ಕನ್ನಡಪ್ರಭ ವಾರ್ತೆ ಬೆಳಗಾವಿವೀರರಾಣಿ‌ ಕಿತ್ತೂರು ಚನ್ನಮ್ಮ ಉತ್ಸವದ ಅಂಗವಾಗಿ ರಚಿಸಲಾದ ವಿವಿಧ ಉಪ ಸಮಿತಿಗಳು ಪರಸ್ಪರ‌ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರ ಮೂಲಕ ಉತ್ಸವ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವೀರರಾಣಿ‌ ಕಿತ್ತೂರು ಚನ್ನಮ್ಮ ಉತ್ಸವದ ಅಂಗವಾಗಿ ರಚಿಸಲಾದ ವಿವಿಧ ಉಪ ಸಮಿತಿಗಳು ಪರಸ್ಪರ‌ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರ ಮೂಲಕ ಉತ್ಸವ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕಿತ್ತೂರು ಉತ್ಸವ-2026ರ ಉಪಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ಸವದ ಯಶಸ್ವಿಗಾಗಿ ಈಗಾಗಲೇ ರಚಿಸಲಾದ ವಿಜಯ ಜ್ಯೋತಿ, ಸ್ವಾಗತ, ವಸತಿ, ಉಟೋಪಚಾರ, ವೇದಿಕೆ, ಸಾಂಸ್ಕೃತಿಕ, ಮೆರವಣಿಗೆ‌ ಸಮಿತಿ ಸೆರಿದಂತೆ ವಿವಿಧ ಉಪ‌ ಸಮಿತಿಗಳು ತಮ್ಮ‌ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಉಪ ಸಮಿತಿಗಳಿಗೆ ಹಂಚಿಕೆ‌ ಮಾಡಲಾದ ಅನುದಾನದಡಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆಗೆ ಕ್ರಮ‌ ವಹಿಸಲು ಸೂಚಿಸಿದರು.

ಕಿತ್ತೂರಿನಲ್ಲಿ 3 ದಿನಗಳ ಕಾಲ ಜರುಗುವ ಕಿತ್ತೂರು ಉತ್ಸವದ ಜತೆಗೆ ಕಾಕತಿ ಉತ್ಸವದ ಆಚರಣೆಗೆ ಎಲ್ಲ‌ ಉಪ ಸಮಿತಿಗಳು ಜವಾಬ್ದಾರಿಯುತವಾಗಿ ನಿರ್ವಹಿಸುವುದರ ಮೂಲಕ‌ ಅದ್ಧೂರಿ ಉತ್ಸವದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಉಪ ವಿಭಾಗಾಧಿಕಾರಿಗಳಾದ ಪ್ರವೀಣ ಜೈನ್, ಶ್ರವಣಕುಮಾರ ನಾಯಕ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಉಪನಿರ್ದೆಶಕ‌ ಮಲ್ಲಿಕಾರ್ಜುನ ನಾಯಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.