ಬಾಗಲಕೋಟೆ ನವನಗರದ ಯುನಿಟ್-2ರಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ಅಂತರ ಜಿಲ್ಲಾ ಕ್ರೀಡಾ ವಸತಿ ನಿಲಯಗಳ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಮಂಗಳವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದ ಯುನಿಟ್-2ರಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ಅಂತರ ಜಿಲ್ಲಾ ಕ್ರೀಡಾ ವಸತಿ ನಿಲಯಗಳ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಮಂಗಳವಾರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಸೈಕ್ಲಿಂಗ್ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಥ್ಲೆಟಿಕ್ಸ್‌ನಲ್ಲಿ ಸೈಕ್ಲಿಂಗ್ ಕ್ರೀಡೆ ಒಂದಾಗಿದ್ದು, ಸೈಕ್ಲಿಂಗ್ ನಲ್ಲಿ ಉತ್ತಮ ಸಾಧನೆ ಮಾಡಲು ತಿಳಿಸಿದರು. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಸೈಕ್ಲಿಂಗ್ ತರಬೇತುದಾರರಾದ ಅನಿತಾ ನಿಂಬರಗಿ, ಅಲ್ಕಿ ಪಡತಾರೆ, ವಿದ್ಯಾ ಕುಲಕರ್ಣಿ, ಯಲ್ಲಪ್ಪ ಹಿರೇಕುರಬರ, ಶ್ರೀಶೈಲ ಲಾಯನ್ನವರ, ರಮೇಶ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸ್ಪರ್ಧೆಯ ವಿಜೇತರು:

ಮಾಸ್ ಸ್ಟಾರ್ಟ್‌ ಸೈಕ್ಲಿಂಗ್ ಸ್ಪರ್ಧೆ:5 ರಿಂದ 7ನೇ ತರಗತಿಯ ಬಾಲಕರ ವಿಭಾಗದಲ್ಲಿ ಮಾರುತಿ ಚೌದಾಳ (ಪ್ರಥಮ), ಸಂಗನಬಸವ ಬನಗೊಡೆ (ದ್ವಿತೀಯ), ಶ್ರೇಯಸ್ ಬಗಲಿ (ತೃತೀಯ), ಬಾಲಕಿಯರ ವಿಭಾಗದಲ್ಲಿ ಸಹನಾ ಮುತ್ತಾಳ (ಪ್ರಥಮ), ಯಲ್ಲವ್ವ ಮದಭಾವಿ (ದ್ವಿತೀಯ), ವಿದ್ಯಾ ಲಮಾಣಿ (ತೃತೀಯ), 8 ರಿಂದ 10ನೇ ತರಗತಿಯ ಬಾಲಕರ ವಿಭಾಗದಲ್ಲಿ ಶ್ರೀಶೈಲ ನಾದ (ಪ್ರಥಮ), ವಿಶ್ವನಾಥ ಉರಡೆಪ್ಪಗೋಳ (ದ್ವಿತೀಯ), ಬಸವರಾಜ ಯಳಮನಿ (ತೃತೀಯ), ಬಾಲಕಿಯರ ವಿಭಾಗದಲ್ಲಿ ಪ್ರೀಯಾಂಕ ಲಮಾನಿ (ಪ್ರಥಮ), ಕರಿಷ್ಮಾ ತಟಗಾರ (ದ್ವಿತೀಯ), ಕೌಶಲ್ಯ ರಾಮಗೊಂಡ (ತೃತೀಯ). ಪ್ರಥಮ ಪಿಯುಸಿಯಿಂದ ಪದವಿವರೆಗಿನ ಬಾಲಕರ ವಿಭಾಗದಲ್ಲಿ ಅರವಿಂದ ರಾಠೋಡ (ಪ್ರಥಮ), ಶ್ರೀನಿವಾಸ ರಜಪೂತ (ದ್ವಿತೀಯ), ಪುನಿತ್ ಬಿರಾದಾರ (ತೃತೀಯ), ಬಾಲಕಿಯರ ವಿಭಾಗದಲ್ಲಿ ಜ್ಯೋತಿ ರಾಠೋಡ (ಪ್ರಥಮ), ಮಧು ಬೆಂಡಿಗೇರಿ (ದ್ವಿತೀಯ), ಅಮೂಲ್ಯ ಪೂಜಾರಿ (ತೃತೀಯ) ಸ್ಥಾನ ಪಡೆದುಕೊಂಡರು.

