ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಸಿ ಭೇಟಿ, ಪರಿಶೀಲನೆ

| Published : Sep 01 2025, 01:04 AM IST

ಸಾರಾಂಶ

ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರ ನೇತೃತ್ವದ ತಂಡ ತಾಲೂಕಿನ ಉಕುಮನಾಳ, ಕತ್ನಳ್ಳಿ, ಹಿಟ್ನಳ್ಳಿ, ಜುಮನಾಳ, ಕಸಬಾ ವಿಜಯಪುರ, ಸವನಹಳ್ಳಿ, ಹೊನಗನಹಳ್ಳಿ, ಹೊನ್ನುಟಗಿ, ಕುಮಟಗಿ ಗ್ರಾಮಗಳ ದೋಣಿ ನದಿ ಪ್ರವಾಹದಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆಹಾನಿ ವೀಕ್ಷಿಸಿ ಜೊತೆಗೆ ರೈತರೊಂದಿಗೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಭಾಗದ 9 ಗ್ರಾಮಗಳಲ್ಲಿ 754 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ತೊಗರಿ ಹಾಗೂ ಮೆಕ್ಕೆಜೋಳ ಬೆಳೆದಿದ್ದು, ತೋಟಗಾರಿಕೆ ಬೆಳೆ ಈರುಳ್ಳಿಯನ್ನು 59 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಹಾನಿಯಾದ ಬೆಳೆಯ ಪ್ರದೇಶದ ಅಂಕಿ ಅಂಶ ಸಂಗ್ರಹಿಸಿ, ಪರಿಹಾರ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರ ಬಾವಿದೊಡ್ಡಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಕೃಷಿ ಇಲಾಖೆ ಅಧಿಕಾರಿಗಳಾದ ಶರಣಗೌಡ, ಮಂಜುನಾಥ ಜಾನಮಟ್ಟಿ, ಜಯಪ್ರದಾ ದಶವಂತ, ರೈತರಾದ ಸುಭಾಷ ತಳಕೇರಿ, ಶ್ರೀಶೈಲ ಬಾವಿಕಟ್ಟಿ, ಬಾಬು ಶಿರಮಗೊಂಡ, ಓಂಕಾರ ನಾವಿ, ಸಂಗಪ್ಪ ಇಂಡಿ ಸೇರಿದಂತೆ ಬಾಧಿತ ಪ್ರದೇಶದ ರೈತರು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.