ಡೆಲ್ಲಿಗೆ ರನ್‌ರೈಸರ್ಸ್‌ ಸವಾಲು

| Published : Mar 30 2025, 03:05 AM IST

ಸಾರಾಂಶ

: ಐಪಿಎಲ್‌ನಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಎದುರಾಗಲಿದೆ.

ವಿಶಾಖಪಟ್ಟಣಂ: ಐಪಿಎಲ್‌ನಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಎದುರಾಗಲಿದೆ. ಮೊದಲ ಪಂದ್ಯದಲ್ಲಿ 286 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದ್ದ ‘ರನ್‌’ರೈಸರ್ಸ್‌, 2ನೇ ಪಂದ್ಯದಲ್ಲಿ ತುಸು ಮಂಕಾಗಿತ್ತು. ಆದರೂ, ತಂಡದ ಬ್ಯಾಟಿಂಗ್‌ ಪಡೆಯನ್ನು ನೋಡಿದಾಗ ಯಾವುದೇ

ಎದುರಾಳಿಗಾದರೂ ಆತಂಕ ಮೂಡಿಯೇ ಮೂಡುತ್ತದೆ. ಅದರಲ್ಲೂ ಆರಂಭಿಕ ಜೋಡಿಯಾದ ಟ್ರ್ಯಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ (ಟ್ರ್ಯಾವಿಷೇಕ್‌) ಅಬ್ಬರಿಸಲು ನಿಂತರೆ, ಎದುರಾಳಿಗಳಿಗೆ ಉಳಿಗಾಲವಿರುವುದಿಲ್ಲ. ಈ ಜೋಡಿಯನ್ನು ಕಟ್ಟಿಹಾಕಲು ಡೆಲ್ಲಿ ತಂಡದಲ್ಲೊಂದು ಅಸ್ತ್ರವಿದೆ. ಅದುವೇ ಮಿಚೆಲ್‌ ಸ್ಟಾರ್ಕ್‌. ಇನ್ನು, ಕಳೆದ ಪಂದ್ಯದಲ್ಲಿ ಲಖನೌ ವಿರುದ್ಧ ಅಶುತೋಷ್‌ ಶರ್ಮಾ ಆರ್ಭಟಿಸಿದ್ದನ್ನು ನೋಡಿದವರಿಗೆ, ಡೆಲ್ಲಿ ಎಷ್ಟು ಅಪಾಯಕಾರಿ ಎನ್ನುವುದು ತಿಳಿದೇ ಇರುತ್ತದೆ. ತಂದೆಯಾದ ಬಳಿಕ ಮೊದಲ ಬಾರಿಗೆ ಕಣಕ್ಕಿಳಿಯಲಿರುವ ಕೆ.ಎಲ್‌.ರಾಹುಲ್‌ ಮೇಲೆಯೂ ಡೆಲ್ಲಿ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