು ಪಕ್ಷ, ಸಂಸ್ಥೆ ಅಥವಾ ಜಾತಿಗೆ ಸೇರಿಲ್ಲ. ಈ ಹಾಡನ್ನು ಆರೆಸ್ಸೆಸ್‌ಗೆ ಅಂತ ಯಾರಾದರೂ ಬರೆದು ಕೊಟ್ಟಿದ್ದಾರಾ. ಯಾರು ಯಾವ ಗೀತೆಯನ್ನಾದರೂ ಎಲ್ಲಿ ಬೇಕಾದರೂ ಹಾಡಬಹುದು. ಇಲ್ಲಿ ಎಲ್ಲರೂ ಸ್ವತಂತ್ರರರೇ ಎಂದರು.ಆರೆಸ್ಸೆಸ್ ಗೆ ಅಂತ ಈ ಗೀತೆನೋ ಅಥವಾ ಶ್ಲೋಕನೋ ಬರೆದುಕೊಟ್ಟಿಲ್ಲ. ಆದರೆ, ಅವರೇ ಆಗಂತ ಹೇಳೋದನ್ನು ರೂಢಿ ಮಾಡಿಸಿಕೊಂಡಿರಬೇಕು ಅಷ್ಟೆ. ಅದನ್ನು ಬೇರೆಯವರು ಹೇಳಬಾರದು ಅಂತಿಲ್ಲ. ಈ ಗೀತೆ ಹಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.