ಜನರ ಪತ್ರಕ್ಕೆ ಸ್ಪಂದಿಸಿ ಶ್ರೀರೂಪಾ ಕ್ರಮ
---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇತ್ತೀಚೆಗೆ ಚರಂಡಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಮಂಗಳವಾರ ಖುದ್ದು ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಡಾವಣೆ ನಿವಾಸಿಗಳ ಸಮಸ್ಯೆ ಆಲಿಸಿದ್ದಾರೆ.ಈ ಸಂಬಂಧ ನಗರಸಭ ಎಂಜಿನಿಯರ್ ಹಾಗೂ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.ಆಯುಕ್ತರಿಗೆ ಖಡಕ್ ವಾರ್ನಿಂಗ್:
ಇದೆ ವೇಳೆ ನಗರಸಭೆ ಆಯುಕ್ತೆ ರುದ್ರಮ್ಮ ಶರಣಯ್ಯ ಅವರಿಗೆ ಸಾರ್ವಜನಿಕರ ದೂರಿನ ಹಿನ್ನೆಲೆ ಜಿಲ್ಲಾಧಿಕಾರಿಗಳು ತರಾಟೆ ತೆಗೆದುಕೊಂಡರು. ಜನರನ್ನು ಕೆಲಸಕ್ಕಾಗಿ ಅಲೆದಾಡಿಸಬೇಡಿ. ಸಕಾಲದಲ್ಲಿ ಇ-ಸ್ವತ್ತು ನೀಡಿ, ನನಗೆ ಮುಂದಿನ ದಿನಗಳಲ್ಲಿ ದೂರುಗಳು ಬಾರದಂತೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಡಿವೈಎಸ್ಪಿ ಧರ್ಮೇಂದ್ರ, ನಟರಾಜು ಇನ್ನಿತರಿದ್ದರು.---ಅನುಮತಿ ಇಲ್ಲದೇ ರೆಸಾರ್ಟ್ ಕಟ್ಟಿದರೆ ಕ್ರಮ: ಡೀಸಿ
ಅಕ್ರಮ ರೆಸಾರ್ಟ್, ಹೋಂಸ್ಟೇಗಳು ಎಲ್ಲೆಲ್ಲಿ ಇವೆ ಎಂಬುದರ ಕುರಿತು ಸಂಬಂಧಿಸಿದ ಆಯಾ ತಹಸೀಲ್ದಾರ್ ನನಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಗುಂಡ್ಲುಪೇಟೆಯಲ್ಲಿ ಅನುಮತಿ ಇಲ್ಲದ 20ಕ್ಕೂ ಅಧಿಕ ಹೋಂಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮಕೈಗೊಂಡು ಅವುಗಳನ್ನು ಬಂದ್ ಮಾಡಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲಾದ್ಯಂತ ಇರುವ ಅನುಮತಿ ಇಲ್ಲದ ರೆಸಾರ್ಟ್‌ಗಳ ಮಾಹಿತಿ ಪಡೆಯಲಾಗುತ್ತಿದೆ. ಇತ್ತೀಚಿನ ಬೆಂಗಳೂರಿನಿಂದ ಬಂದು ಅಕ್ರಮ ಚಟುವಟಿಕೆ ನಡೆಸಿದ ಕುರಿತು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಮುಂದೆ ಇಂತಹ ಚಟುವಟಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.---7ಕೆಜಿಎಲ್ 3ಕೊಳ್ಳೇಗಾಲದ ನಾಗಪ್ಪ ಬಡಾವಣೆಗೆ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ.