ಸ್ಲಂ ಬೋರ್ಡ್ ಹಾಗೂ ಆಶ್ರಯ ಬಡಾವಣೆಗೆ ಡೀಸಿ ಭೇಟಿ

| Published : Mar 21 2025, 12:34 AM IST

ಸಾರಾಂಶ

ಶಿರಾ ನಗರದ ಕಲ್ಲುಕೋಟೆಯ ಸ್ಲಂ ಬೋರ್ಡ್ ಹಾಗೂ ಆಶ್ರಯ ಬಡಾವಣೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಶಿರಾ ನಗರದ ಕಲ್ಲುಕೋಟೆಯ ಸ್ಲಂ ಬೋರ್ಡ್ ಹಾಗೂ ಆಶ್ರಯ ಬಡಾವಣೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ 8ಎಕರೆ ಜಾಗದಲ್ಲಿ 1008 ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ 252 ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ಆಶ್ರಯ ಬಡಾವಣೆಯಲ್ಲಿ ಸುಮಾರು 4 ಸಾವಿರ ನಿವೇಶನಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಶಿರಾ ನಗರದ ಕಲ್ಲುಕೋಟೆಯ ಸರ್ವೆ ನಂಬರ್ 100ರ 20 ಎಕರೆ ಜಾಗದಲ್ಲಿ ನಿವೇಶನಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ, ಶಿರಾ ತಾಲೂಕಿನ ಎಮ್ಮೇರಹಳ್ಳಿಯಲ್ಲಿ 90 ಎಕರೆ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿರಾ ತಾಲೂಕಿನ ತಹಸೀಲ್ದಾರ್ ರೇಷ್ಮಾ ಹಾಗೂ ನಗರ ಸಭೆ ಆಯುಕ್ತ ರುದ್ರೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ. ಯೋಗಾನಂದ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.