ಟೈಮ್ ಟ್ರಯಲ್ ಸ್ಪರ್ಧೆ: 5 ರಿಂದ 7ನೇ ತರಗತಿಯ ಬಾಲಕರ ವಿಭಾಗದಲ್ಲಿ ಗದಗ ಜಿಲ್ಲೆಯ ಮಾರುತಿ ಚೌದಾಳ (ಪ್ರಥಮ), ವಿಜಯಪುರ ಜಿಲ್ಲೆಯ ಸಮರ್ಥ ಪಾಟೀಲ (ದ್ವಿತೀಯ), ಶ್ರೇಯಸ್ ಬಗಲಿ (ತೃತೀಯ), ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆಯ ಸಹನಾ ಮುತ್ತಾಳ (ಪ್ರಥಮ), ವಿಜಯಪುರದ ಯಲ್ಲಪ್ಪ ಮದಭಾವಿ (ದ್ವಿತೀಯ), ಬಾಗಲಕೋಟೆಯ ವಿದ್ಯಾ ಲಮಾಣಿ (ತೃತೀಯ), ಪ್ರಥಮ ಪಿಯುಸಿಯಿಂದ ಪದವಿವರೆಗಿನ ಬಾಲಕರ ವಿಭಾಗದಲ್ಲಿ ಅರವಿಂದ ರಾಠೋಡ (ಪ್ರಥಮ), ಶ್ರೀನಿವಾಸ ರಜಪೂತ (ದ್ವಿತೀಯ), ಪುನಿತ್ ಬಿರಾದಾರ (ತೃತೀಯ), ಬಾಲಕಿಯರ ವಿಭಾಗದಲ್ಲಿ ಮಧು ಬೆಂಡಿಗೇರಿ (ಪ್ರಥಮ), ಜ್ಯೋತಿ ರಾಠೋಡ (ದ್ವಿತೀಯ), ಅಮೂಲ್ಯ ಪೂಜಾರಿ (ತೃತೀಯ) ಸ್ಥಾನ ಪಡೆದರು.

8 ರಿಂದ 10ನೇ ತರಗತಿಯ ಬಾಲಕರ ವಿಭಾಗ: ಸಂಗಮೇಶ ತೋಳಮಟ್ಟಿ (ಪ್ರಥಮ), ಶ್ರೀಶೈಲ ನಾದ (ದ್ವಿತೀಯ), ಅಭಿಷೇಕ ದಿಡ್ಡಿಬಾಗಿಲ (ತೃತೀಯ), ಬಾಲಕಿಯರ ವಿಭಾಗದಲ್ಲಿ ಪ್ರೀಯಾಂಕ ಲಮಾನಿ (ಪ್ರಥಮ), ಸಂಗವ್ವ ಬನಗೊಂಡ (ದ್ವಿತೀಯ), ಕರಿಷ್ಮಾ ತಟಗಾರ (ತೃತೀಯ). ಪ್ರಥಮ ಪಿಯುಸಿಯಿಂದ ಪದವಿವರೆಗಿನ ಬಾಲಕರ ವಿಭಾಗದಲ್ಲಿ ಶ್ರೀನಿವಾಸ ರಜಪೂತ (ಪ್ರಥಮ), ಬಾಹುಬಲಿ ಪಾಟೀಲ (ದ್ವಿತೀಯ), ಕೃಷ್ಣ ಭಂಗಿ (ತೃತೀಯ), ಬಾಲಕಿಯರ ವಿಭಾಗದಲ್ಲಿ ಮಧು ಬೆಂಡಿಗೇರಿ (ಪ್ರಥಮ), ಜ್ಯೋತಿ ರಾಠೋಡ (ದ್ವಿತೀಯ), ಅಮೂಲ್ಯ ಪೂಜಾರಿ (ತೃತೀಯ) ಸ್ಥಾನ ಪಡೆದುಕೊಂಡರು.