ಖಾಸಗಿ ಗೋಶಾಲೆಗಳ ಸೂಕ್ತ ನಿರ್ವಹಣೆಗೆ ಡಿಸಿ ಸೂಚನೆ

| Published : Jul 06 2025, 11:48 PM IST

ಖಾಸಗಿ ಗೋಶಾಲೆಗಳ ಸೂಕ್ತ ನಿರ್ವಹಣೆಗೆ ಡಿಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಸಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ 2025-26ನೇ ಸಾಲಿಗೆ ಪಾಂಜಾರಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಕಾರ್ಯಕ್ರಮದಡಿ ಸಹಾಯಾನುದಾನ ನೀಡುವ ಜಿಲ್ಲೆಯಲ್ಲಿರುವ 10 ಖಾಸಗಿ ಗೋಶಾಲೆಗಳಿಗೆ ಆರ್ಥಿಕ ಸಹಾಯಾನುದಾನ ನೀಡಲು ಪ್ರಸ್ತಾವನೆಗಳನ್ನು ಪರಿಶೀಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾಧಿಕಾರಿ ಸಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯನ್ನು ಜುಲೈ 3ರಂದು ನಡೆಸಲಾಗಿದ್ದು, ಸಭೆಯಲ್ಲಿ 2025-26ನೇ ಸಾಲಿಗೆ ಪಾಂಜಾರಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಕಾರ್ಯಕ್ರಮದಡಿ ಸಹಾಯಾನುದಾನ ನೀಡುವ ಜಿಲ್ಲೆಯಲ್ಲಿರುವ 10 ಖಾಸಗಿ ಗೋಶಾಲೆಗಳಿಗೆ ಆರ್ಥಿಕ ಸಹಾಯಾನುದಾನ ನೀಡಲು ಪ್ರಸ್ತಾವನೆಗಳನ್ನು ಪರೀಶಿಲಿಸಲಾಯಿತು.

10 ಖಾಸಗಿ ಗೋಶಾಲೆಗಳ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗೋಶಾಲೆಯಲ್ಲಿರುವ ಎಲ್ಲ ಜಾನುವಾರುಗಳಿಗೆ ಸರಿಯಾಗಿ ಮೇವು ಮತ್ತು ಪೌಷ್ಟಿಕ ಆಹಾರ ನೀಡಲು ಮತ್ತು ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳು ಗೋಶಾಲೆ ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಮತ್ತು ಲವಣ ಮಿಶ್ರಣ ನೀಡಿ, ಗೋ ಸಂರಕ್ಷಣೆ ಮಾಡಲು ತಿಳಿಸಿದರು.

1962 ಸಹಾಯವಾಣಿ ಕರೆ ಬಂದಾಗ ಕೂಡಲೇ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಲು ಸೂಚಿಸಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಕೊರತೆಯಿದ್ದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ನೋಡಲ್ ಅಧಿಕಾರಿಗಳು, ಪಶು ಸಂಜೀವಿನಿ ಇವರು ಅಗತ್ಯ ಕ್ರಮ ಜರುಗಿಸಿ, ಪಶು ಸಂಜೀವಿನಿ ವಾಹನ ಸೇವೆಯನ್ನು ವಿಸ್ತರಿಸಲು ಕ್ರಮ ಜರುಗಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಸುರೇಶ ಹಿರೇಮಠ ರವರು ರಚಿಸಿದ ಬೀದಿ ನಾಯಿಗಳ ಕಥೆ-ವ್ಯಥೆ ಕುರಿತ ಕಿರುಹೊತ್ತಿಗೆಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಕರಾದ ಎಸ್.ಎಚ್. ಕರಡಿಗುಡ್ಡ, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ/ಅಧಿಕಾರಿಗಳು ಹಾಗೂ ಎಲ್ಲ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.