ಚಿಕ್ಕಮಗಳೂರುಆಡಳಿತ ಯಂತ್ರದಲ್ಲಿ ಇದೇ ಮೊದಲ ಬಾರಿಗೆ ಕಾಫಿ ನಾಡಿನಲ್ಲಿ ವಿಶೇಷ ದಿನ. ಕಾರಣ, ಒಂದೆಡೆ ಹೊಸ ವರ್ಷಾಚರಣೆ, ಇನ್ನೊಂದೆಡೆ ಇದೇ ದಿನ ನೂತನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅಧಿಕಾರ ಸ್ವೀಕರಿಸಿದ್ದಾರೆ.
ಎಂ.ಎನ್.ನಾಗರಾಜ್ ಗುರುವಾರ ಸಂಜೆ ಮೀನಾ ನಾಗರಾಜ್ ಅವರಿಂದ ಅಧಿಕಾರ ಸ್ವೀಕಾರ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಆಡಳಿತ ಯಂತ್ರದಲ್ಲಿ ಇದೇ ಮೊದಲ ಬಾರಿಗೆ ಕಾಫಿ ನಾಡಿನಲ್ಲಿ ವಿಶೇಷ ದಿನ. ಕಾರಣ, ಒಂದೆಡೆ ಹೊಸ ವರ್ಷಾಚರಣೆ, ಇನ್ನೊಂದೆಡೆ ಇದೇ ದಿನ ನೂತನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅಧಿಕಾರ ಸ್ವೀಕರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈ ಹುದ್ದೆಗೆ ನಿಯುಕ್ತರಾದ ಎಂ.ಎನ್.ನಾಗರಾಜ್ ಗುರುವಾರ ಸಂಜೆ ಮೀನಾ ನಾಗರಾಜ್ ಅವರಿಂದ ಅಧಿಕಾರ ಸ್ವೀಕರಿಸಿದರು.ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಂದಿರುವ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅಧಿಕಾರ ವಹಿಸಿಕೊಂಡರು.
ನಿಕಟಪೂರ್ವ ಎಸ್‌ಪಿ ವಿಕ್ರಂ ಅಮಟೆ ಮಧ್ಯಾಹ್ನ 12 ಗಂಟೆ ಒಳಗೆ ಚಿಕ್ಕಮಗಳೂರಿನ ಎಸ್‌ಪಿ ನಿವಾಸ ತೊರೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಚಿಕ್ಕಮಗಳೂರಿನಿಂದ ವಿಕ್ರಂ ಅಮಟೆ ವರ್ಗಾವಣೆಯಾಗಿದೆ ಎಂಬುದು ತಿಳಿಯುತ್ತಿದ್ದಂತೆ ನೂರಾರು ಜನ ಎಸ್‌ಪಿ ನಿವಾಸದ ಎದುರು ಜಮಾಯಿಸಿದ್ದರು. ಜೊತೆಗೆ ಅವರು ಮಾಡಿದ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಭಾವನಾತ್ಮಕವಾಗಿ ಬೀಳ್ಕೋಡುಗೆ ನೀಡಿದರು.ಇನ್ನು ಚಿಕ್ಕಮಗಳೂರು ಎಸ್‌ಪಿಯಾಗಿ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದ ಜಿತೇಂದ್ರ ಕುಮಾರ್ ದಯಾಮ ಅಧಿಕಾರಿಗಳ ಬಳಿ ಜಿಲ್ಲೆಯ ಸಮಗ್ರ ಮಾಹಿತಿ ಪಡೆದರು. ಜಿತೇಂದ್ರ ಕುಮಾರ್ ದಯಾಮ ಚಿಕ್ಕಮಗಳೂರಿನಲ್ಲಿ ಮೂರು ತಿಂಗಳ ಕಾಲ ಪ್ರಭಾರ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದು, ಜಿಲ್ಲೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿತ್ತು.--- ಬಾಕ್ಸ್ --ಅಧಿಕಾರ ಹಸ್ತಾಂತರಿಸಿ ತೆರಳಿದ ನಿಕಟಪೂರ್ವ ಡಿಸಿಈವರೆಗೆ ಚಿಕ್ಕಮಗಳೂರು ಡಿಸಿಯಾಗಿದ್ದ ಮೀನಾ ನಾಗರಾಜ್ ಕಂದಾಯ ಇಲಾಖೆ ಆಯುಕ್ತರಾಗಿ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎನ್.ಎಂ.ನಾಗರಾಜ್ ವರ್ಗಾವಣೆ ಯಾಗಿದ್ದಾರೆ. ಗುರುವಾರ ಸಂಜೆ ಡಿಸಿ ಮೀನಾ ನಾಗರಾಜ್ ನೂತನ ಡಿಸಿ ಎನ್.ಎಂ.ನಾಗರಾಜ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
--ಎಸ್‌ಪಿಗೆ ಭಾವನಾತ್ಮಕ ಬೀಳ್ಕೊಡುಗೆಎಸ್‌ಪಿ ವಿಕ್ರಂ ಅಮಟೆ ವರ್ಗಾವಣೆಯಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಗುರುವಾರ ಬೆಳಗ್ಗೆ ವಿಕ್ರಂ ಅಮಟೆ ನಿವಾಸದ ಎದುರು ಜಮಾಯಿಸಿದ್ದರು. ಎರಡು ವರ್ಷ ನಾಲ್ಕು ತಿಂಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪಕ್ಷಾತೀತ ಜಾತ್ಯಾತೀತವಾಗಿ ಜನ ಮನೆ ಎದುರು ನಿಂತು ಬೀಳ್ಕೊಡುಗೆ ನೀಡಿದ್ದು ವಿಶೇಷವಾಗಿತ್ತು.ಡಿಸಿ ಮೀನಾ ನಾಗರಾಜ್ ಅವರು ವರ್ಗಾವಣೆಯಾದ ವಿಷಯ ತಿಳಿದ ಸಾರ್ವಜನಿಕರು ಬೆಳಗ್ಗೆ ಕಚೇರಿಗೆ ಆಗಮಿಸಿ ಡಿಸಿಯ ಮುಂದಿನ ವೃತ್ತಿ ಜೀವನಕ್ಕೆ ಶುಭಾಷಯ ಕೋರುತ್ತಿದ್ದುದು ಮಧ್ಯಾಹ್ನದವರೆಗೂ ಮುಂದುವರಿದಿತ್ತು.
-1 ಕೆಸಿಕೆಎಂ 3ಚಿಕ್ಕಮಗಳೂರು ಡಿಸಿ ಆಗಿದ್ದ ಮೀನಾ ನಾಗರಾಜ್ ಅವರಿಂದ ನೂತನ ಡಿಸಿ ಎನ್.ಎಂ.ನಾಗರಾಜ್ ಗುರುವಾರ ಅಧಿಕಾರ ಸ್ವೀಕರಿಸಿದರು.
--1 ಕೆಸಿಕೆಎಂ 4ಚಿಕ್ಕಮಗಳೂರು ಎಸ್‌ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಗುರುವಾರ ಅಧಿಕಾರ ಸ್ವೀಕರಿಸಿದರು.